Sunday 8 January 2012

ಬೆತ್ತಲೆಯ ಕನ್ನಡಿಯಲ್ಲಿ ...

ಅಂದದ ದಿನಗಳು ಬರುವವು ಸದಾ..
ಕಳೆದ ಕ್ಷಣಗಳ ಮರುಚಿಂತನೆ,ಅವಗಾಹನೆ
ಕಣ್ಣಿಗೆ ರಾಚುವ ಸೌಂದರ್ಯ,ಬೆಳವಣಿಗೆ
ಕನ್ನಡಿಯಲಿ ಬೆತ್ತಲೆಯ ಪ್ರತಿಬಿಂಬದ ಹೊಲಸು
ದೇಹ ಬಲಿದಿದೆ,ಸುಖವನ್ನು ಉಂಡಾಗಿದೆ,
ಆದರೂ ಏನೋ ನಮ್ಮ ಮೇಲೆ ನಮಗೆ ಅತ್ಯುಕ್ತತೆ,
ನಾವು ಸುಂದರಪುರುಷರು, ಹೆಣ್ಣುಹಾದರಗಳೇನು ಹೊಸತಲ್ಲ.
ಕಟ್ಟಿಕೊಂಡವಳ ನಲುಮೆಯ ಪ್ರೀತಿಯ ದರ್ಬಾರ್
ಕಡಿಮೆಯಾದಲ್ಲಿ ಬೇಸರ,
ಬೆಳೆದ ಮಕ್ಕಳ ದೇಹ ಕಣ್ಣಿಗೆ ಬೇಸರ
ಬಲಿತ ತೊಡೆಗಳ ಮುಂದೆ ಶೋಕಿ ಮಾಡಲು ಮುಜುಗುರ
ರಾತ್ರಿ ಕಳೆದ ಸುಖವು ಆಗದು ಕಾಮದ ಜ್ವರಕ್ಕೆ
ಮುಗಿಯಿತೇ ಸುಖದ ವ್ಯಭಿಚಾರ ?
ಕಳೆಯಿತು ಜೀವನದ ಲೆಕ್ಕಾಚಾರ
ಮಗ್ಗಿಯಲಿ ನಾನು ದಡ್ಡ, ಹಾಗೆಂದುಕೊಳ್ಳಲು ನಾನ್ಯಾರು ?

1 comment:

  1. ಪಂಚೆ ಸಡಿಲವಾಗಿರುವ ಗಂಡಸರನ್ನು ಬೆತ್ತಲಾಗಿ ನಿಲ್ಲಿಸಿ ಛಾಟಿ ಬೀಸಿರುವ ನಿಮ್ಮ ಪರಿ ಹಾದರ ಮಾಡುವವನು ಮುಟ್ಟಿ ನೋಡಿಕೊಳ್ಳುವಂತಿದೆ.. ಬಹಳ ತೀಕ್ಷ್ಣ ಧಾಟಿಯ ಕವಿತೆ ಮತ್ತು ಪದ ಪ್ರಯೋಗದಲ್ಲಿ ಪಕ್ವತೆ ಇದೆ.. ಮನಮುಟ್ಟುವಂತಹ ಕವಿತೆ..

    ReplyDelete