Sunday, 8 January 2012

ನಾನು ಡುಮ್ಮಿ ಅಂತ ಗೊತ್ತು ನನಗೆ : ಮಾಲಾಶ್ರೀ

ಮಾಲಾಶ್ರೀಯವರ ಜೊತೆ 5 ನಿಮಿಷ ಮಾತನಾಡಬೇಕು ಅಂತ ಅಂದುಕೊಂಡು ಅವರ ಅಪಾಯಿಂಟ್ಮೆಂಟ್ ತೆಗೆದುಕೊಂಡು ಮಾತನಾಡಲು ಶುರುಮಾಡಿದ್ದೆ.
ಅವರ ಹಾಗೂ ನನ್ನ ಮಾತುಕತೆ ಮುಗಿಯುವ ಹೊತ್ತಿಗೆ ಮುಕ್ಕಾಲು ತಾಸು ಕಳೆದಿತ್ತು. ಶಕ್ತಿ ಸಿನಿಮಾದ  ರಿಲೀಸ್ ಟೈಮಲ್ಲಿ ಮಾಲಾಶ್ರೀ ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದರೂ, ಸುಮಾರು ಹೊತ್ತು  ತಮ್ಮ ಜೀವನದ ಬಗ್ಗೆ, ಕನ್ನಡ ಒಂದಕ್ಷರ ಗೊತ್ತಿಲ್ಲದೇ ಕರ್ನಾಟಕಕ್ಕೆ ಬಂದದ್ದು, ರಾಜ್ಕುಮಾರ್ ಫ್ಯಾಮಿಲಿಗೆ ಹತ್ತಿರವಾಗಿದ್ದು, ಚಿ.ಉದಯಶಂಕರ್ರಿಂದ ಕನ್ನಡ  ಬರೆಯಲು, ಓದಲು ಕಲಿತದ್ದು, ಮಾಡಿದ ಸಿನಿಮಾಗಳು, ಕನಸಿನ ರಾಣಿ ಪಟ್ಟದಿಂದ, ಲೇಡಿ ಬಾಂಡ್ ಪಟ್ಟಕ್ಕೆ ಜಿಗಿದದ್ದು, ಈ ನಡುವೆ ಮದುವೆ, ಮಕ್ಕಳು, ಸಂಸಾರ ಎಲ್ಲದರ ನಡುವೆ ಮತ್ತೇ ಸಿನಿಮಾ..! ಮದುವೆಯಾದ ಮೇಲೆ ರಿಸ್ಕು ತೆಗೆದುಕೊಳ್ಳಬಾರದು ಅಂತ ಹೇಳುತ್ತಾರೆ, ಆದರೆ ಮಾಲಾಶ್ರೀ ರಿಸ್ಕು ತೆಗೆದುಕೊಳ್ಳೊದ್ರಲ್ಲಿ ತುಂಬ ಖುಷಿ ಇದೆ ಅಂತ ಹೇಳುತ್ತಾರೆ. ನಾನು ದಪ್ಪ ಇದೀನಿ ಅಂತ ನನಗೆ ಗೊತ್ತು..ಡಯಟ್-ಗಿಯಟ್ ಮಾಡೋದು ತುಂಬಾ ಕಡಿಮೆ. ತಿನ್ನೊದಂದ್ರೆ ತುಂಬಾ ಇಷ್ಟ. ಆದರೂ ಸಿನಿಮಾಗೊಸ್ಕರ ತಿನ್ನೊದನ್ನು ಕಡಿಮೆ ಮಾಡಿದೀನಿ..ಸಿನಿಮಾ ಮುಗಿದ ಮೇಲೆ ಮತ್ತೇ ತಿನ್ನಲಿಕ್ಕೆ ಪ್ರಾರಂಭಿಸ್ತೀನಿ..'
ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದಕ್ಕಿಂತ ಹೆಚ್ಚಾಗಿ ನಕ್ಕಿದ್ದೆ ಜಾಸ್ತಿ.. ಅವರ ನಗುವಿನಲ್ಲೂ ಅನುಭವದ ಬುತ್ತಿ...  `ಶಕ್ತಿ' ಸಿನಿಮಾದ ಬಗ್ಗೆ ಮಾಲಾಶ್ರೀ ಮಾತನಾಡಿದ್ದು ಹೀಗಿತ್ತು....

`ಚಾಮುಂಡಿ', `ದುರ್ಗಾ,  `ಕನ್ನಡದ ಕಿರಣ್ಬೇಡಿ' ಹೀಗೆ ಯಶಸ್ವಿ ಕನ್ನಡ ಚಿತ್ರಗಳಲ್ಲಿ `ಲೇಡಿಬಾಂಡ್ ಆ್ಯಕ್ಷನ್ ಪಾತ್ರಗಳ ಮೂಲಕ ಅಭಿನಯಿಸಿ ಮನಗೆದ್ದ `ಕನಸಿನ ರಾಣಿ' ಮಾಲಾಶ್ರೀ ಅವರು ಈಗ ಮತ್ತೊಮ್ಮೆ ರಾಮುವಿನ `ಶಕ್ತಿ'ಯಾಗಿ ಹೊರಹೊಮ್ಮುತ್ತಿದ್ದಾರೆ. ಮಾಲಾಶ್ರೀಯವರ `ಕನಸಿನ ಪರ್ವ ಮುಗಿದು `ಆ್ಯಕ್ಷನ್ ಮೇನಿಯಾ' ಪ್ರಾರಂಭವಾಗಿ ಈಗಾಗಲೇ ಒಂದೂವರೆ ದಶಕವಾಗಿದೆ. ಇಂದಿಗೂ ಕನ್ನಡದಲ್ಲಿ ಆ್ಯಕ್ಷನ್ ಹಿರೋಯಿನ್ ಅಂದರೆ ಅದು ಮಾಲಾಶ್ರೀಯೇ. ಎಸ್.ಪಿ. ಭಾರ್ಗವಿ, ಲೇಡಿ ಕಮಿಷನರ್ನಿಂದ ಹಿಡಿದು ಇಂದಿನ `ಶಕ್ತಿ'ವರೆಗೆ ಮಾಲಾಶ್ರೀಯವರು ಮಾಡಿದ ಎಲ್ಲ ರೋಲ್ಗಳನ್ನೂ ನೋಡಿದರೆ ಗಂಡೆದೆಗಳು ಕೂಡ ನಾಚಿಸುವಂತಿದೆ. ಕನ್ನಡದ `ಲೇಡಿಬಾಂಡ್ ಚಿತ್ರಗಳಲ್ಲಿ ಮಾಲಾಶ್ರೀ ಎಂದೆಂದಿಗೂ ದೊಡ್ಡ ಮೈಲಿಗಲ್ಲು.

ಡಬ್ಬಿಂಗ್ ಮಾಡಿದ್ದೇ ದೊಡ್ಡ ಸಾಹಸ : ಮಾಲಾಶ್ರೀ

 ಶಕ್ತಿಯ ಪಾತ್ರದ ಬಗ್ಗೆ ತಿಳಿಸಿ?ಈ ಸಿನಿಮಾವನ್ನು `ಡಿಫರೆಂಟ್ ಅಂತ ಹೇಳೋದೆ ಡಿಫರೆಂಟ್! ...ಹಹಹ.... ತುಂಬಾ ಚೆನ್ನಾಗಿತ್ತು ನಾನು ನಿರ್ವಹಿಸಿದ ಪಾತ್ರ. ನಾವು ಅಂದುಕೊಂಡಿರಲಿಲ್ಲ ಈ ಸಿನಿಮಾದ ಎಳೆ ಇಷ್ಟು ಬೇಗ ಸಿನಿಮಾ ಆಗುತ್ತೆ ಅಂತ. ಇವತ್ತಿನ ಟೈಮಲ್ಲಿ ಗಾಂಧಿಮಂತ್ರ ಜಪಿಸುತ್ತಾ ಕೂತರೆ ಅನ್ಯಾಯದ ವಿರುದ್ಧ ಹೋರಾಡೋಕೆ ಖಂಡಿತ ಆಗೋಲ್ಲ. ಏನಿದ್ದರೂ ಸುಭಾಶ್ಚಂದ್ರ ಬೋಸ್ ಪಾಲಿಸಿ. ದಂಡಂದಶಗುಣಂ ಅಂತ ಜಪಿಸುವುದೇ ಶಕ್ತಿಯ ಮಂತ್ರ. ಮೋಸ, ಭ್ರಷ್ಟಾಚಾರ, ಅನ್ಯಾಯ ಮಾಡುವರನ್ನು ಚೆನ್ನಾಗಿ ಬಾರಿಸುತ್ತ್ತಿರುತ್ತಾಳೆ. ನನ್ನ ಡೈಲಾಗ್ಗಳು ಕೂಡ ತುಂಬಾ ಚೆನ್ನಾಗಿವೆ. ಒಂದು ಡೈಲಾಗೆ ಹೇಳೋದಾದ್ರೆ `ನಮ್ಮ ಬೆವರಿನಿಂದ ಅನ್ನವನ್ನು ಬೇಯಿಸಿಕೊಳ್ಳಬೇಕು,, ಬೇರೆಯವರ ರಕ್ತದಿಂದಲ್ಲ!' ಈ ತರಹದ ಪವರ್ಫುಲ್ ಡೈಲಾಗ್ಸ್ಗಳು ಬಹಳಷ್ಟಿವೆ. ಶಕ್ತಿಯ ಕಥೆಯಲ್ಲೆ ಅಷ್ಟು ಪವರ್ ಇದೆ. ನನ್ನ ಪಾತ್ರವನ್ನು ಹೇಳುವುದಕ್ಕಿಂತ ಚಿತ್ರದಲ್ಲಿ ನೋಡಿ ಆನಂದಿಸಬೇಕು.
`ಶಕ್ತಿ' ಸಿನಿಮಾದ ಪೂರ್ವತಯಾರಿ ಹೇಗಿತ್ತು? ಪ್ರತಿ ಸಿನಿಮಾ ಮಾಡುವಾಗಲೂ ನನ್ನ ಮೊದಲ ತಯಾರಿ ನನ್ನ ವೇಟನ್ನ ಕಡಿಮೆ ಮಾಡೋದು. ನನಗೆ ಒಳ್ಳೆ ಊಟ ಮಾಡೋದು ಅಂದ್ರೆ ತುಂಬಾ ಇಷ್ಟ. ಆದರೆ ಏನು ಸಿನಿಮಾ ಮಾಡೋ ಮುಂಚೆ ಸ್ವಲ್ಪ ಡಯಟಿಂಗ್ ಮಾಡ್ತೀನಿ. ಡೇಲಿ ಮಾಡೋ ವಕರ್ೌಟ್ಗಿಂತ 2-3 ತಾಸು ಜಾಸ್ತಿನೇ ವ್ಯಾಯಾಮ ಮಾಡ್ತೀನಿ. ಆದರೆ ಈ ಬಾರಿ ಇದೇ ರೀತಿ ದೇಹಕ್ಕೆ ವ್ಯಾಯಾಮ ಕೊಟ್ಟಷ್ಟೇ ನನ್ನ ಧ್ವನಿಗೂ ವ್ಯಾಯಾಮ ಕೊಟ್ಟೆ. ನನ್ನ ವಾಯ್ಸ್ ಮಾಡುಲೇಷನ್ ಪ್ರಾಕ್ಟೀಸ್ ಮಾಡಿದೆ. ಏಕೆಂದರೆ  ಶಕ್ತಿ ನಿಜವಾಗ್ಲೂ ವೆರಿ ಪವರ್ಫುಲ್ ಕ್ಯಾರೆಕ್ಟರ್! ಅವಳು ತುಂಬಾ ಜೋರಾಗಿ ಮಾತನಾಡುತ್ತಾಳೆ. ಮಾತಿನಲ್ಲೆ ಎದುರಿಗಿದ್ದ ವಿಲನ್ಗಳ ಗುಂಡಿಗೆಯನ್ನು ಅದರುಸುತ್ತಾಳೆ. ಹಾಗಾಗಿ ನನ್ನ ಧ್ವನಿಗೆ ಸ್ವಲ್ಪ ಎಕ್ಸರ್ಸೈಜ್ ಕೊಟ್ಟೆ.

ಚಿತ್ರದಲ್ಲಿ ಹೊಸತನವೇನಾದರೂ ಇದೆಯಾ?
ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದೀನಿ. ಬಹಳಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೀನಿ. ನನ್ನ ಯಾವ ಪಾತ್ರಕ್ಕೂ ಇದುವರೆಗೂ  ಡಬ್ಬಿಂಗ್ ಮಾಡಿರಲಿಲ್ಲ. ಆರಂಭದಲ್ಲಿ ಕನ್ನಡ ಗೊತ್ತಿರಲಿಲ್ಲ ಅನ್ನುವುದಕ್ಕಿಂತ ನನ್ನ ಧ್ವನಿ ನಾನು ಮಾಡುತ್ತಿದ್ದ ಪಾತ್ರಕ್ಕೆ ಸೂಟ್ ಆಗ್ತಿರಲಿಲ್ಲ. ಒಳ್ಳೆ ಮಗು ಥರ ಇತ್ತು ನನ್ನ ವಾಯ್ಸ್! ಹಾಗಾಗಿ ಡಬ್ಬಿಂಗ್ ಮಾಡೋಕೆ ಆಗ್ತಿರಲಿಲ್ಲ. ಆದರೆ ಈ ಸಿನಿಮಾ ಮಾಡುವಾಗ ನನ್ನ ಧ್ವನಿ ಈಗ ಸ್ವಲ್ಪ ಬದಲಾವಣೆ ಆಗಿತ್ತು. ಡಬ್ಬಿಂಗ್ ಮಾಡಬಹುದು ಅಂತ ಅನಿಸಿತ್ತು. ಇಂದು ಕನ್ನಡವನ್ನು ಸ್ಪಷ್ಟವಾಗಿ ಓದುತ್ತೇನೆ, ಮಾತಾಡಬಲ್ಲೇ, ಕನ್ನಡವನ್ನ ಚೆನ್ನಾಗಿ ಬರೆಯಬಲ್ಲೆ. ಹಾಗಾಗಿ ರಾಮುರವರೇ ಈ ಸಿನಿಮಾ ಮಾಡುವಾಗ ಹೇಳಿದ್ರು. ಈ ಪಾತ್ರಕ್ಕೆ ನೀನೇ ಡಬ್ ಮಾಡು. ನಿನಗೆ ಈ ಪಾತ್ರಕ್ಕೆ ಬೇಕಾದ ವಾಯ್ಸ್ ಈಗಿದೆ, ಡಬ್ಬಿಂಗ್ ಮಾಡು ಅಂತ ಸಪೆೋಟರ್್ ಮಾಡಿದ್ರು. ಡಬ್ಬಿಂಗ್ ಮಾಡೋಕೆ ಒಪ್ಕೊಂಡೆೆ. ನಂಗೊತ್ತಿರಲಿಲ್ಲ ಡಬ್ಬಿಂಗ್ ಇಷ್ಟು ಕಷ್ಟ ಅಂತ. ಮೊದಲೆಲ್ಲ ನನ್ನ ಪಾತ್ರಕ್ಕೆ ಸರ್ವಮಂಗಳ ಡಬ್ಬಿಂಗ್ ಮಾಡ್ತಿದ್ರು, ಅವರ ನಂತರ ಶಶಿಕಲಾ ದನಿ ಕೊಟ್ರು. ಸರ್ವಮಂಗಳ ಡಬ್ಬಿಂಗ್ ಮಾಡೋವಾಗ ನಾನು ಸ್ಟುಡಿಯೋದಲ್ಲಿ ಕುಳಿತು ಅವರು ಡಬ್ಬಿಂಗ್ ಮಾಡೋದನ್ನು ನೋಡುತ್ತಿದ್ದೆ.  ತುಂಬಾ ಕಷ್ಟಪಟ್ಟು ಡಬ್ಬಿಂಗ್ ಮಾಡೋರು. ಆವಾಗಲೇ ಗೊತ್ತಾಗಿದ್ದು ಆಯಾ ಪಾತ್ರಗಳಿಗೆ ಡಬ್ಬಿಂಗ್ ಎಷ್ಟು ಇಂಪಾಟರ್ೆಂಟ್ ಅಂತ. ನಿಜವಾಗ್ಲೂ ಕನ್ನಡದಲ್ಲಿ ಇಷ್ಟು ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿದ್ದುದರ ಹಿಂದೆ ಇವರಿಬ್ಬರ ಡಬ್ಬಿಂಗ್ ಎಫಟರ್್ ರಿಯಲಿ ಗ್ರೇಟ್ ಅಂತ ಅನಿಸುತ್ತೆ. ಈ ಸಿನಿಮಾದಲ್ಲಿ ಡಬ್ಬಿಂಗ್ ಮಾಡುವ ನನ್ನ ಬಹುದಿನದ ಆಸೆ ಈಡೇರಿದೆ. ಡಬ್ಬಿಂಗ್  ಮಾಡೋಕೆ  ನಮ್ ಡೈರೆಕ್ಟ್ರು ತುಂಬಾ ಸಹಾಯ ಮಾಡಿದ್ದಾರೆ.

ಚಿತ್ರದ ನಿರ್ಮಾಣದಲ್ಲಿ ನಿಮ್ಮ ಯಜಮಾನ್ರು ರಾಮುರವರ ಸಹಕಾರ ಹೇಗಿತ್ತು?
ನಾನೊಬ್ಬ ಕಲಾವಿದೆ, ಅವರು ನಿಮರ್ಾಪಕರು ಅನ್ನುವ ರೀತಿಯಲ್ಲಿ ಹೇಳೊದಾದ್ರೆ, ರಾಮು ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಪ್ಯಾಷನ್ ಇರುವಂತಹ ವ್ಯಕ್ತಿ. ನಮ್ಮ ಕನ್ನಡ ಸಿನಿಮಾಗಳು ಯಾವ ಭಾಷೆಯ ಸಿನಿಮಾಗಳಿಗಿಂತ ಕಡಿಮೆ ಇಲ್ಲ ಅನ್ನುವ ಹಾಗೆ ಸಿನಿಮಾ ನಿಮರ್ಾಣ ಮಾಡುವ ಕನಸು ಕಾಣುತ್ತಾರೆ. ಶೂಟಿಂಗ್ನಲ್ಲಿ ಏನೇ ಪ್ರಾಬ್ಲಂ ಆದ್ರೂ ಸಹ ತುಂಬಾ ಈಜಿಯಾಗಿ ಸಾಲ್ವ್ ಮಾಡುತ್ತಾರೆ. `ಶಕ್ತಿ' ಸಿನಿಮಾ ಕೂಡ ತುಂಬಾ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಖಂಡಿತ ಈ ಸಿನಿಮಾ ಬಂದ ಮೇಲೆ ಥಿಯೇಟರ್ನ ಮುಂದೆ ರಿಪೀಟ್ ಆಡಿಯನ್ಸ್ ಜಾಸ್ತಿ ಇರುತ್ತಾರೆ ಅನ್ನುವ ನಂಬಿಕೆ ಇದೆ.

ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಆ್ಯಕ್ಷನ್ ಸಿನಿಮಾಗಳಲ್ಲಿ ಅಭಿನಯಿಸಿದ್ದೀರಿ? `ಶಕ್ತಿ' ಹಿಂದಿನ ಸಿನಿಮಾಗಳಿಗಿಂತ ಹೇಗೆ ವಿಭಿನ್ನ?ಈ ಹಿಂದೆ ನಾನು ಮಾಡಿದ ಎಲ್ಲ ಸಿನಿಮಾಗಳು ಒಂದು ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಡಿದ ಕಥೆಗಳೇ. ಆದರೆ ಶಕ್ತಿ ಸಿನಿಮಾವನ್ನು ಹಿಂದಿನ ಸಿನಿಮಾಕ್ಕೆ ಕಂಪೇರ್ ಮಾಡಿ ನೋಡಿದಾಗ, ಶಕ್ತಿಯ ಇಂಟ್ರಡೋಕ್ಷನ್, ಫೈಟ್, ಮೇಕಿಂಗ್ ಕಂಪ್ಲೀಟ್ಲಿ  ಹೊಸತಾಗಿದೆ. ಖಂಡಿತ ಹಿಂದಿನ ಸಿನಿಮಾಗಳಂತೆ ಇಲ್ಲ. ಶಕ್ತಿ ಕಮಷರ್ಿಯಲ್ ಆಗಿ ಇನ್ನಷ್ಟು ಮನಸ್ಸಿಗೆ ಖುಷಿ ಕೊಡುತ್ತೆ. ಆ್ಯಕ್ಷನ್ ಫಿಲಂ ಇಷ್ಟಪಡುವವರಿಗೆ ಇದು ದೊಡ್ಡ ಹಬ್ಬವೇ ಸರಿ.

ಆ್ಯಕ್ಷನ್ ಸಿನಿಮಾ ಅಂದ ಮೇಲೆ ಸಣ್ಣಪುಟ್ಟ ಗಾಯ, ಏಟು ಸಹಜ. ನೀವು ಅಪಾಯಕಾರಿ ಸ್ಟಂಟ್ಗಳನ್ನು ಮಾಡುವಾಗ ಅಂತಹ ಪ್ರಸಂಗಗಳೇನಾದರೂ?ಇದುವರೆಗೂ ಅಂತಹ ಪ್ರಾಬ್ಲೇಂ ಆ್ಯಕ್ಷನ್ ಸೀನ್ ಮಾಡೋವಾಗ ಆಗಿಲ್ಲ. ಪ್ರತಿ ಆ್ಯಕ್ಷನ್ ಸಿನಿಮಾ ಮಾಡುವಾಗಲೂ ತುಂಬಾ ಸೆಫ್ಟಿ ಮೆಜರ್ ಇದ್ದೆ ಇರುತ್ತೆ. ಕೆಲವೊಂದು ಸಲ ನಾನು ಡ್ಯೂಪ್ ಇಲ್ಲದೆ ಮಾಡೋಕೆ ರೆಡಿ ಇದ್ರೂ ಸಹ ಅವರು ಒಪ್ಪುತ್ತಿರಲಿಲ್ಲ. ಫೈಟ್ಮಾಸ್ಟ್ರುಗಳು ನನ್ನ ಬಗ್ಗೆ ತುಂಬಾ ಕೇರ್ ತಗೊಂಡು ಫೈಟ್ ಸೀನ್ಗಳನ್ನು ಡಿಸೈನ್ ಮಾಡೋರು. ನನ್ನ ಬಹಳಷ್ಟು ಸಿನಿಮಾಗಳಿಗೆ ಥ್ರಿಲ್ಲರ್ ಮಂಜುಅವರೇ `ಆ್ಯಕ್ಷನ್ ಹೇಳಿದ್ದು. `ಶಕ್ತಿ' ಸಿನಿಮಾದಲ್ಲಿ  4-5 ಫೈಟ್ಮಾಸ್ಟರ್ಗಳು ತುಂಬಾ ರಿಸ್ಕ್ ಇದ್ರೂ ಸಹ ತುಂಬಾ ಸಪೋರ್ಟರ್ ಮಾಡಿ ಈಜಿಯಾಗಿ ಮಾಡಿಕೊಟ್ರು. ನಾನು ಡ್ರೈವಿಂಗ್ನಲ್ಲಿ ಪರಫೆಕ್ಟ್ ಇದ್ರೂ ಸಹ ಚೇಸಿಂಗ್ ಸೀನಲ್ಲಿ ತುಂಬಾ ಸೆಫ್ಟಿಯಿಂದ ಶೂಟ್ ಮಾಡಿಸೋರು. ರವಿವರ್ಮ, ರಾಮ್ಲಕ್ಷ್ಮಣ್, ಪಳನಿರಾಜ್ ಇನ್ನು ಹಲವರು ಶಕ್ತಿಗಾಗಿ ಫೈಟ್ ಮಾಡಿಸಿದ್ದಾರೆ. 




No comments:

Post a Comment