ಮನಸ್ಸಿನ ಭಾವನೆಗಳು ಒಮ್ಮೇಲೆ ಪುಟಿದೆದ್ದು ರಕ್ತಾಕ್ಷರದಲಿ
ಬರೆದಿಟ್ಟ ಕ್ಷಣ
ಧಗಧಗ ಉರಿಯುತ್ತಿರುವ ಬಿರುಕೆದ್ದ ಧರೆಯಲಿ ಪನ್ನೀರನ್ನು
ಎರಚಿದ ಆ ಕ್ಷಣ
ಕಟ್ಟಡವಿಯಲಿ ಕಂಗೆಟ್ಟು ದಂಗಾಗಿ ಮಂಕಾದವನಿಗೆ ಬೆಳಕಿನ
ದೀವಿಗೆಯನು ಕಂಡಾಗಿನ ಆ ಕ್ಷಣ..!
ಎಳೆಯ ಮನಸ್ಸಿನ ಚಿಗುರನ್ನು ಕಿತ್ತೆಸೆದು, ಭಾವನೆಗಳು ಮೇಲೇಳದೇ
ಮರೀಚಿಕೆಯಾದ ಆ ಕ್ಷಣ
ಎಳೆಯ ಮನಸ್ಸಿನ ಚಿಗುರನು ಕಿತ್ತೆಸೆದು ಭಾವನೆಗಳು ಮೇಲೇಳದೇ
ಮರೀಚಿಕೆಯಾದ ಆ ಕ್ಷಣ..
ನಾನು ನನದೆಂಬ ಅರಿಷಡ್ವಗಗಳ ಬಲೆಯೊಳಗೆ ಸಿಲುಕಿ ಹೊರಬರಲಾರದೇ
ಹುದುಗಿ ಹುಳುವಾದ ಆ ಕ್ಷಣ
ತನ್ನ ಮಕ್ಕಳ ಏಳಿಗೆಗಾಗಿ ಗಂಧದಂತೆ ತನ್ನ ದೇಹವನ್ನು ತೆಯ್ದು ಕೊನೆಗೂ
ಸುಖ ಕಂಡ ತಾಯಿಯ ಆ ಕ್ಷಣ
ಅತ್ಯಾಚಾರದ ಫಲದ ಪಿಂಡವನ್ನು ಹೊತ್ತುಕೊಂಡು ಭವಿಷ್ಯದ ಬೆಳಕು ಕಾಣದ
ನಿಗಱತಿಕಳು ಅನುಭವಿಸುವ ಆ ಕ್ಷಣ
No comments:
Post a Comment