Tuesday, 30 July 2013

`ಸರ್ವಸ್ವ' ರಂಗದೊಳಗೆ ರಂಗಸಜ್ಜಿಕೆ


ಆತ್ಮೀಯ ಸ್ನೇಹಿತರೇ,

ಕನ್ನಡ ನಾಡಿನ ಹೆಮ್ಮೆಯ ಲೇಖಕಿ ವೈದೇಹಿಯವರ ಕಾವ್ಯಮಾಲಿಕೆಯನ್ನಿಟ್ಟುಕೊಂಡು `ವ್ಯಾನಿಟಿ ಬ್ಯಾಗ್' ಅನ್ನುವ ನಾಟಕ ಮಾಡಲಾಗಿದ್ದು, ನಾಟಕ ಕನ್ನಡ ರಂಗಭೂಮಿಯಲ್ಲಿ ಅಪರೂಪದ ಪ್ರಯೋಗವಾಗಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗಿದೆ. ಸಂಚಾರಿ ಥಿಯೇಟರ್ನವರು ಅಭಿನಯಿಸಿರುವ `ವ್ಯಾನಿಟಿ ಬ್ಯಾಗ್' ನಾಟಕಕ್ಕೆ  ರಂಗಕ ರ್ಮಿ ಮಂಗಳಾ.ಎನ್ ಅವರ ದಕ್ಷ ನಿರ್ದೇಶನವಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿರುವ `ವ್ಯಾನಿಟಿ ಬ್ಯಾಗ್' ಈಗ ಬೆಂಗಳೂರಿನ ರಂಗಪ್ರಿಯರಿಗಾಗಿ ಹನುಮಂತರಂಗದ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನವನ್ನು `ಸರ್ವಸ್ವ' ತಂಡವು ಹಮ್ಮಿಕೊಂಡಿದೆ.



`ಸರ್ವಸ್ವ' ಸಂಸ್ಥೆಯ ಉದ್ಘಾಟನೆ

ನಾಟಕ ಪ್ರದರ್ಶನದ ಜೊತೆಗೆ `ಸರ್ವಸ್ವ' ಅನ್ನುವ ರಂಗತಂಡದ ಸಂಸ್ಥೆಯು ಕೂಡ ಉದ್ಘಾಟನೆಯಾಗಲಿದೆ. ರಂಗಭೂಮಿ, ನೃತ್ಯ, ಸಂಗೀತ, ಸಿನಿಮಾ ಇನ್ನು ಹಲವು ಕಲಾ ಮಾಧ್ಯಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಮೂಲಕ ಸಾಂಸ್ಕೃತಿಕ ಜಗತ್ತಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು, ನಾಟಕಗಳನ್ನು ಮಾಡುವ ಅಪೂರ್ವ ಯೋಜನೆಗಳೊಂದಿಗೆ `ಸರ್ವಸ್ವ' ತಂಡವು  ಪ್ರಾರಂಭವಾಗುತ್ತಿದೆ. ಈಗಾಗಲೇ ರಂಗಭೂಮಿ, ನೃತ್ಯ ಇನ್ನು ಹಲವು ಮನರಂಜನಾ ಮಾಧ್ಯಮಗಳಲ್ಲಿ ಕೆಲಸ ಮಾಡಿ, ನೆಲದಲ್ಲಿ ಅಲ್ಪಸ್ವಲ್ಪ ಕೃಷಿ ಮಾಡಿ, ಅನುಭವ ಪಡೆದ ಸಮಾನ ಮನಸ್ಕರ ತಂಡವು `ಸರ್ವಸ್ವ'ದಲ್ಲಿ ಸದಸ್ಯರಾಗಿದ್ದಾರೆಒಟ್ಟಾರೆಯಾಗಿ ಕಲಾಮಾಧ್ಯಮದ ಎಲ್ಲ ವಿಭಾಗಗಳಲ್ಲಿ ಎಷ್ಟು ಸಕ್ರೀಯವಾಗಿ ದುಡಿಯಲಿಕ್ಕೆ ಸಾಧ್ಯವಾಗುತ್ತೋ ಅಷ್ಟು ದುಡಿಯುವುದು ತಂಡದ ಪರಮ ಗುರಿ. ಸಂಸ್ಥೆಯು ಒಳ್ಳೆಯ ಉದ್ದೇಶದೊಂದಿಗೆ ಸಹೃದಯವಾಗಿ ದುಡಿಯುವ ಮನಸ್ಸುಗಳು, ನಮ್ಮ ಕೆಲಸವನ್ನು ಬೆಂಬಲಿಸುವ ರಂಗಪ್ರಿಯರ ಸಹಕಾರದೊಂದಿಗೆ, ರಂಗಭೂಮಿಯ ಹಿರಿಯರ ಆಶೀರ್ವಾದ, ಸಲಹೆ ಸೂಚನೆಗಳೊಂದಿಗೆ ಉದ್ಘಾಟನೆಯಾಗುತ್ತಿದೆ.

ದಿನದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸಂಗೀತ ನಿರ್ದೇಶಕರು, ಗೀತರಚನೆಕಾರರು, ಆಗಿರುವ ಕೆ.ಕಲ್ಯಾಣ್, ಸಂಚಾರಿ ರಂಗತಂಡದ ಮುಖ್ಯಸ್ಥೆಯಾಗಿರುವ ಎನ್.ಮಂಗಳಾ ಹಾಗೂ ಉದ್ಯಮಿಗಳಾದ ಎಂ.ಗೋಪಾಲಕೃಷ್ಣ ಸೋಮಯಾಜಿಯವರು ಭಾಗವಹಿಸಲಿದ್ದಾರೆ. `ಸಂಚಾರಿ' ಹಾಗೂ `ಸರ್ವಸ್ವ' ತಂಡದ ಎಲ್ಲ ಸದಸ್ಯರು ಸೇರಲಿದ್ದಾರೆ. ಕ್ಷಣಗಳಲ್ಲಿ ಸ್ನೇಹಿತರು, ಹಿತೈಷಿಗಳು ಆದಂತಹ ತಾವೆಲ್ಲರೂ ನಮ್ಮೊಂದಿಗೆ ಭಾಗಿಯಾದರೆ ತುಂಬಾ ಚೆನ್ನ ಎಂಬುದು ನಮ್ಮ ಅರಿಕೆ.

ದಿನಾಂಕ : 03, ಆಗಸ್ಟ್  2013,
 ಸಮಯ ಸಾಯಂಕಾಲ 6.30,
 ಕೆ. ಹೆಚ್. ಕಲಾಸೌಧ, ಹನುಮಂತನಗರ

ಕಾರ್ಯಕ್ರಮದಲ್ಲಿ ತಾವುಗಳು ಭಾಗವಹಿಸಲಿಕ್ಕೆ, ನಾಟಕವನ್ನು ನೋಡಲಿಕ್ಕೆ, ಟಿಕೇಟ್ಗಳಿಗಾಗಿ ಹಾಗೂ ಇನ್ನಿತರ ಮಾಹಿತಿಗಾಗಿ `ಸರ್ವಸ್ವ' ತಂಡದ ಸಂಸ್ಥಾಪಕರಾಗಿರುವ ನಾಗರಾಜ ಸೋಮಯಾಜಿಯವರನ್ನು ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

ಮೊ: 9986474787, 9880046769



`ಸರ್ವಸ್ವ' ಪರವಾಗಿ


No comments:

Post a Comment