ಸಂಗೀತ ಉಸಿರನ್ನು ಗಟ್ಟಿಯಾಗಿ ಹಿಡಿದುಕೊಂಡು, ಅದನ್ನು ಮುಂದಿನ ತಲೆಮಾರಿನವರೆಗೆ ಕೊಂಡೊಯ್ಯುವ, ಆ ಮೂಲಕ ಸಾಧನೆ ಮಾಡುವ ನಿಟ್ಟಿನಲ್ಲಿ `ಸು'ಮ್ಯೂಸಿಕ್ ಎಂಬ ಅಪ್ಪಟ ದೇಸಿ ಬ್ಯಾಂಡ್ ಪ್ರಾರಂಭವಾಗಿದೆ. ಈ ಬ್ಯಾಂಡ್ಗೆ ಗಾನಕೋಗಿಲೆ ಕಸ್ತೂರಿ ಶಂಕರ್ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದವಿದೆ. ಉಮೇಶ್, ಉಷಾ ಉಮೇಶ್ ಹಾಗೂ ಶ್ರೀದೇವಿ ಕುಲೆನೂರ್ ಈ ಬ್ಯಾಂಡ್ನ ಅಡಿಪಾಯಗಳು. ಹತ್ತಾರು ಯೋಜನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು, ಸಂಗೀತ ಸಾಧನೆಯ ಕಡೆಗೆ ಮುನ್ನುಗ್ಗುತ್ತಿದೆ ಈ ತಂಡ.
ಕರ್ನಾಟಕ ಸಂಗೀತ, ಕನ್ನಡ ಹಾಡು, ಸಾಹಿತ್ಯ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂದಿಗೂ ಸಂಗೀತಕ್ಕೆ ಅದರದ್ದೇ ಆದ ನೆಲಘಟ್ಟಿನಲ್ಲಿ ಒಳ್ಳೆಯ ಅಡಿಪಾಯದಿಂದ ಕಂಗೊಳಿಸುತ್ತಿದೆ. ಇದಕ್ಕೆ ನೂರಾರು ಕಾರಣಗಳಿವೆ. ಅದರಲ್ಲಿ ಒಂದು ಕಾರಣವನ್ನು ಹೇಳುವುದಾದರೆ, ಸಂಗೀತ ಪರಂಪರೆಯನ್ನು ತಮ್ಮ ತನು, ಮನದಲ್ಲಿ ಉಳಿಸಿಕೊಂಡು ಅದರಲ್ಲೇ ದೊಡ್ಡ ಸಾಧನೆ ಮಾಡಿ, ಹತ್ತಾರು ಜನರಿಗೆ ಧಾರೆ ಎರೆದು, ಸಂಗೀತ ಪ್ರಿಯರಿಗೆ ರಸಸಂಜೆ ಮಾಡುತ್ತಾ ಗಾನ ಸರಸ್ವತಿಯ ಉತ್ತರಾಧಿಕಾರಿಗಳಾಗಿ ಇಂದಿಗೂ ಅದೆಷ್ಟೋ ಮೇರು ಚೇತನಗಳು ಎಲೆಮರೆ ಪ್ರಯತ್ನವನ್ನು ಮಾಡುತ್ತಿವೆ. ಇಂತಹ ಸಂಗೀತ ಅಭಿಚಾರಕರಲ್ಲಿ ಹಿರಿಯ ಹಿನ್ನೆಲೆ ಗಾಯಕಿ ಶ್ರೀಮತಿ ಕಸ್ತೂರಿ ಶಂಕರ್ ಕೂಡ ಒಬ್ಬರು.
ಐದು ದಶಕಗಳಿಂದ ಸಂಗೀತ ಸಾಧನೆಯಲ್ಲಿ ತೊಡಗಿರುವ ಕಸ್ತೂರಿ ಶಂಕರ್ `ಗಾನ ಕೋಗಿಲೆ' ಅಂತ ಗುರುತಿಸಿಕೊಂಡವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಕರ್ನಾಟಕದ ಜನಪ್ರಿಯ ಹಾರ್ಮೋನಿಯಂ ವಾದಕರಾಗಿದ್ದ ದಿವಂಗತ ವಿದ್ವಾನ್ ಅರುಣಾಚಲಪ್ಪರ ಸೊಸೆ ಕೂಡ ಹೌದು. ಹಾಗಾಗಿ ಸಂಗೀತದ ಪರಂಪರೆ ಇವರ ಗಾನ ಸರಸ್ವತಿಯ ಸೇವೆಗೆ ದೊಡ್ಡ ಆಸರೆಯಾಗಿತ್ತು. ಕನ್ನಡ ಸಿನಿಮಾ ಸಂಗೀತದಲ್ಲಿ ಕಸ್ತೂರಿ ಶಂಕರ್ಗೆ ಅವರದ್ದೇ ಆದ ವಿಶಿಷ್ಟ ಸ್ಥಾನವಿದೆ. ಇಂತಹ ಹಿರಿಯ ಸಂಗೀತ ಸಾಧಕರ ಮಾರ್ಗದರ್ಶನದಲ್ಲಿ `ಸುಮ್ಯೂಸಿಕ್' ಅನ್ನುವ ಬ್ಯಾಂಡ್ ಪ್ರಾರಂಭವಾಗಿದೆ. ಈ ಸಂಗೀತದ ಬ್ಯಾಂಡ್ ಒಳ್ಳೆಯ ಧ್ಯೇಯೋದ್ದೇಶಗಳನ್ನು ಹೊಂದಿದೆ. ಒಣಛಿ ಚಿ ಠಿಚಿಠಟಿ, ಆಠಟಿ'ಣ ಒಚಿಞಜ ಣ ಚಿ ಈಚಿಠಟಿ, ಘಜ'ಡಿಜ ಖಗಒಗಖಅ ಕಡಿಜಜಟಿಣಟಿರ ಣಜ ಟಣಛಿಚಿಟ ಒಚಿರಛಿ ಇದು ಸುಮ್ಯೂಸಿಕ್ನ ಮೂಲಮಂತ್ರ. ಈ ಬ್ಯಾಂಡ್ನ ಹಿಂದೆ ಮೂವರು ವ್ಯಕ್ತಿಗಳು ಸಿಗುತ್ತಾರೆ. ಮೂವರು ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ತೊಡಗಿಸಿಕೊಂಡವರು, ನೂರಾರು ಕಾರ್ಯಕ್ರಮಗಳನ್ನು ನೀಡಿದವರು. ಹಾಗೆಯೇ ಸಂಗೀತದಲ್ಲಿ ಏನಾದರೂ ಸಾಧನೆ ಮಾಡಲೇಬೇಕೆಂಬ ತುಡಿತ ಹೊಂದಿದವರು. ಉಮೇಶ್ ಈ ಬ್ಯಾಂಡ್ನ ಮುಂದಾಳತ್ವವನ್ನು ವಹಿಸಿಕೊಂಡಿದ್ದಾರೆ. ಇವರ ಜೊತೆಗೆ ಇವರ ಶ್ರೀಮತಿ ಉಮಾ ಉಮೇಶ್ ಹಾಗೂ ವ್ರೊ. ಶ್ರೀದೇವಿ ಕುಲೆನೂರ್ ಮುಖ್ಯ ಆಧಾರವಾಗಿದ್ದಾರೆ.
ಉಮೇಶ್ ವಿ.
ಕಳೆದ 22 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಒಂದಿಲ್ಲೊಂದು ಸಾಧನೆ ಹಾಗೂ ಕಲಿಕೆಯಲ್ಲಿ ತೊಡಗಿರುವ ಉಮೇಶ್ ಕನ್ನಡದ ಒಳ್ಳೆಯ ಕೀಬೋರ್ಡ್ ಪ್ಲೇಯರ್ ಅಂತ ಗುರುತಿಸಿಕೊಂಡಿದ್ದಾರೆ. ತಮ್ಮ ತಂದೆ ವೆಂಕಟೇಶ್ ಮೂರ್ತಿ ಅವರಿಂದ ಹಾರ್ಮೋನಿಯಂನ್ನು ಆರಂಭದಲ್ಲಿ ಕಲಿತು, ಆ ನಂತರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಿಮಾತ್ಯ ಸಂಗೀತದ ಹೆಚ್ಚಿನ ಆಸಕ್ತಿಯನ್ನು ವಹಿಸಿ, ಅಲ್ಲೇ ಆದಷ್ಟು ಸಾಧನೆಯನ್ನು ಮಾಡಿದರು. ಬಿ.ವಿ. ಶ್ರೀನಿವಾಸ್ ಅವರ ಮಾರ್ಗದರ್ಶನಲ್ಲಿ ಸಂಗೀತದ ಹಲವು ಪಟ್ಟುಗಳನ್ನು ಹಾಗೂ ವಾಸು ಎಂಬುವರಿಂದ ಗೀಟಾರ್ ನುಡಿಸುವುದನ್ನು ಕಲಿತವರು. ಸದ್ಯ ಕನ್ನಡ ಟೀವಿ ಲೋಕದಲ್ಲಿ ಬರುವ ನೂರಾರು ಸಂಗೀತ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಸಂಗೀತ ರಸಸಂಜೆ ಕಾರ್ಯಕ್ರಮಗಳಲ್ಲಿ ಉಮೇಶ್ ಪ್ರಮುಖ ಕೀಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿದ್ದಾರೆ. ಇದರಲ್ಲಿ 'ಎದೆ ತುಂಬಿ ಹಾಡುವೆನು', 'ಝೀ ಸರಿಗಮಪ', 'ರಾಗರಂಜಿನಿ' ಇನ್ನು ಹಲವು ಪ್ರಮುಖವಾದವು. ಇದುವರೆಗಿನ ಸಂಗೀತಸೇವೆಯನ್ನು ಗುರುತಿಸಿ ಇವರಿಗೆ `ನಾದೋಪಾಸನ' ಪುರಸ್ಕಾರ ಸಿಕ್ಕಿದೆ. ಈಗಾಗಲೇ ದೇಶದ ಪ್ರಮುಖ ನಗರಗಳು, ಹಾಗೂ ಹೊರದೇಶಗಳಲ್ಲಿ ನಡೆದ ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ, ಕಾರ್ಯಕ್ರಮ ನೀಡಿದ್ದಾರೆ. ಸಂಗೀತವೇ ನನ್ನ ಆತ್ಮ ಎಂದು ಹೇಳಿಕೊಳ್ಳುವ ಉಮೇಶ್ ಸುಮ್ಯೂಸಿಕ್ನ ಪ್ರಮುಖ ಭಾಗವಾಗಿದ್ದಾರೆ.
ಉಷಾ ಉಮೇಶ್
ಉಷಾ ಉಮೇಶ್ ಕೂಡ ಕನ್ನಡದ ಅತ್ಯುತ್ತಮ ಗಾಯಕಿ ಅಂತ ಗುರುತಿಸಿಕೊಂಡವರು. ಸಂಗೀತದ ಸಂಸ್ಕಾರ ಇವರ ತಾತ ದಿವಂಗತ ವಿದ್ವಾನ್ ಅರುಣಾಚಲಪ್ಪ ಹಾಗೂ ತಾಯಿ ಶ್ರೀಮತಿ ಕಸ್ತೂರಿ ಶಂಕರ್ರ ಮೂಲಕ ಹರಿದು ಬಂದಿದೆ. ತಾಯಿಯೇ ಸಂಗೀತದ ಮೊದಲ ಗುರು. ಸಂಗೀತದ ಎಲ್ಲ ಪಟ್ಟುಗಳನ್ನು ಆರಂಭದಲ್ಲಿ ತಾಯಿಯಿಂದ ಕಲಿತು, ನಂತರ ಉಮೇಶ್ ಅವರನ್ನು ಮದುವೆಯಾದ ಮೇಲೆ ಇವರ ಸಂಗೀತ ಸಾಧನೆಗೆ ದೊಡ್ಡ ಮೆಟ್ಟಿಲು ಸಿಕ್ಕಿತು. ಕಳೆದ 20 ವರ್ಷಗಳಿಂದ ಸಂಗೀತ ಸಾಧನೆಯಲ್ಲಿ ತೊಡಗಿರುವ ಉಷಾ ಉಮೇಶ್ ತಾಯಿಯ ಆರ್ಕೆಸ್ಟ್ರಾ ತಂಡದಲ್ಲಿ ಹಳೆಯ ಹಿಂದಿ ಚಿತ್ರಗಳಿಂದ ಹಿಡಿದು, ಹೊಸ ಕನ್ನಡ, ತಮಿಳು, ತೆಲುಗು ಹಾಡುಗಳನ್ನು ಹಾಡಿದ್ದಾರೆ. ಇದರ ಹೊರತಾಗಿ ಸುಗಮ ಸಂಗೀತ, ಭಕ್ತಿ ಪ್ರಧಾನದ ಹಾಡುಗಳ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೇರು ಗಾಯಕ ಎಸ್.ಬಿ. ಬಾಲಸುಬ್ರಮಣ್ಯಂ ಜೊತೆ ಹಾಡಿದ್ದಾರೆ. 'ಎದೆ ತುಂಬಿ ಹಾಡುವೆನು', 'ಗೀತಾಂಜಲಿ' ಪ್ರಮುಖವಾದವುಗಳು. ಅಮ್ಮ ಕಸ್ತೂರಿ ಶಂಕರ್ರಿಂದ ಬಳುವಳಿಯಾಗಿ ಬಂದ ಸಂಗೀತ ಪರಂಪರೆಯನ್ನು ಸುಮ್ಯೂಸಿಕ್ ಮೂಲಕ ಮುಂದುವರೆಸಿಕೊಂಡು ಹೋಗುವುದು ಉಷಾ ಉಮೇಶ್ರ ದೊಡ್ಡ ಕನಸು.
ಶ್ರೀದೇವಿ ಕುಲೆನೂರ್
ಝೀ ಕನ್ನಡದ 'ಸರಿಗಮಪ' ಕಾರ್ಯಕ್ರಮದ ಮೂಲಕ ಗಾಯಕಿ ಶ್ರೀದೇವಿಯನ್ನು ಹೆಚ್ಚಿನವರು ನೋಡಿರಬಹುದು. ಮೂಲತಃ ಮೈಸೂರಿನವರಾಗಿರುವ ಶ್ರೀದೇವಿ ಎಸ್ಜೆಸಿಇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಲೇ ಸಂಗೀತ ಸಾಧನೆಯಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಸಾಧಕರಾಗಿರುವ ಎಚ್.ಆರ್. ಲೀಲಾವತಿ ಅವರಿಂದ, ಸುಗಮ ಹಾಗೂ ಹಿಂದುಸ್ತಾನಿ ಸಂಗೀತವನ್ನು ಕಲಿತವರು. `ಹೂವಿನ ಮನಸು' ಎಂಬ ಆಲ್ಬಂ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದವರು. ಹೂವಿನ ಮನಸಿನ ಆಲ್ಬಂಗೆ ಇವರದೇ ಸಾಹಿತ್ಯ, ರಾಗ ಸಂಯೋಜನೆ ಇತ್ತು. ಉಮೇಶ್ ಈ ಆಲ್ಬಂಗೆ ಜೀವ ತುಂಬುವ ಕೆಲಸ ಮಾಡಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಇವರ ಆಲ್ಬಂನ್ನು ಮೆಚ್ಚಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ನೀಡಿತ್ತು. ಈಗಾಗಲೇ ಕನ್ನಡ ಸಿನಿಮಾ ಸಂಗೀತದಲ್ಲಿ ಗುರುತಿಸಿಕೊಂಡು ಕೆಲವು ಆಲ್ಬಂಗಳಿಗೆ ದನಿಯಾಗಿದ್ದಾರೆ. ತಮ್ಮ ಗುರುಗಳಾಗಿರುವ ಎಚ್.ಆರ್. ಲೀಲಾವತಿ ಅವರ ಮಾರ್ಗದರ್ಶನದಲ್ಲಿ `ವಚನ ಸಿರಿ' ಎಂಬ ಭಕ್ತಿಪ್ರಧಾನ ಧ್ವನಿಸುರಳಿಯನ್ನು ಹೊರತಂದಿದ್ದರು. ಹತ್ತಾರು ವರ್ಷಗಳಿಂದ ಎಲ್ಲ ಪ್ರಾಕಾರದ ಸಂಗೀತ ಅಭ್ಯಾಸ ಮಾಡುತ್ತಾ, ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಶ್ರೀದೇವಿಗೆ ಇನ್ನಷ್ಟು ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ನೀಡಬೇಕು, ಸಂಗೀತದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ಅವರ ಬಹು ದೊಡ್ಡ ಕನಸು, ಅಷ್ಟೇ ದೊಡ್ಡ ತುಡಿತ ಕೂಡ ಇದೆ. ಈ ನಿಟ್ಟಿನಲ್ಲಿ ತಮ್ಮೆಲ್ಲ ಕನಸುಗಳನ್ನು ಸುಮ್ಯೂಸಿಕ್ ಮೂಲಕ ಸಾಕಾರಗೊಳಿಸಿಕೊಳ್ಳುವ ದೊಡ್ಡ ಹಂಬಲ ಇವರದ್ದು. ಈ ನಿಟ್ಟಿನಲ್ಲಿ ಆಶಾದಾಯಕವಾಗಿ ಸಾಗುತ್ತಿದ್ದಾರೆ ಕೂಡ.
No comments:
Post a Comment