ಅವು ಜ್ವಾಲಾಗ್ನಿಯಂಥಹವು!
ಒಳಗೊಳಗೆ ಕೆನ್ನಾಲಿಗೆಯ ಬೆಂಕಿಯನ್ನಿಟ್ಟುಕೊಂಡು
ಹರಿಯುವ ನದಿಯ ಸೊಬಗನ್ನು
ಮುಖದಲ್ಲಿಟ್ಟುಕೊಂಡಿದ್ದೇನೆ.
ಆಕರ್ಷಣೆಯ ಸಿರಿಯನು ದೂರವಿಟ್ಟು
ಇದನು ಸಾಕುತ್ತಿದ್ದೇನೆ.
ನನ್ನೊಳಗಿನ ಬೆಂಕಿಯನು ನಂದಿಸುತ್ತಿದ್ದೇನೆ.
ನನ್ನಾಸೆಗಳನು ಬತ್ತಲು ಬಿಡು... ಆರಲು ಇಡು...
ಮತ್ತೊಮ್ಮೆ ಹೇಳುವೆ, ನನ್ನಾಸೆಗಳ ಕೆಣಕದಿರು
ಅವು ಜ್ವಾಲಾಗ್ನಿಯಂಥಹವು!
ಹೆದರಿಕೆಯು ನನಗಿಲ್ಲ,
ಕೆಣಕಿದರೆ ನನ್ನಾಸೆಗಳು ನಿನ್ನನ್ನೇ ಸುಟ್ಟುಬಿಡುವವು
ಅನ್ನುವ ಕಾಳಜಿಯ ಅರಿಕೆ ಅಷ್ಟೇ !
No comments:
Post a Comment