Thursday, 27 December 2012

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…


ಆತ್ಮೀಯ  ಸ್ನೇಹಿತರಿಗೆ,
ಮುಂಚಿತವಾಗಿ ಹೊಸ ವರ್ಷವು ಸರ್ವರಿಗೂ ಶುಭವನ್ನು ತರಲಿ ಅಂತ ಹಾರೈಸುತ್ತೇನೆ.

ವಿಷಯವೇನಂದರೆ, ಜನವರಿ 6, 2013, ಭಾನುವಾರದಂದು ನಮ್ಮ ಸಂಸ್ಥೆ ಪಂಚಮಿ ಪ್ರಕಾಶನದ ಮೂರು ಪುಸ್ತಕಗಳು ಮೈಸೂರಿನಲ್ಲಿ ಬಿಡುಗಡೆಯಾಗಲಿವೆ. ಇದರಲ್ಲಿ ನನ್ನ ಮೊದಲ ಕಥಾಸಂಕಲನ ಕೃತಿ `ಅಮ್ಮನ ಆಟೋಗ್ರಾಫ್ಕೂಡ ಸೇರಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕನ್ನಡನಾಡಿನ ಹೆಸರಾಂತ ಹಿರಿಯ ಸಾಹಿತಿಗಳಾದ ನಾಡೋಜ ದೇಜಗೌ, ಹಾಗೂ ಡಾ. ಸಿಪಿಕೆ ಜೊತೆಗೆ ಇನ್ನು ಹಲವಾರು ಕನ್ನಡ ನಾಡಿನ ಹಿರಿಯ ಸಾಹಿತಿಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸೇರಲಿದ್ದಾರೆ. ಹಾಗಾಗಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವೆಲ್ಲ ಆಗಮಿಸಬೇಕೆಂದು ಮೂಲಕ ಕೇಳಿಕೊಳ್ಳುತ್ತೇನೆ. ನಿಮ್ಮ ಆಗಮನವನ್ನು ಹೃದಯತುಂಬಿ ಸ್ವಾಗತಿಸುತ್ತೇನೆ.

ಧನ್ಯವಾದಗಳೋಂದಿಗೆ
ಶ್ರೀಧರ ಬನವಾಸಿ(ಫಕೀರ)
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಬೆಂಗಳೂರು

ಬಿಡುಗಡೆಯಾಗಲಿರುವ ನನ್ನ ಕಥಾಸಂಕಲನ ಪುಸ್ತಕ `ಅಮ್ಮನ ಆಟೋಗ್ರಾಫ್’  ಈಗಾಗಲೇ ಕೆಳಕಂಡ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ತಾವೆಲ್ಲ ಕೊಂಡು ಓದುವಿರೆಂದು ಭಾವಿಸುತ್ತೇನೆ. (ಪುಸ್ತಕದ ಬೆಲೆ-100/-)

1.    ಸಪ್ನ ಬುಕ್ ಹೌಸ್, ಮೆಜೆಸ್ಟಿಕ್-ಗಾಂಧಿನಗರ, ಬೆಂಗಳೂರು
2.    ಸ್ಪರ್ಧ ಚೈತ್ರ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
3.    ಸ್ನೇಹ ಬುಕ್ ಹೌಸ್, ಗಿರಿನಗರ, ಬೆಂಗಳೂರು
4.    ರವಿ ಬೆಳಗೆರೆ ಬುಕ್ಸ್ ಆಂಡ್ ಕಾಫಿ, ಗಾಂಧಿ ಬಝಾರ್, ಬೆಂಗಳೂರು
5.    ಸಾಯಿ ಬುಕ್ ವಲ್ಡ್ , ಗಾಂಧಿಬಜಾರ್, ಬೆಂಗಳೂರು
6.    ಟೋಟಲ್ ಕನ್ನಡ, ಜಯನಗರ 4ನೇ ಬ್ಲಾಕ್ , ಬೆಂಗಳೂರು
7.    ರಂಗಶಂಕರ, ಜೆಪಿನಗರ, ಬೆಂಗಳೂರು
8.    ಸುಮುಖ ಬುಕ್ ಹೌಸ್ , ಪೈಪ್ ಲೇನ್, ವಿಜಯ ನಗರ ಬೆಂಗಳೂರು
9.    ನವಾಡ ಬುಕ್ ಸ್ಟಾಲ್, ರಾಜಾಜಿ ನಗರ, ನವರಂಗ್ ಹತ್ತಿರ ಬೆಂಗಳೂರು
10. ಅಂಕಿತ ಪುಸ್ತಕ,  ಗಾಂಧಿ ಬಝಾರ್, ಬೆಂಗಳುರು

1 comment: