(ಪ್ರೀತಿಯ ಸ್ನೇಹಿತರಿಗೆ ಹೊಸ ವರ್ಷದ ಶುಭಾಷಯಗಳು)
ಅಂಕದ ಹಳೆ ಪರದೆಯು ಜರಿಯಿತು.
ಹೊಸ ಅಂಕದ ಸನ್ನಿವೇಶವು ಕಣ್ಣ ಮುಂದೆ…
ಮತ್ತೇ ಬಣ್ಣ ಹಚ್ಚಬೇಕು, ಗೆಜ್ಜೆಕಟ್ಟಬೇಕು.
ಥರಾವರಿ ಬಟ್ಟೆ ಹಾಕಬೇಕು.
ಹೊಸ ಅಂಕದ ಸಂಭಾಷಣೆಯನು ಬಾಯಿಪಾಠಮಾಡಿ
ಮನಸ್ಪೂರ್ವಕವಾಗಿ ಅಭಿನಯಿಸಬೇಕು
ಈ ವರ್ಷವೂ…
ಎಲ್ಲರೂ ನಮ್ಮನ್ನು ನೋಡುತ್ತಿದ್ದಾರೆ.
ಚೆನ್ನಾಗಿ ಅಭಿನಯಿಸುತ್ತಿಯಾ
ಅಂತ ಹೇಳುತ್ತಿದ್ದಾರೆ.
ಹಳೆಯ ಅಂಕದ ಎಲ್ಲ ಬಂಧಗಳು ಮರೆಯಾಗುತಿಹುದು
ನಾಟಕದ ಸೂತ್ರಧಾರ ಮೇಲೆ ಕೂತಿದ್ದಾನೆ.
ಒಂದು ಕೈಯಲ್ಲಿ ಅಂಕದ ದಾರ, ಇನ್ನೊಂದು ಕೈಯಲ್ಲಿ ಸನ್ನಿವೇಶಗಳ ಹಾಳೆಗಳು…
ಹಿಡಿದು ಮೇಲೆ ನಿಂತಿದ್ದಾನೆ. ಕಣ್ಣಸನ್ನೆಯಲ್ಲಿ
ನಮ್ಮನ್ನು ಆಡಿಸುತ್ತಿದ್ದಾನೆ.
ಸಹನಟರ ಜೊತೆ ನಮ್ಮ ಜೀವನದ ನಾಟಕ ಈ ವರ್ಷವೂ
ಬರುವ ವರ್ಷವೂ…
ಮುಗಿಯದ ನಾಟಕದ ಪಾತ್ರಧಾರಿಗಳು ನಾವಾಗಿ…
ಮೇಲಿನವ ಎಣ್ಣೆಯಾಗಿದ್ದಾನೆ.
ದೀಪವಾಗಿ ಉರಿಯಬೇಕು, ಬೆಳಕ ಹರಿಸಬೇಕು
ಇದ್ದಷ್ಟು ದಿನ…