Tuesday, 31 July 2012

ಭಿಲ್ಲುಗಾರ

ಬದುಕಿನ ಬತ್ತಳಿಕೆಯಲ್ಲಿ ಉಳಿದ ಬಾಣಗಳು
ಕೆಲವು ಗೆಲ್ಲುವ ಮನಸ್ಸಿನಲ್ಲಿವೆ,
ಹಲವು ಸೋಲುವ ದಾರಿಯಲ್ಲಿವೆ.
ಬಿಟ್ಟ ಬಾಣದಲ್ಲಿ ಗುರಿ ತಲುಪಿದ್ದಷ್ಟೋ!
ತಪ್ಪಿದ್ದೆಷ್ಟೋ?
ಭಿಲ್ಲುಗಾರನ ಗುರಿ ಸರಿ ಇಲ್ಲದಿದ್ದರೆ ಹೇಗೆ?
ಕೆಲವು ಬಾಣಗಳು ಹರಿತವಾಗಿವೆ, ಚೂಪಾಗಿವೆ.
ಹೊಕ್ಕರೆ ಎದೆಯನ್ನೇ ಸೀಳುವಂತಿವೆ, ಮೇಲೇಳದಂತಿವೆ.
ಪರರನೋವು ನನಗೆಲ್ಲವೆಂದು,
ಬೇಟೆಯಾಡುವವರು ಭಿಲ್ಲುಗಾರರು!
ಏಕಲವ್ಯನಂತೆ ಭಿಲ್ವಿಧ್ಯೆ ಕಲಿತವರಿಗೆ
ಜೀವನದ ಏಣಿ ಬಲು ಸುಲಭ.
ಇಡುವ ಗುರಿ ಸರಿಯಾಗಿರಬೇಕು.
ಅನ್ಯರಿಗೆ ತಾಗದಂತಿರಬೇಕು.
ನಮ್ಮ ಜೊತೆ ಒಳ್ಳೆಯ ಬೇಟೆಗಾರ
ಇರುವವರೆಂದು ಕುಣಿಯಬೇಕು.

Add caption


Friday, 20 July 2012

ಯೌವ್ವನ ಗಾಥೆ

ನಿದಿರೆಯಲಿ ಮದಿರೆಯ ಮನನ
ಏಲ್ಲೊ ಸಿಕ್ಕವಳು, ಪ್ರತಿದಿನ ಹಸನಾಗಿರುವವಳು
ಮನಸ್ಸಿಗೆ ಹತ್ತಿರವಾದವಳು.. ಪಸಿರಾದವಳು..
ಸುಂದರ ಮುಖ, ತನುಘಟ ತುಂಬಿದ ದೇಹ
ಒಣಪು, ವಯ್ಯಾರದಿ ಅರಳಿದ ಅಂಗನ
ಕಣ್ಣಿಗೆ ಚುಂಬನ.. ನಿಲುಕದ ದಾರಿ ಬದಿಯಲ್ಲಿಹುದು.
ಗೆದ್ದಮನಸಿನಲಿ, ಸೋತ ಹಸಿರಿನಲಿ
ಅಂದದ ದೇಹವ ಬಸೆದು ಉಣ್ಣುತಾ
ಕರದಲಿ ಪಿಡಿದು ಮೋಹವ ಹೀರುತಾ
ದೇಹದ ಜೇನಿಗೆ ಹನಿರಸವ ಹಿಂಡುತಾ
ಬೇಸುಗೆಯ ಕಾಮಕೆ ಮನಸಿನ ಬೇಲಿ.
ರಾತ್ರಿ ನಿದಿರೆಯಲಿ ನಿತ್ಯ ಶಯನದಲಿ
ದೇಹದ ಹಸಿವು ಬೇಡುವುದು, ಕಾಡುವುದು
ಅಳಿದುಳಿದು ಹರಡಿದ ಪ್ರೀತಿಯ ಹುಡುಕುತಾ
ಸಾಗುತಿಹುದು,ಓಡುತಿಹುದು
ಯೌವ್ವನದ ಸಾಹಸಗಾಥೆ!

Saturday, 14 July 2012

ಉತ್ತರ ಮೌನ


ನಾನೇಕೆ ಮೌನವಾದೆ, ನಾನೇಕೆ ಮೌನಿಯಾದೆ.
ಎದೆಯಲ್ಲಿ ಹುರಿದೆತ್ತಿಹುದು, ಪರತಹಿಸುತಿಹುದು
ಥಳಥಳನೆ ಕುದಿಯುತ್ತಿರುವ
ರಾಗದ್ವೇಷಾದಿ ಜ್ವಾಲೆಗಳ ಅಂಬರವ
ಹಿಮ್ಮೆಟ್ಟಿ ನಾನೇಕೆ ಮೌನಿಯಾದೆ, ಇದು
ಪರಿವರ್ತನೆಯ ಸುಸಂದರ್ಭವೇ!
ಅಥವಾ
ಆತ್ಮಾವಲೋಕನದ ಚಿಂತನವೇ?
ಬಕ್ವಾಸ್ ಬದುಕಿನ ನಡೆಯಲಿ, ಸಾಗುವ ದಾರಿಯಲಿ
ಕಿಂಚಿತ್ತು ನನ್ನತನವಿಲ್ಲದಿದ್ದರೆ ಹೇಗೆ?
ಮೌನಕ್ಕಿಂತ ದೊಡ್ಡ ಉತ್ತರ ಜಗತ್ತಿನೆಲ್ಲಿದೆ?
ಬುದ್ದಿ ಮನಸ್ಸುಗಳ ಹೋರಾಟದಲಿ
ಅಳಿದುಳಿದ ಕನಸು ನನಸಿನ ಪತ್ರಗಳನು ಓದುತಾ,
ಕನವರಿಸುತ್ತಿದ್ದೆ. ಸವೆದು ಹೋಗುವ ದೇಹಕೆ
ಸಂತೈಸುತ್ತಿದ್ದೆ.
ಬಂದು ಹೋಗಿ ಬಿಡಲೇ ಒಂದು ಸಾರಿ
ಅಂತ ದೇವರನ್ನು
ಕೇಳುತ್ತಿದ್ದೆ



Thursday, 12 July 2012

ಶಿವರಾಜ್ ಕುಮಾರ್ ಹಿಂದಿ ನಟ ರಾಜಕುಮಾರನ ಮಗನಂತೆ! ಶಿವಣ್ಣನ ಬರ್ತಡೇ ದಿನವೇ ತಪ್ಪು ವರದಿ!


ನಿನ್ನೆಯಷ್ಟೇ ಕನ್ನಡದ ಜನಪ್ರಿಯ ನಟ, ಚಿರಯುವಕ ದೇವಾನಂದ್ ಗೆ ಸೆಡ್ಡುಹೊಡೆಯುವಂತೆ, ವಯಸ್ಸಿನಲ್ಲಿ ಹಾಫ್ ಸೆಂಚುರಿ ಬಾರಿಸಿದರೂ ಇಂದಿಗೂ ಕಾಲೇಜು ಹುಡುಗನಂತೆ ಕಾಣುವ ಶಿವರಾಜ್ ಕುಮಾರ್ ತಮ್ಮ ಹುಟ್ಟಿದ ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದರೂ, ಅವರ  ಅಭಿಮಾನಿಗಳು ಮಾತ್ರ ತುಂಬಾ ಅದ್ದೂರಿಯಾಗಿ ಆಚರಿಸಿದರು. ಅಭಿಮಾನಿಗಳ ಭಿಮಾನದ ಮುಂದೆ ಶಿವಣ್ಣ ಯಾವಾಗಲೂ  ದೊಡ್ಡ ವರೆನಿಸಿಕೊಳ್ಳುತ್ತಾರೆ. ಅದು ಶಿವಣ್ಣನ ಇಷ್ಟು  ವರ್ಷ ಸಿನಿಮಾ ರಂಗದಲ್ಲಿ ಸಂಪಾದಿಸಿದ ದೊಡ್ಡ ಆಸ್ತಿ.
 ಶಿವಣ್ಣನ ನಿನ್ನೆಯ ಬರ್ತಡೇ ದಿನದಂದೇ ಬಾಲಿವುಡ್ ಒಂದು ವೆಬ್ ನ್ಯೂಸ್  ಶಿವಣ್ಣನ ಬಗ್ಗೆ ತಪ್ಪು ಮಾಹಿತಿಯನ್ನು ಬರೆದುಬಿಟ್ಟಿದೆ.  ಲೇಖನದ ಸಾಲುಗಳು ರೀತಿ ಇವೆ.  Kannada actor Shiva, son of Amitabh's close friend and actor Raaj Kumar; ನನಗೆ  ಇವರು ಬರೆದ ರಾಜಕುಮಾರ್ ಯಾರು ಅಂತ ಕ್ಲಿಕ್ ಮಾಡಿ ನೋಡಿದಾಗ ನನಗೆ ದೊಡ್ಡ ಶಾಕ್ ಕೊಟ್ಟಿತ್ತು. ಅದು ಹಿಂದಿ ಚಿತ್ರರಂಗದ ಖಳ ನಟ ರಾಜ್ ಕುಮಾರ್ ಆಗಿತ್ತು. ಶಿವರಾಜ್ ಕುಮಾರ್ ನಮ್ಮ ಕನ್ನಡ ಮೇರು ನಟ ಡಾ. ರಾಜ್ ಕುಮಾರನ ಬದಲಾಗಿ ಹಿಂದಿ ರಾಜಕುಮಾರನ ಮಗ ಅಂತಾ ವರದಿ ಹೇಳಿತ್ತು. ಅದೇ ನಾಗಾರ್ಜುನ, ತೆಲಗು ಮೇರು ನಟ ನಾಗೇಶ್ವರರಾವ್ರವರ ಮಗ ಅಂತ ಸರಿಯಾಗಿ ಬರೆದು  ಶಿವರಾಜ್ ಕುಮಾರರವರದ್ದು  ಮಾತ್ರ ರೀತಿ ಎಡವಟ್ಟು ಮಾಡಿದ್ದಾರೆ. ಲೇಖನವನ್ನು ಬರೆದ ವ್ಯಕ್ತಿಗೆ ಭಾರತೀಯ ಚಿತ್ರರಂಗದ ತಲೆಬುಡ ಗೊತ್ತಿಲ್ಲದ ಹಾಗೆ ಕಾಣುತ್ತೆ

ಘಟನೆ: ಎಲ್ಲರಿಗೂ ತಿಳಿದಿರುವ ಹಾಗೆ ಶಿವಣ್ಣ  `ಕಲ್ಯಾಣ್ ಜುವೆಲ್ಲರ್ಸ್   ಕರ್ನಾಟಕದ ರಾಯಭಾರಿ. ಹಾಗೆಯೇ ತಮಿಳಿನಲ್ಲಿ ಶಿವಾಜಿ ಪ್ರಭು, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ಮಲಯಾಳಂನಲ್ಲಿ ದಿಲೀಪ್ , ಹಾಗೆಯೇ ಹಿಂದಿಯಲ್ಲೇ ಮೇರು ನಟ ಅಮಿತಾಭ್ ಬಚ್ಚನ್ . ಭಾರತದ   ಎಲ್ಲ ರಾಯಭಾರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜಾಹೀರಾತುವನ್ನು ಶೂಟ್ ಮಾಡುವ ಯೋಜನೆಯನ್ನು ಕಲ್ಯಾಣ್ ಜುವೆಲ್ಲರ್ಸ್ ಕಂಪನಿ ನಿರ್ಧರಿಸಿತ್ತು. ಅದರಂತೆ ಎಲ್ಲ ನಟರ ಕಾಲ್ಶೀಟ್ ಪಡೆದು, ಬಾಂಬೆಯಲ್ಲಿ ಒಂದು ದಿನ ಸೇರಿಸಿ ಶೂಟಿಂಗ್ ಕೂಡ ಮಾಡಲಾಯಿತು. ನಮ್ಮ ಕನ್ನಡದ ನಟ ಶಿವರಾಜ್ ಕುಮಾರ್ ರವರು ಕೂಡ ಜಾಹೀರಾತುವಿನ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಬರ್ತಡೇ ದಿನದ ಅವಸರದ ನಡುವೆಯೂ ಬಾಂಬೆಗೆ ಹೋಗಿ ಶೂಟಿಂಗ್ ಮುಗಿಸಿಕೊಂಡು ಬಂದಿದ್ದರು. ಅದು ಶಿವಣ್ಣನ ವೃತ್ತಿಪರತೆ.
ಅಮಿತಾಭ್ ಬಚ್ಚನ್ ರವರಿಗೆ   ದಿನ ಎಲ್ಲ ದಕ್ಷಿಣ ಭಾರತದ ಎಲ್ಲ ನಟರುಗಳೊಂದಿಗೆ ಅಭಿನಯಿಸಿದ್ದು  ದೊಡ್ಡ ಖುಷಿಯನ್ನೇ ನೀಡಿತ್ತಂತೆ. ತಮ್ಮ ಖುಷಿಯನ್ನು  ಮಾಧ್ಯಮದವರ ಜೊತೆ ಹಂಚಿಕೊಂಡಿದ್ದರು.  ದಕ್ಷಿಣದವರ ಸಿನಿಮಾ ಮೇಕಿಂಕ್ ಶೈಲಿ, ಇಲ್ಲಿ ಬರುತ್ತಿರುವ ಸಿನಿಮಾಗಳ  ಬಗ್ಗೆ  ಧನಾತ್ಮಕವಾಗಿ ಎಲ್ಲ ರೀತಿಯಿಂದಲೂ ಅಂದು ಸೇರಿದ ಪತ್ರಕರ್ತರ ಜೊತೆ ತಮ್ಮ  ದಕ್ಷಿಣ ಸಿನಿಮಾ ಉದ್ಯಮವನ್ನು ತಾವು ಕಂಡ ರೀತಿಯನ್ನು  ಹಂಚಿಕೊಂಡಿದ್ದರು . ಪ್ರೆಸ್ ಮೀಟ್ ಮುಗಿಸಿಕೊಂಡು ಹೋದ ಪತ್ರಕರ್ತರಲ್ಲಿ ಯಾರೋ ಒಬ್ಬರು   ರೀತಿ ತಮ್ಮ  ಲೇಖನದಲ್ಲಿ ಅಮಿತಾಭ್ ಮಾತುಗಳನ್ನು  ಬರೆಯುತ್ತಾ  ಮಧ್ಯದಲ್ಲಿ   ಶಿವರಾಜ್ ಕುಮಾರ್ ರವರ ಸಂಪೂರ್ಣ ಹೆಸರನ್ನು ಕೂಡ ಬರೆಯದೇ `ಶಿವ' ಅಂತ ಬರೆದು ಇವರು ಅಮಿತಾಭ್ ಬಚ್ಚನ್ ಕ್ಲೋಸ್ ಫ್ರೆಂಡ್ ರಾಜಕುಮಾರನ ಮಗ  ಅಂತ ಬರೆದುಬಿಟ್ಟಿದ್ದಾರೆ. ಬರೆದ ಮಹಾನುಭಾವದ ಹೆಸರು ಕಾಣಲಿಲ್ಲ. ಡಾ.ರಾಜ್ ಕುಮಾರ್ ಕೂಡ ಅಮಿತಾಭ್ ಬಚ್ಚನ್ ಆತ್ಮೀಯರು. ಭಾರತದ ದಂತಕತೆ ಡಾ. ರಾಜ್ ಕುಮಾರ್ ಗೂ, ಹಿಂದಿ ನಟ ರಾಜ್ ಕುಮಾರ್ ಗೂ ಅಜಾಗಜಾಂತರ ವ್ಯತ್ಯಾಸವಿದೆ ಅನ್ನುವುದನ್ನು ಬರೆದ ಪತ್ರಕರ್ತ  ಅರ್ಥಮಾಡಿಕೊಳ್ಳಬೇಕಿತ್ತು. ಮೊದಲೇ ಹೇಳಿದಾಗೆ ಆತನಿಗೆ/ಆಕೆಗೆ  ಭಾರತೀಯ ಚಿತ್ರರಂಗದ ತಲೆಬುಡ ಗೊತ್ತಿಲ್ಲದ ಹಾಗೆ ಕಾಣುತ್ತೆ.

ಅಚಾನಕ್  ಆಗಿ   ಕಂಡ ಲೇಖನ ಸ್ವಲ್ಪ ಮನಸ್ಸಿಗೆ ಬೇಸರ ಮೂಡಿಸಿತು. ಹಾಗಾಗಿ ಅದನ್ನು ನಾನು ಖಂಡಿಸಿ ಲೇಖನದ ಮೂಲಕ ಹೇಳುತ್ತಿದ್ದೇನೆ. ಹಿಂದೆ ಕೂಡ ಕನ್ನಡದವರ ಬಗ್ಗೆ ಅನೇಕ ಮಾಹಿತಿಗಳು ತಪ್ಪಾಗಿ ಪ್ರಕಟವಾಗಿದ್ದು ಕೂಡ ಉಂಟು, ಇದರಲ್ಲಿ ಲೇಖನವೂ ಕೂಡ ಸೇರಿದ ಹಾಗಾಗಿದೆ. ನೀವು ಕೂಡ ಲೇಖನದ ಬಗ್ಗೆ ಖಂಡಿಸಬೇಕು ಅನ್ನುವುದು ನಮ್ಮ ಕಳಕಳಿ.
ತಪ್ಪು ಲೇಖನವನ್ನು  ಓದಲು ಇಚ್ಚೆ ಪಟ್ಟವರು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ
http://www.india-forums.com/bollywood/hot-n-happening/26109-big-b-in-awe-of-southern-superstars-humility.htm#comments