Tuesday, 31 July 2012

ಭಿಲ್ಲುಗಾರ

ಬದುಕಿನ ಬತ್ತಳಿಕೆಯಲ್ಲಿ ಉಳಿದ ಬಾಣಗಳು
ಕೆಲವು ಗೆಲ್ಲುವ ಮನಸ್ಸಿನಲ್ಲಿವೆ,
ಹಲವು ಸೋಲುವ ದಾರಿಯಲ್ಲಿವೆ.
ಬಿಟ್ಟ ಬಾಣದಲ್ಲಿ ಗುರಿ ತಲುಪಿದ್ದಷ್ಟೋ!
ತಪ್ಪಿದ್ದೆಷ್ಟೋ?
ಭಿಲ್ಲುಗಾರನ ಗುರಿ ಸರಿ ಇಲ್ಲದಿದ್ದರೆ ಹೇಗೆ?
ಕೆಲವು ಬಾಣಗಳು ಹರಿತವಾಗಿವೆ, ಚೂಪಾಗಿವೆ.
ಹೊಕ್ಕರೆ ಎದೆಯನ್ನೇ ಸೀಳುವಂತಿವೆ, ಮೇಲೇಳದಂತಿವೆ.
ಪರರನೋವು ನನಗೆಲ್ಲವೆಂದು,
ಬೇಟೆಯಾಡುವವರು ಭಿಲ್ಲುಗಾರರು!
ಏಕಲವ್ಯನಂತೆ ಭಿಲ್ವಿಧ್ಯೆ ಕಲಿತವರಿಗೆ
ಜೀವನದ ಏಣಿ ಬಲು ಸುಲಭ.
ಇಡುವ ಗುರಿ ಸರಿಯಾಗಿರಬೇಕು.
ಅನ್ಯರಿಗೆ ತಾಗದಂತಿರಬೇಕು.
ನಮ್ಮ ಜೊತೆ ಒಳ್ಳೆಯ ಬೇಟೆಗಾರ
ಇರುವವರೆಂದು ಕುಣಿಯಬೇಕು.

Add caption


1 comment:

  1. ಬದುಕಿನಲ್ಲಿ ಬಾಣಗಳ ಆಘಾತದ ಸ್ಪಷ್ಟ ಚಿತ್ರಣ ಇಲ್ಲಿದೆ.

    ಅಲ್ಲಿ ಬಿಲ್ಲಿಗೂ ಹೃದಯವಿಲ್ಲ, ಬಿಲುಗಾರನಂತೂ ನಿರ್ಧಯಿ.

    ಉತ್ತಮ ಪ್ರತಿಮೆಯ ಅನಾವರಣ.

    ReplyDelete