ನಾನೇಕೆ ಮೌನವಾದೆ, ನಾನೇಕೆ ಮೌನಿಯಾದೆ.
ಎದೆಯಲ್ಲಿ ಹುರಿದೆತ್ತಿಹುದು, ಪರತಹಿಸುತಿಹುದು
ಥಳಥಳನೆ ಕುದಿಯುತ್ತಿರುವ
ರಾಗದ್ವೇಷಾದಿ ಜ್ವಾಲೆಗಳ ಅಂಬರವ
ಹಿಮ್ಮೆಟ್ಟಿ ನಾನೇಕೆ ಮೌನಿಯಾದೆ, ಇದು
ಪರಿವರ್ತನೆಯ ಸುಸಂದರ್ಭವೇ!
ಅಥವಾ
ಆತ್ಮಾವಲೋಕನದ ಚಿಂತನವೇ?
ಬಕ್ವಾಸ್ ಬದುಕಿನ ನಡೆಯಲಿ, ಸಾಗುವ ದಾರಿಯಲಿ
ಕಿಂಚಿತ್ತು ನನ್ನತನವಿಲ್ಲದಿದ್ದರೆ ಹೇಗೆ?
ಮೌನಕ್ಕಿಂತ ದೊಡ್ಡ ಉತ್ತರ ಈ ಜಗತ್ತಿನೆಲ್ಲಿದೆ?
ಬುದ್ದಿ ಮನಸ್ಸುಗಳ ಹೋರಾಟದಲಿ
ಅಳಿದುಳಿದ ಕನಸು ನನಸಿನ ಪತ್ರಗಳನು ಓದುತಾ,
ಕನವರಿಸುತ್ತಿದ್ದೆ. ಸವೆದು ಹೋಗುವ ದೇಹಕೆ
ಸಂತೈಸುತ್ತಿದ್ದೆ.
ಬಂದು ಹೋಗಿ ಬಿಡಲೇ ಒಂದು ಸಾರಿ
ಅಂತ ದೇವರನ್ನು
ಕೇಳುತ್ತಿದ್ದೆ.
No comments:
Post a Comment