ಇದು ಸುಮಾರು 12 ವರ್ಷಗಳ ಹಿಂದಿನ ಕತೆ. ಅಂದು ಅಮಿತಾಭ್ ಈಗಿನಂತೆ ಸಾವಿರಾರು ಕೋಟಿ ರೂ.ಗಳ ಒಡೆಯನಾಗುವಷ್ಟು ಶ್ರೀಮಂತನಾಗಿರಲಿಲ್ಲ. ಸೆಕೆಂಡ್ಸ್ ಲೆಕ್ಕದ ಆ್ಯಡ್ಗಳಿಗೆ ಕೋಟಿಗಟ್ಟಲೇ ಹಣವನ್ನು ಡಿಮ್ಯಾಂಡ್ ಮಾಡುವಷ್ಟು ದೊಡ್ಡ ಐಕಾನ್ ಕೂಡ ಆಗಿರಲಿಲ್ಲ. ಇಂದು ತಮ್ಮ ಚಿತ್ರಕ್ಕೆ ಅಮಿತಾಭ್ ಬೇಕೆ ಬೇಕು ಅನ್ನುವ ನಿದರ್ೇಶಕರು ಹಾಗೂ ನಿಮರ್ಾಪಕರಿಗೆ ಅಂದು ಬಚ್ಚನ್ `ಐರನ್ ಲೆಗ್'' ಆಗಿದ್ದ. ಹಾಗಿತ್ತು ಅಮಿತಾಭ್ ಬಚ್ಚನ್ನ ಜೀವನದ ಅತ್ಯಂತ ಕೆಟ್ಟ ದಿನಗಳು. ಇಡೀ ಬಾಲಿವುಡ್ ಭಾರತೀಯ ಚಿತ್ರರಂಗದ ಮೇರುನಟ ಅಮಿತಾಭ್ ಬಚ್ಚನ್ನನ್ನೇ ಮರೆತುಬಿಟ್ಟಿತ್ತು. ಸಾಲು ಸಾಲು ಸೋಲುಗಳು, ನಷ್ಟದಲ್ಲಿದ್ದ ಎಬಿಸಿಎಲ್ ಪ್ರೊಡಕ್ಷನ್ ಹೌಸ್, ನೂರಾರು ಕೋಟಿ ಸಾಲ, ಪ್ರೀತಿಯಿಂದ ಕಟ್ಟಿಸಿದ್ದ ಮನೆ ಕೂಡ ಬ್ಯಾಂಕ್ ಹರಾಜಿನಲ್ಲಿತ್ತು. ಅಕ್ಷರಶಃ ಅಮಿತಾಭ್ ಬೀದಿಗೆ ಬಿದ್ದಿದ್ದ.
ಅಮಿತಾಭ್ನ ಹೊಸ ಅವತಾರ...!
ಆದ್ರೆ, ಅಮಿತಾಭ್ ಬಚ್ಚನ್ ಎಂದಿಗೂ ಎದೆಗುಂದಲಿಲ್ಲ..ಆಗ ಅವನ ಜೊತೆ ಕೈ ಹಿಡಿದ ಹೆಂಡತಿ ಜಯಾ ಬಾಧುರಿ ಬಿಟ್ಟರೆ ಬೇರೆಯವರ ಸಾಥ್ ಕೂಡ ಇರಲಿಲ್ಲ. ಹೀಗಿದ್ದರೂ ಅಮಿತಾಭ್ ಒಂದೇ ರಾತ್ರಿಯಲ್ಲಿ ಗೆದ್ದೇ ಬಿಟ್ಟ, ಫಿನಿಕ್ಸ್ ಪಕ್ಷಿಯಂತೆ ಮತ್ತೆ ಮಿಂಚಿನಂತೆ ಗಗನಕ್ಕೆ ಹಾರಿದ. ನೂರಾರು ಕೋಟಿ ಸಾಲವನ್ನು ಒಂದೆರಡು ವರ್ಷಗಳಲ್ಲಿ ತೀರಿಸಿಬಿಟ್ಟ..ಸಿನಿಮಾಗಳ ಮೇಲೆ ಸಿನಿಮಾಗಳು, ಒಂದು ರೂಪಾಯಿ ಚಾಕಲೇಟ್ನಿಂದ ಹಿಡಿದು ಕೋಟಿ ರೂ.ಗೆ ಬೆಲೆ ಬಾಳುವ ಕಾರುಗಳ ಪ್ರಚಾರಕ್ಕೂ ಅಮಿತಾಭನೇ ಬೇಕಾದ..ಲೆಕ್ಕವಿಲ್ಲದಷ್ಟು ಜಾಹಿರಾತುಗಳು. ಕೆಲವೇ ವರ್ಷಗಳಲಿ ್ಲ ಸಾವಿರಾರು ಕೋಟಿ ರೂಗಳ ಒಡೆಯನಾದ. ಅದೇ ಅಮಿತಾಬ್ ಮತ್ತೇ ಅಮಿತಾಭ್ ಆಗಿದ್ದು ಒಂದೇ ಒಂದು ಕಾರ್ಯಕ್ರಮದ ನಿರೂಪಣೆಯ ಮೂಲಕ, `ಕೌನ್ ಬನೇಗಾ ಕರೊಡ್ಪತಿ'' ಆತನ ಜೀವನದಲ್ಲಿ ಮತ್ತೊಮ್ಮೆ ಮರುಜೀವ ನೀಡಿದ ಶೋ..!
ಉತ್ತರಪ್ರದೇಶದ ಒಂದು ದೊಡ್ಡ ರ್ಯಾಲಿಯಲ್ಲಿ ಅಮಿತಾಭ್ ಭಾಗವಹಿಸಿದ್ದ. ಅವನನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಬಂದಿದ್ದರು. ತನ್ನನ್ನು ನೋಡಲು ಬಂದ ಅಭಿಮಾನಿಗಳಿಗೆ ಕೈ ನೀಡುತ್ತಿರುವಾಗ ಅಲ್ಲಿದ್ದ ಅಮ್ಮನ ಜೊತೆ ಬಂದ ಪುಟಾಣಿ ಮಗುವೊಂದು ಅಮ್ಮನ ಕಂಕುಳಲ್ಲಿ ಕುಳಿತುಕೊಂಡಿತ್ತು. ಅದು ಅಮ್ಮನಿಗೆ ಕೈ ತೋರಿಸಿ 'ಅಮ್ಮಾ,ಇವರೇ ಅಲ್ವಾ ಟಿವಿಲಿ ಕ್ವೀಜ್ ಪ್ರೋಗ್ರಾಂ ನಡೆಸಿಕೊಡೋರು' ಅಂತ ಅಮಿತಾಭ್ ಎದುರೇ ಕೇಳಿತು. ಅಮ್ಮ ಸ್ವಲ್ಪ ಪೇಚಿಗೆ ಸಿಕ್ಕಿಕೊಂಡರೂ ಅಮಿತಾಭ್ಗೆ ಮಾತ್ರ ಮಗು ಮಾತನ್ನ ಕೇಳಿದಾಗ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಆ ಕ್ಷಣಕ್ಕೆ ಅವನಿಗಾದ ಸಂತೋಷ ಅಷ್ಟಿಷ್ಟಲ್ಲ..! ತಕ್ಷಣ ತನಗಾದ ಆ ಆನಂದ ಬಾಷ್ಪವನ್ನು ತೋರಿಸಿಕೊಳ್ಳದೆ ಆ ಪುಟಾಣಿ ಮಗುವಿನ ಗಲ್ಲಕ್ಕೆ ಮುತ್ತಿಕ್ಕಿ ಮುಂದೆ ಸಾಗಿದ. `ನಲವತ್ತು ವರ್ಷಗಳ ಕಾಲ ಸಿನಿಮಾ ಹೀರೊ ಆಗಿ ಮಿಂಚಿದ್ದ ನನ್ನನ್ನು ಸಿನಿಮಾಗಳ ಮೂಲಕ ಗುರುತಿಸದೇ ಕೇವಲ ಟಿವಿ ಕಾರ್ಯಕ್ರಮದ ಮೂಲಕ ನನ್ನನ್ನು ಗುರುತಿಸುವುದನ್ನು ನೋಡಿದರೆ ಈ ಟಿವಿ ಮಾಧ್ಯಮ ಏಷ್ಟೊಂದು ಪ್ರಭಾವಶಾಲಿಯಾಗಿದೆಯಲ್ಲಾ..!'' ಅಂತ ಒಮ್ಮೆ ಸಂದರ್ಶನದಲ್ಲಿ ಅಮಿತಾಭ್ ನೆನಪಿಸಿಕೊಂಡಿದ್ದ.
ಯುಕೆ ದೇಶದ ಗೇಮ್ ಶೋ `ಹೂ ವಾಂಟ್ಸ್ ಬಿ ಮಿಲೇನಿಯರ್''ನ ಭಾರತೀಯ ಅವತರಣಿಕೆ ಅಥರ್ಾತ್ ರಿಮೇಕ್ಕೇ ಈ ಕೌನ್ ಬನೇಗಾ ಕರೋಡ್ಪತಿ. 2000ರಲ್ಲಿ ಸ್ಟಾರ್ ಪ್ಲಸ್ನಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್ಪತಿ ಶೋ ಕೇವಲ ಅಮಿತಾಭ್ಗೆ ಮಾತ್ರವಲ್ಲ, ಇಂಡಿಯಾದಲ್ಲಿ ತನ್ನ ಅಸ್ತಿತ್ವಕ್ಕೆ ಹೆಣಗುತ್ತಿದ್ದ ರೂಪರ್ಟ ಮುಡರ್ೋಕ್ ಒಡೆತನದ ಸ್ಟಾರ್ ಟಿವಿಗೂ ಕೂಡ ಒಂದು ದೊಡ್ಡ ಬ್ರೇಕನ್ನೇ ನೀಡಿತ್ತು. ಜನರಿಗೆ ಜನರಲ್ ನಾಲೇಜ್ಗೆ ಸಂಬಂಧಿಸಿದಂತೆ ಜನರಿಗೆ ಕ್ವೀಜ್ ಮೂಲಕ ಹಣ ಮಾಡುವ ಗ್ಯಾಮ್ಲಿಂಗ್ ಗೇಮ್ ಇದಾಗಿತ್ತು. ಸಿದ್ದಾರ್ಥ ಬಸು ಹಿಂದಿಯಲ್ಲಿ ಇದನ್ನ ನಿಮರ್ಾಣ ಮಾಡೋದ್ರ ಜೊತೆಗೆ ನಿದರ್ೇಶನ ಕೂಡ ಮಾಡ್ತಿದ್ರು. ಯುಕೆ ಗೇಮ್ ಶೋ `ಹೂ ವಾಂಟ್ಸ್ ಬಿ ಮಿಲೇನಿಯರ್'' ಎಷ್ಟು ಜನರನ್ನು ಸೆಳೆಯಿತೋ ಗೊತ್ತಿಲ್ಲ, ಆದ್ರೆ ಅಮಿತಾಭ್ ಮಾತ್ರ ಕರೋಡ್ಪತಿ ಪ್ರೋಗ್ರಾಂ ಮೂಲಕ ಅಕ್ಷರಶಃ ಭಾರತೀಯರನ್ನ ಆಳಿದರು. ಕಾರ್ಯಕ್ರಮ ನಿರೂಪಣೆ, ನಿರೂಪಣೆಗೆ ಜೀವ ತುಂಬುತ್ತಿದ್ದ ಅವರ ಗಡುಸಾದ ದನಿ, ಮ್ಯಾನರಿಸಂ, ಗೇಮ್ನಲ್ಲಿ ಸೋತು ಹತಾಶರಾದವರಿಗೆ ಅಮಿತಾಭ್ ಹೇಳುತ್ತಿದ್ದ ಸಾಂತ್ವನದ ಮಾತುಗಳು, ಇಡೀ ಶೋ ಸಂಪೂರ್ಣವಾಗಿ ಅಮಿತಾಭ್ಮಯವಾಗಿತ್ತು. ಅಮಿತಾಭ್ ಅಂದಿನಿಂದ ಇಂದಿನವರೆಗೂ ಭಾರತದ ಟಿವಿ ಐಕಾನ್ ಅಂದೇ ಜನಪ್ರಿಯರಾಗಿದ್ದಾರೆ. ಇಂದಿಗೂ ಅಮಿತಾಭ್ ಆಂಕರಿಂಗ್ ಅಂದ್ರೆ ಅದು ಕೌನ್ ಬನೇಗಾ ಕರೋಡ್ಪತಿಯೇ ಕಣ್ಮುಂದೆ ಬರುತ್ತದೆ. ಹೀಗೆ ಅಮಿತಾಭ್ ಇಡೀ ಶೋದ ಕೇಂದ್ರ ಬಿಂದುವಾಗಿ ಕೋಟ್ಯಂತರ ಜನರ ಆರಾಧಕರಾಗಿ ಬೆಳೆದ ಪರಿ ಮಾತ್ರ ರಿಯಲಿ ಗ್ರೇಟ್..!
ಕೆಬಿಸಿ-1 ಪ್ರಾರಂಭವಾದಾಗ ಸ್ಟಾರ್ ಟಿವಿಯ ಕಮಷರ್ಿಯಲ್ ಆಡ್ ರೇಟ್ ಲಕ್ಷದವರೆಗೆ ಮುಟ್ಟಿತ್ತು. ಈ ಶೋನ ಜನ್ರು ಎಷ್ಟು ಇಷ್ಟಪಟ್ಟಿದ್ರು ಅಂದ್ರೆ ರಾತ್ರಿ ಈ ಶೋ ನೋಡಲಿಕ್ಕೆ ಹಳ್ಳಿಗಳಲ್ಲಿ ತಮ್ಮ ಮನೆಯಲ್ಲಿ ಟಿವಿ ಇಲ್ದೋರು ಕಿಲೋಮಿಟರ್ಗಟ್ಟಲೆ ನಡೆದು ಬೇರೆ ಊರಿನವರ ಮನೆಯ ಬಾಗಿಲು ತಟ್ಟಿದವರಿದ್ದಾರೆ. ಟಿವಿ ಇಲ್ದೋರು ಸಾಲ ಮಾಡಿ ಟಿವಿ ತಂದು ನೋಡಿದವರಿದ್ದಾರೆ. ತಮ್ಮ ಮನೆಯ ಟಿವಿಯಲ್ಲಿ ಸ್ಟಾರ್ ಟಿವಿ ಬರುತ್ತಿಲ್ಲವೆಂದು ಕೇಬಲ್ ಆಪರೇಟರ್ ಜೊತೆ ಜಗಳ ಆಡಿದವರಿದ್ದಾರೆ. ಹೀಗೆ, ಅಂದು ಟಿವಿಯತ್ತ ಹೆಚ್ಚೆಚ್ಚು ಜನ್ರನ್ನ ಸೆಳೆದ ಐಕಾನ್ ಅಮಿತಾಭ್ ಆಗಿದ್ದರು. ಇಂತಹ ಇನ್ನು ಹಲವು ಮೈಲಿಗಲ್ಲುಗಳನ್ನ ಅಮಿತಾಭ್ `ಕೌನ್ ಬನೇಗಾ ಕರೋಡ್ಪತಿ'' ಪ್ರೋಗ್ರಾಂ ಮೂಲಕ ಸಾಧಿಸಿದ್ದರು. ಕಾರ್ಯಕ್ರಮ ಜನಪ್ರಿಯವಾದಂತೆ ಅಮಿತಾಭ್ರ ಡಿಮ್ಯಾಂಡ್ ಕೂಡ ಜಾಸ್ತಿಯಾಯಿತು. ಪ್ರತಿದಿನಕ್ಕೆ ಕೋಟಿ ರೂ.ವರೆಗೆ ಡಿಮ್ಯಾಂಡ್ ಮಾಡುವಷ್ಟು ಪ್ರಸಿದ್ದರಾದರು. ಟಿವಿಯಲ್ಲಿ ಇವರ ಡಿಮ್ಯಾಂಡ್ ಹೆಚ್ಚಾದಂತೆ ಸಿನಿಮಾಗಳಲ್ಲಿ ಕೂಡ ಇವರ ಕಾಲ್ಶೀಟ್ಗೆ ಭಾರಿ ಡಿಮ್ಯಾಂಡ್ ಹುಟ್ಟಿಕೊಂಡಿತು. ಆಗಿನ ಸಮಯದಲ್ಲಿ ಅಮಿತಾಭ್ ಕೇವಲ ಸಪೋಟರ್ಿಂಗ್ ರೋಲ್ಗೆ 2 ರಿಂದ 3 ಕೋಟಿ ರೂ.ಗಳಷ್ಟು ಹಣವನ್ನು ಪಡೀತಿದ್ರು. ಅಂದು ಬೆಟ್ಟದಷ್ಟು ಅಡಗಿಕುಳಿತುಕೊಂಡಿದ್ದ ಕೋಟ್ಯಂತರ ಸಾಲವನ್ನು ತೀರಿಸಲಿಕ್ಕೆ ಅಮಿತಾಭ್ ಮೂರ್ನಾಲ್ಕು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದರು. ದೇಹಕ್ಕೆ ಬಿಡುವು ಇಲ್ಲದ ಹಾಗೆ ಶೂಟಿಂಗ್ನಲ್ಲಿ ಭಾಗವಹಿಸ್ತಿದ್ರು. ಅಮಿತಾಭ್ ಶಕ್ತಿಯೇ ಅಂತದ್ದು, ಒಮ್ಮೆ ಆತ ಮನಸ್ಸು ಮಾಡಿದರೆ ಆ ಕೆಲಸ ಸಂಪೂರ್ಣವಾಗಿ ಯಶಸ್ಸು ಕಾಣೋವರ್ಗೂ ಬಿಡ್ತಿರಲಿಲ್ಲ. ತಾನು ಅನುಭವಿಸಿದ ಎಲ್ಲ ನೋವು-ಅವಮಾನಗಳಿಗೆ ತನ್ನ ದುಡಿಮೆಯೇ ಉತ್ತರ ಕೊಡುತ್ತೆ ಅನ್ನೋ ನಂಬಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಅದನ್ನು ಸಾಧಿಸಿಯೂ ತೀರಿದ್ದ. ಈಗಲೂ ಅವನಲ್ಲಿ ಅದೇ ಹಠ ಇದೆ. ಅಂದು ಅಮಿತಾಭ್ ಸೋತಾಗ ಹಿಂಡಿ ಹಿಪ್ಪೆ ಮಾಡಿದಂತಹ ಜನಗಳೇ ಮತ್ತೊಮ್ಮೆ ಅವನ ಕಾಲ್ಶೀಟ್ಗೆ ಮನೆಬಾಗಿಲಲ್ಲಿ ನಿಂತಿದ್ದರು.
ಸಾಮಾನ್ಯವಾಗಿ ಅಪ್ಪಮ್ಮಂದಿರಿಗೆ ತಮ್ಮ ಮಕ್ಕಳು ಜಾಸ್ತಿ ಟಿವಿ ನೋಡೊದನ್ನ ಇಷ್ಟಪಡೋಲ್ಲ, ಎಲ್ಲಿ ತಮ್ಮ ಮಕ್ಳು ಟಿವಿ ನೋಡಿ ಹಾಳಾಗಿ ಬಿಡ್ತಾರೋ ಅನ್ನೋ ಭಯ ಸಾಮಾನ್ಯವಾಗಿ ಎಲ್ಲರಿಗೂ ಇದ್ದದ್ದೆ. ಆದ್ರೆ ಅಮಿತಾಭ್ ನಡೆಸುತ್ತಿದ್ದ ಈ ಗೇಮ್ ಶೋದಲ್ಲಿ ಮಾತ್ರ ಇದು ಸುಳ್ಳಾಯಿತು. ಸಾಮಾನ್ಯವಾಗಿ 6 ವರ್ಷದ ಮಕ್ಕಳಿಂದ ಹಿಡಿದು ಸ್ಟಿಕ್ಕೇ ಇಲ್ಲದೆ ನಿಲ್ಲಲಾಗದ ವಯಸ್ಸಾದವರೂ ಕೂಡ ಈ ಶೋವನ್ನು ತುಂಬಾನೇ ಇಷ್ಟಪಟ್ಟಿದ್ರು. ಸಿವಿಲ್ ಹಾಗೂ ಕಾಂಪಿಟೇಟಿವ್ ಎಕ್ಸಾಮ್ ಕಟ್ಟಿದಂತಹ ಯುವಕ ಯುವತಿಯರಿಗೆ ಈ ಶೋ ಒಂಥರ ಟ್ಯೂಷನ್ಕ್ಲಾಸ್ ಆಗಿತ್ತು. ಅಪ್ಪಮ್ಮಂದಿರು ತಮ್ಮ ಮಕ್ಕಳನ್ನ ಹಿಡಿದು ಕೂರಿಸಿ ಈ ಕ್ವೀಜ್ ಕಾರ್ಯಕ್ರಮವನ್ನ ತೋರಿಸುತ್ತಿದ್ರು. ಮಕ್ಕಳ ಜನರಲ್ ನಾಲೇಜ್ ಈ ಶೋ ನೋಡಿಯಾದ್ರೂ ಹೆಚ್ಚಾಗಲಿ ಎನ್ನುವುದು ಅವರ ಒತ್ಯಾಸೆಯಾಗಿತ್ತಷ್ಟೇ..!
ಅಮಿತಾಭ್ ಶೋ ಟಿಆರ್ಪಿಯಲ್ಲಿ ನಂ.1
2000ರಲ್ಲಿ ಅಂದು ಈಗಿನಂತೆ ಟಿವಿ ಚಾನೆಲ್ಗಳ ಭರಾಟೆ ಹೆಚ್ಚಾಗಿರಲಿಲ್ಲ. ಇಂದು ಸರಿ ಸುಮಾರು 600ಕ್ಕೂ ಹೆಚ್ಚು ಚಾನೆಲ್ಗಳು ನಮ್ಮನ್ನು ಆಳುತ್ತಿವೆ. ಕೋಟ್ಯಂತರ ಟಿವಿ ಪ್ರೇಕ್ಷಕರು ಒಂದೊಂದು ಚಾನೆಲ್ನ ಒಂದೊಂದು ಕಾರ್ಯಕ್ರಮಕ್ಕೆ ಹರಿದು ಹಂಚಿ ಹೋಗಿದ್ದಾರೆ. ಇಂದು ಯಾವುದೇ ಚಾನೆಲ್ ತನ್ನ ಎಲ್ಲ ಕಾರ್ಯಕ್ರಮಗಳನ್ನು ಇಷ್ಟಪಡುವ ಪ್ರೇಕ್ಷಕರನ್ನು ಹೊಂದಿದೆ ಅಂತ ಧೈರ್ಯವಾಗಿ ಹೇಳಲಿಕ್ಕೆ ಆಗೋಲ್ಲ. ಯಾಕಂದ್ರೆ ಒಂದೊಂದು ಚಾನೆಲ್ ಒಂದೊಂದು ಕಾರ್ಯಕ್ರಮಕ್ಕೆ ತುಂಬಾನೇ ಫೇಮಸ್ ಆಗಿ ಬಿಟ್ಟಿವೆ. ಹಾಗೆಯೇ ಆ ಟೈಮಲ್ಲಿ ಸ್ಟಾರ್ಟಿವಿ ಕೂಡ 'ಕೌನ್ ಬನೇಗಾ ಕರೋಡ್ಪತಿ' ಪ್ರೋಗ್ರಾಂ ಮೂಲಕ ತುಂಬಾನೇ ಜನಪ್ರಿಯವಾಗಿತ್ತು. ಇಡೀ ಭಾರತದ ಎಲ್ಲ ಭಾಷೆಯ ಜನರಿಗೆ ತುಂಬಾನೇ ಇಷ್ಟವಾದ ಕಾರ್ಯಕ್ರಮವಾಗಿತ್ತು. ಕೆಬಿಸಿ-1ನ ಬಿಸಿ ಇರುವಾಗಲೇ ಸ್ಟಾರ್ನ ಎದುರಾಳಿ ಝೀ ಚಾನೆಲ್ ಅನುಪಮ್ ಖೇರ್ ಹಾಗೂ ಮನೀಷಾ ಕೋಯಿರಾಲಾರವರನ್ನು ಹಾಕಿಕೊಂಡು `ಸವಾಲ್ ದಸ್ ಕ್ರೋರ್ ಕಾ'' ಎಂಬ ಗೇಮ್ ಶೋ ಪ್ರಾರಂಭಿಸಿತು. ಕೆಬಿಸಿ ಬರೋ ಟೈಮಿಂಗ್ಸ್ನಲ್ಲೇ ಇದು ಕೂಡ ಪ್ರಸಾರವಾಗ್ತಿತ್ತು. ಅಮಿತಾಭ್ರ ಕೆಬಿಸಿಗೆ ನೇರವಾದ ಪೈಪೋಟಿಯನ್ನು ನೀಡೋ ದೃಷ್ಟಿಯಿಂದ ಬಹುಮಾನದ ಮೊತ್ತವನ್ನು ಹತ್ತು ಕೋಟಿಗೆ ಏರಿಸಲಾಯಿತು. ಕೆಬಿಸಿ ಶೋದಲ್ಲಿ ಗೆದ್ದವರಿಗೆ ಕೇವಲ ಒಂದು ಕೋಟಿಯನ್ನು ಮಾತ್ರ ನೀಡಲಾಗುತ್ತಿತ್ತು. ಹೀಗೆ ಝೀ ಚಾನೆಲ್ ಅಕ್ಟೋಬರ್, 2000ರಂದು `ಸವಾಲ್ ದಸ್ ಕ್ರೋರ್ ಕಾ'' ಪ್ರೋಗ್ರಾಂ ಶುರು ಮಾಡೇ ಬಿಟ್ಟಿತು. ಆರಂಭದ ಎರಡು ವಾರ ಝೀನ `ಸವಾಲ್'' ಕೆಬಿಸಿಗೆ ಸ್ವಲ್ಪ ಫೈಟ್ ಕೊಟ್ಟರೂ ನಂತರ ಇದರ ಹವಾ ಕಡಿಮೆಯಾಯಿತು. ಅಮಿತಾಭ್ ಆಂಕರಿಂಗ್ ಮುಂದೆ ಅನುಪಮ್ ಖೇರ್ ಹಾಗೂ ಮನೀಷಾ ಕೋಯಿರಾಲಾ ಡಲ್ಲಾದರು. ಆರಂಭದಲ್ಲಿ 7.9 ರಷ್ಟು ಟಿಆರ್ಪಿ ಗಳಿಸಿದ್ದ `ಸವಾಲ್ ದಸ್ ಕ್ರೋರ್ ಕಾ'' ಕೇವಲ ಮೂರೇ ವಾರದಲ್ಲಿ ಟಿಆರ್ಪಿ 3.7 ಗೆ ಇಳಿಯಿತು. ಝೀಚಾನೆಲ್ನ ಗೇಮ್ ಶೋ ಸೋಲಲಿಕ್ಕೆ ಬಹಳಷ್ಟು ಕಾರಣಗಳಿದ್ದವು. ಕೆಬಿಸಿಯ ಟಿಆರ್ಪಿ ಮಾತ್ರ 9.3 ದಿಂದ 10.5ಗೆ ಏರಿತ್ತು. ಕೆಬಿಸಿ ತನ್ನ ವೀಕ್ಷಕರ ಸಂಖ್ಯೆಯನ್ನ ಸೆಳೆಯಲಿಕ್ಕೆ ದೀಪಾವಳಿ, ಹೋಲಿ ಇನ್ನು ಹಲವು ವಿಶೇಷ ದಿನಗಳಲ್ಲಿ ಬಾಲಿವುಡ್ ಸ್ಟಾರ್ಗಳನ್ನು ಕರೆತಂದು ಕಾರ್ಯಕ್ರಮದ ರಂಗನ್ನು ಇನ್ನು ಹೆಚ್ಚಿಸಿಕೊಂಡಿತ್ತು. ಹಿಂದಿ ಭಾಷೆ ಹಾಗೂ ಹಿಂದಿ ಸಿನಿಮಾಗಳ ಬಗ್ಗೆ ಪರೋಕ್ಷ ಧೋರಣೆಯನ್ನು ಹೊಂದಿದಂತಹ ತಮಿಳರು ಕೂಡ ಈ ಅಮಿತಾಭ್ರ ಕೆಬಿಸಿ ಶೋವನ್ನು ತಪ್ಪದೇ ನೋಡುತ್ತಿದ್ದರು. ಹೀಗಾಗಿ ತಮಿಳು ಚಾನೆಲ್ಗಳು ಅಲ್ಲಿಯ ಟಿವಿ ಸ್ಟಾರ್ಗಳನ್ನು ಇಟ್ಟುಕೊಂಡು ಕರೋಡ್ಪತಿ ತರಹದ ಗೇಮ್ ಶೋ ಮಾಡಿದರೂ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲೇ ಇಲ್ಲ. ಅದನ್ನು ನಿಮರ್ಿಸಿದಂತಹ ಸನ್ ಟಿವಿಯಂತಹ ಚಾನೆಲ್ಗಳು ಕೂಡ ಇದರಿಂದ ಅಷ್ಟೊಂದು ಲಾಭ ಕಾಣಲಿಲ್ಲ.
ಅಮಿತಾಭ್ ಮುಂದೆ ಶಾರುಖ್ ಡಲ್ಲಾದ !
2000ರಲ್ಲಿ ಅಮಿತಾಭ್ ಸಾರಥ್ಯದಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್ಪತಿ ಶೋ ಟಿವಿ ಮಾಧ್ಯಮದಲ್ಲಿ ಕ್ವೀಜ್ ಪ್ರೋಗ್ರಾಂಗಳಿಗೆ ಭರ್ಜರಿ ಒಪನಿಂಗ್ ನೀಡಿತ್ತು. ಕೆಬಿಸಿ-1 ಯಶಸ್ಸಿನ ನಂತರ ಅಮಿತಾಭ್ ಹೆಚ್ಚೆಚ್ಚು ಸಿನಿಮಾಗಳಲ್ಲಿ ಅಭಿನಯಿಸಲಿಕ್ಕೆ ಪ್ರಾರಂಭಿಸಿದ್ರು, ಹಾಗಾಗಿ ಸ್ಟಾರ್ ಟೀವಿಯವ್ರು ಅಮಿತಾಭರನ್ನ ಮತ್ತೆ ಹಾಕಿಕೊಂಡು ಕೆಬಿಸಿ ಸೀಸನ್-2 ಪ್ರಾರಂಭಿಸಲಿಕ್ಕೆ ಸುಮಾರು 5 ವರ್ಷಗಳೇ ಬೇಕಾದವು. ಸ್ಟಾರ್ಟಿವಿ ಸೀಸನ್-2 ಪ್ರಾರಂಭಿಸಿದಾಗ ಶೋದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿತು. ಬಹುಮಾನದ ಮೊತ್ತವನ್ನು 1 ರಿಂದ 2 ಕೋಟಿಗೆ ಹಾಗೂ 85 ಎಪಿಸೋಡ್ಗಳನ್ನ ನಿಮರ್ಿಸುವ ಯೋಜನೆ ಮಾಡಲಾಯಿತು. ಆಗಸ್ಟ್ 5,2005 ರಂದು ಕೆಬಿಸಿ ಸೀಸನ್-2 ಪ್ರಾರಂಭವಾಯಿತು. ಶೋಗೆ ಒಳ್ಳೆಯ ಟಿಆರ್ಪಿ ಇದ್ದರೂ ಅನಿದರ್ಿಷ್ಟವಾಗಿ ನಿಲ್ಲಿಸಬೇಕಾಯಿತು. 2006ರಲ್ಲಿ ಅಮಿತಾಭ್ರ ಆರೋಗ್ಯ ಕೈ ಕೊಟ್ಟಿತು, ದೀರ್ಘಕಾಲದ ಖಾಯಿಲೆಗೆ ಬಿದ್ದರು, ವಿಶ್ರಾಂತಿ ಇಲ್ದಿದ್ರೆ ಅಮಿತಾಭ್ ಬದುಕುವುದೇ ಕಷ್ಟ ಅನ್ನುವ ಹಾಗಾಯಿತು. ದೇಶದಾದ್ಯಂತ ಅಮಿತಾಭ್ ಬೇಗ ಗುಣಮುಖವಾಗಲಿ ಅಂತ ಪೂಜೆ-ಪುನಸ್ಕಾರ,ಹೋಮ ಹವನಗಳು ನಡೆದವು. ಹಾಗಾಗಿ ಸುಮಾರು 24 ಎಪಿಸೋಡ್ಗಳನ್ನ ಅಮಿತಾಭ್ ಮಾಡಲಿಕ್ಕೆ ಆಗಲಿಲ್ಲ, ಹಾಗಾಗಿ ಸೀಸನ್-2 ಜನಪ್ರಿಯತೆಯ ಹಾದಿಯಲ್ಲಿರುವಾಗಲೇ ಮಗುಚಿ ಬಿದ್ದಿತ್ತು. ಆಗಿನ ಸಮಯದಲ್ಲಿ ಕೆಬಿಸಿ ಶೋಗೆ ಸ್ಪಾನ್ಸರ್ಗಳಿಗೇನು ಕಡಿಮೆ ಇರಲಿಲ್ಲ. ಹಾಗಾಗಿ ಸ್ಪಾನ್ಸರ್ಸ್ಗಳಿಂದ ಚಾನೆಲ್ಗೆ ಒತ್ತಡ ಇದ್ದೇ ಇತ್ತು. ಹಾಗಾಗಿ ಕೆಬಿಸಿಯನ್ನು ಮತ್ತೊಮ್ಮೆ ಪ್ರಾರಂಭಿಸಲೇ ಬೇಕಾದ ಅನಿವಾರ್ಯತೆ ಎದುರಾದಾಗ ಅಮಿತಾಭ್ಗೆ ಸರಿಸಾಟಿಯಾಗಿ ಶೋವನ್ನು ಮುನ್ನಡೆಸುವ ಆಂಕರ್ನನ್ನು ಹುಡುಕುತ್ತಿದ್ದಾಗ ಮೊದಲು ನೆನಪಾದವನೇ ಶಾರುಖ್ ಖಾನ್..!
2003ರಿಂದ ಶಾರುಖ್ನ ಗೋಲ್ಡ್ಡನ್ ಡೇಸ್ ಶುರುವಾಗಿದ್ದವು. ಶಾರುಖ್ ನಿಮರ್ಾಣದ `ಚಲ್ತೆ ಚಲ್ತೆ'' ಸಿನಿಮಾ ಕ್ಲಿಕ್ ಆಗಿತ್ತು. ಅವನ ಹಾಗೂ ಕರಣ್ ಜೋಹರ್, ಫರಾಖಾನ್ ಸಿನಿಮಾಗಳು ಹಿಟ್ ಮೇಲೆ ಹಿಟ್ ಆಗಿದ್ದವು. ಶಾರುಖ್ ಎಲ್ಲರ ಫೇವರಿಟ್ ನಟನಾಗಿದ್ದ, ಹಾಗಾಗಿ ಸ್ಟಾರ್ ಕಂಪನಿ ಕೆಬಿಸಿ ಸೀಸನ್-3ನ ಸಾರಥ್ಯವನ್ನು ಶಾರುಖ್ಗೆ ವಹಿಸಿತು. ಆ ಸಮಯದಲ್ಲಿ `ಬಿಗ್ ಬಿ''ಅಮಿತಾಭ್ ಮತ್ತು `ಬಾಲಿವುಡ್ ಬಾದ್ಶಾಹ್'' ಶಾರುಖ್ಖಾನ್ ನಡುವೆ ಬಾಲಿವುಡ್ನ ನಂ-1 ಪಟ್ಟಕ್ಕಾಗಿ ಸಣ್ಣಗೆ ಯುದ್ದ ಶುರುವಾಗಿತ್ತು. ಆ ಸಮಯದಲ್ಲಿ ಇದು ದೊಡ್ಡ ಚಚರ್ೆಗೆ ಗ್ರಾಸವಾಗಿದ್ದರೂ ಶಾರುಖ್ ಮತ್ತು ಅಮಿತಾಭ್ ಮಾತ್ರ ಇದನ್ನ ತಳ್ಳಿಹಾಕಿದ್ದರು. ವಾಸ್ತವ ಸಂಗತಿ ಮಾತ್ರ ಅದೇ ಆಗಿತ್ತು (!?)
ಜನವರಿ22,2007ರಂದು ಕೌನ್ ಬನೇಗಾ ಕರೋಡ್ಪತಿ ಶಾರುಖ್ಖಾನ್ನಿಂದ ಭರ್ಜರಿಯಾಗಿ ಒಪನಿಂಗ್ ಪಡೆಯಿತು, ಹಾಗೆಯೇ ಅಷ್ಟೇ ಬೇಗ ಅಂದ್ರೆ ಎಪ್ರಿಲ್ 19,2007ರಂದು ಕೇವಲ ಮೂರೇ ತಿಂಗಳಲ್ಲಿ ಶೋ ನಿಂತು ಹೋಯಿತು. ಶಾರುಖ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಕೆಬಿಸಿ-3 ಟಿಆರ್ಪಿ ಮೊದಲವಾರ 5.3 ಅಂಕಗಳನ್ನು ಮಾತ್ರ ಗಳಿಸಿತ್ತು, ಉಳಿದಂತೆ ಮುಂಬೈನಲ್ಲಿ 2.5 ಹಾಗೂ ಕೋಲ್ಕತಾದಲ್ಲಿ ಕೇವಲ 2 ಅಂಕಗಳನ್ನ ಮಾತ್ರ ಗಳಿಸಿತ್ತು. ಇದು ಕೆಬಿಸಿ-2ಗಿಂತ ತುಂಬಾನೇ ಕಡಿಮೆಯಾಗಿತ್ತು. ಅಮಿತಾಭನ ಶೋ ಮೊದಲವಾರದಲ್ಲಿ ಮುಂಬೈ 9.5, ದೆಹಲಿ 6.5 ಹಾಗೂ ಕೊಲ್ಕತಾ 3.4 ಅಂಕಗಳನ್ನು ಗಳಿಸಿತ್ತು. ಶಾರುಖ್ ತನ್ನ ಶೋದಲ್ಲಿ ಜೋಕ್, ಟಿಆರ್ಪಿ ವಿಷಯದಲ್ಲಿ ಸಂಪೂರ್ಣವಾಗಿ ಸೋತಿದ್ದ..!
ಅಮಿತಾಭ್ಗಿಂತ ಶಾರುಖ್ನನ್ನು ಟಿವಿಯಲ್ಲಿ ಇನ್ನಷ್ಟು ಬೆಳೆಸಬೆಕೆಂದು ಹಪಹಪಿಸುತ್ತಿದ್ದ ಶಾರುಖ್ನ ಬೆಂಬಲಿಗರು ಹಾಗೂ ವಾಹಿನಿಯವರಿಗೆ ದೊಡ್ಡ ಫ್ಲಾಪ್ ಸಿಕ್ಕಿತ್ತು. ಸೀಸನ್-3 ಸೋಲಲಿಕ್ಕೆ ಶಾರುಖ್ನೇ ಮುಖ್ಯ ಕಾರಣ ಅನ್ನೋದು ಟಿವಿ ವಿಮರ್ಷಕರ ಅಭಿಪ್ರಾಯವಾಗಿತ್ತು, ಇದಲ್ಲದೇ ಅಲ್ಲಿಯವರಗೆ ಅಮಿತಾಭ್ನನ್ನು ಮಾತ್ರ ಕೆಬಿಸಿ ಸೀಟಲ್ಲಿ ನೋಡುತ್ತಿದ್ದ ಜನರಿಗೆ ಅಷ್ಟು ಬೇಗ ಶಾರುಖ್ನನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ, ಅಮಿತಾಭ್ನಂತೆ ಜನರನ್ನು ತನ್ನೆಡೆ ಹಿಡಿದಿಟ್ಟುಕೊಳ್ಳುವ ಮ್ಯಾಜಿಕ್ ಶಾರುಖ್ನಲ್ಲಿರಲಿಲ್ಲ. ಸೀಸನ್-3 ಫ್ಲಾಪ್ ಆಗೋದರ ಜೊತೆಗೆ ಶಾರುಖ್ ಮತ್ತೊಮ್ಮೆ ಕೆಬಿಸಿ ಸೀಟಿಗೆ ಬರಲಾರದಂತೆ ಮಾಡಿತ್ತು. ಶಾರುಖ್ ಸೋತಿದ್ದು ಇನ್ನೊಂದೆಡೆ ಅಮಿತಾಭ್ರವರನ್ನ ಮತ್ತೊಮ್ಮೆ ಕೆಬಿಸಿ ಸೀಟಿಗೆ ರೆಡ್ ಕಾಪರ್ೆಟ್ ಹಾಕಿ ಕರೆತರುವ ಸನ್ನಿವೇಶ ಸಿದ್ದವಾಯಿತು.
ಅಕ್ಟೋಬರ್11,2010 ಅಮಿತಾಭ್ ಬಚ್ಚನ್ರ 68ನೇ ಹುಟ್ಟಿದ ಹಬ್ಬ. ಅಂದೇ ಕೆಬಿಸಿ ಸೀಸನ್-4 ಮತ್ತೆ ಅಮಿತಾಭ್ ಸಾರಥ್ಯದಲ್ಲಿ ಸೋನಿ ಟೆಲಿವಿಷನ್ನಲ್ಲಿ ಪ್ರಾರಂಭವಾಯಿತು. ಇದಕ್ಕಾಗಿ ಅಮಿತಾಭ್ಗೆ ಪ್ರತಿ ಎಪಿಸೋಡ್ಗೆ 60 ಲಕ್ಷ ಹಣವನ್ನು ನೀಡಲಾಗಿತ್ತು. ಮೂಲಗಳ ಪ್ರಕಾರ ಅಮಿತಾಭ್ ಜೊತೆ ಶೋದಲ್ಲಿ ಭಾಗವಹಿಸಲಿಕ್ಕೆ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಆಡಿಷನ್ನಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಬಹುಮಾನ ಮೊತ್ತವನ್ನು ಮತ್ತೆ ಒಂದು ಕೋಟಿಗೆ ಇಳಿಸಿ, ಜಾಕ್ಪಾಟ್ ಪ್ರಶ್ನೆಗೆ ಉತ್ತರಿಸಿದರೆ 5 ಕೋಟಿ ನೀಡುವ ಚಾನ್ಸ್ ನೀಡಲಾಗಿತ್ತು. ಸೀಸನ್-4 ಕೂಡ ನಿರೀಕ್ಷೆಯಂತೆ ಯಶಸ್ವಿಯಾಗಿ ಡಿಸೆಂಬರ್ 9, 2010 ಕ್ಕೆ ಮುಗಿಯಿತು.
ಈಗ ಮತ್ತೊಮ್ಮೆ ಕೆಬಿಸಿ-5 ಪ್ರಾರಂಭವಾಗಲಿಕ್ಕೆ ದೊಡ್ಡ ವೇದಿಕೆ ಸೋನಿ ಟಿಲಿವಿಷನ್ನಲ್ಲಿ ಸಿದ್ದವಾಗುತ್ತಿದೆ. ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮವನ್ನ ಅಮಿತಾಭ್ ಇಲ್ಲದೇ ಕಲ್ಪಿಸಿಕೊಳ್ಳಲಿಕ್ಕೂ ಆಗೋಲ್ಲ, ಹೇಗೆ ಕನ್ನಡಿಗರಿಗೆ ಕೃಷ್ಣದೇವರಾಯನ ಪಾತ್ರ ಅಂದರೆ ಮೊದಲು ನೆನಪಾಗೋದೇ ಅಣ್ಣಾವ್ರು..ಅದೇ ರೀತಿ ಆಂಧ್ರದವರಿಗೆ ಶ್ರೀಕೃಷ್ಣನ ಪಾತ್ರವನ್ನು ಎನ್ಟಿಆರ್ ಇಲ್ಲದೇ ಬೇರೆಯವರನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ. ಹೀಗೆ ಈ ಮೇರು ನಟರುಗಳೆಲ್ಲಾ ಆಯಾ ಪಾತ್ರಗಳಿಗೆ ಆತ್ಮದಂತೆ ಬೆರೆತುಹೋಗಿದ್ದಾರೆ. ಈ ಮಾತು ಅಮಿತಾಭ್ ಬಚ್ಚನ್ರ `ಕೌನ್ ಬನೇಗಾ ಕರೋಡ್ಪತಿ'' ಕಾರ್ಯಕ್ರಮಕ್ಕೆ ಹೋಲಿಕೆ ಮಾಡಿದರೆ ಅತಿಶಯೋಕ್ತಿ ಆಗೋಲ್ಲ.
ಬಾಲಿವುಡ್ ಸ್ಟಾರ್ಗಳು ಕೂಡ ಈ ಶೋದಲ್ಲಿ ಭಾಗವಹಿಸಿದ್ರು
ಅಮಿತಾಭ್ನ ಶೋದಲ್ಲಿ ಉಳಿದ ಬಾಲಿವುಡ್ ಸ್ಟಾರ್ಗಳಿಗೇನು ಕಡಿಮೆ ಇರಲಿಲ್ಲ. ಕೆಲವರು ಈ ಶೋದಲ್ಲಿ ಭಾಗವಹಿಸಲಿಕ್ಕೆ ತುದಿಗಾಲಲ್ಲಿ ನಿಲ್ಲುತ್ತಿದ್ದರು.ಕೆಲವು ನಟ ನಟಿಯರು ಅದೇ ತಮ್ಮ ದೊಡ್ಡ ಸೌಭಾಗ್ಯ ಅಂತ ತಿಳ್ಕೋತ್ತಿದ್ರು. `ಹೂವಿನ ಜೊತೆ ನಾರು ಕೂಡ ದೇವರ ಮುಡಿಗೆ'' ಅನ್ನೋ ಮಾತಂತೆ ಅಮಿತಾಭ್ ಜನಪ್ರಿಯತೆಯಲ್ಲಿ ತಮ್ಮದೂ ಒಂದು ಪಾಲಿರಲಿ ಅನ್ನೋದು ಕೆಲವರ ನಂಬಿಕೆಯಾಗಿತ್ತು. ದೀಪಾವಳಿ,ದಸರಾ, ನ್ಯೂ ಇಯರ್ ಹೀಗೆ ಇನ್ನು ಹಲವು ವಿಶೇಷ ದಿನಗಳಂದು ಬಾಲಿವುಡ್ ಸ್ಟಾರ್ಗಳು ಆಗಮಿಸಿ ಲಕ್ಷಗಟ್ಟಲೇ ಹಣವನ್ನು ದೋಚಿಕೊಂಡು ಹೋಗ್ತಿದ್ರು. ಹೀಗೆ ಬಂದ ಸೆಲೆಬ್ರಿಟಿಗಳಲ್ಲಿ ಅಮೀರ್ ಖಾನ್ ಮೊದಲಿಗ. ಅಮೀರ್ ಶೋದಲ್ಲಿ ಅಮಿತಾಭ್ ಕೇಳಿದ ಎಲ್ಲ ಪ್ರಶ್ನೆಗಳಿಗೆ ಪಟಪಟ ಉತ್ತರ ಹೇಳಿ ಸುಮಾರು 50 ಲಕ್ಷ ಹಣವನ್ನು ಗೆದ್ದಿದ್ದ. ಅದರಂತೆ ಸೋನಾಲಿ ಬೇಂದ್ರೆ 25 ಲಕ್ಷ, ಶಾರುಖ್ಖಾನ್ 50 ಲಕ್ಷ, ರಾಣಿ ಮುಖಜರ್ಿ 25 ಲಕ್ಷ, ಸಂಜಯ್ದತ್ 50 ಲಕ್ಷ, ಅನಿಲ್ ಕಪೂರ್ 50ಲಕ್ಷ ಹಾಗೂ ಕಾಜೋಲ್ ಹಾಗೂ ಅಜಯ್ ದೇವಗನ್ 1 ಕೋಟಿ, ಸೈಫ್ ಅಲಿಖಾನ್ 50ಲಕ್ಷ ಇನ್ನು ಹಲವು ಬಾಲಿವುಡ್ ಸೆಲಿಬ್ರೆಟಿಗಳು ಶೋದಲ್ಲಿ ಭಾಗವಹಿಸಿ ಲಕ್ಷಗಟ್ಟಲೆ ಹಣವನ್ನು ಗೆದ್ದಿದ್ದರು. ಇಲ್ಲೊಂದು ತುಂಬಾ ಅನುಮಾನಕ್ಕೆ ಈಡುಮಾಡಿದಂತ ಸಂಗತಿಯೆಂದರೆ ಭಾಗವಹಿಸಿದ ಸಾಮಾನ್ಯ ಜನರು ಕೆಲವೇ ಲಕ್ಷದ ಹಣವನ್ನು ಗೆಲ್ಲಲಿಕ್ಕೆ ಹರಸಾಹಸ ಪಡುವಾಗ ಈ ಬಾಲಿವುಡ್ ಸ್ಟಾರ್ಗಳು ಪಟಪಟನೆ ಉತ್ತರ ಹೇಳಿ ಲಕ್ಷಗಟ್ಟಲೆ ಹಣವನ್ನು ಗೆಲ್ಲೋದನ್ನ ಕಂಡವರಿಗೆ ಶೋದ ಮೇಲೆ ಅಪನಂಬಿಕೆ ಹಾಗೂ ಅನುಮಾನ ಬೆಳೆಯಲಿಕ್ಕೆ ಕಾರಣವಾಗಿತ್ತು.ಭಾಗವಹಿಸಿದ ಎಲ್ಲ ಸ್ಟಾರ್ಗಳು ಮಿನಿಮಮ್ 50 ಲಕ್ಷದ ಹಣವನ್ನು ಪಡೆದುಕೊಂಡು ಹೋಗಿದ್ದಾರೆ, ಇದು ಹೇಗೆ ಸಾಧ್ಯಯಾಯಿತು? ಕೆಲವು ಸ್ಟಾರ್ಗಳು ಗೆದ್ದ ಹಣವನ್ನು ಟ್ರಸ್ಟ್ಗಳಿಗೆ ನೀಡಿ ಶೋದಲ್ಲಿ ದೊಡ್ಡವರೆನಿಸಿಕೊಂಡವರಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಮಾಧುರಿ ದೀಕ್ಷಿತ್ ಗೆದ್ದ 50 ಲಕ್ಷ ಹಣವನ್ನು ನೆರೆ ಸಂತ್ರಸ್ಥರ ನಿಧಿಗೆ ನೀಡಿದ್ದರು. ಇದೆಲ್ಲಾ ಶೋದ ಪಾಪುಲಾರಿಟಿ ಹೆಚ್ಚಿಸಲಿಕ್ಕೆ ಚಾನೆಲ್ ಮಾಡಿದ ಗಿಮಿಕ್ಸ್ಗಳು ಅಂತ ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ..!
(ರಮೇಶ್ ಅರವಿಂದ್ ಸಾರಥ್ಯದಲ್ಲಿ ಕನ್ನಡದಲ್ಲಿ ಕೌನ್ ಬನೇಗಾ ಕರೋಡ್ಪತಿ
ಈಗಾಗ್ಲೆ ಹೇಳಿದಂತೆ ಕೆಬಿಸಿ ಸೀಸನ್-5 ಮತ್ತೊಮ್ಮೆ ಭರ್ಜರಿಯಾಗಿ ಒಪನಿಂಗ್ ಪಡೆಯೋಕೆ ಸಿದ್ದವಾಗಿದೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ, ಬೆಂಗಾಲಿ, ಭೋಜ್ಪುರಿ,ಕನ್ನಡ,ತಮಿಳು ಹಾಗೂ ತೆಲುಗು ಹೀಗೆ 5 ಭಾಷೆಗಳಲ್ಲಿ ಕಾರ್ಯಕ್ರಮ ಮಾಡಲಿಕ್ಕೆ ಸಿದ್ದಾರ್ಥ ಬಸು ನಿಮರ್ಾಣದ `ಬಿಗ್ ಸಿನಜರ್ಿ'' ಕಂಪನಿ ರೆಡಿಯಾಗಿದೆ. ಆಯಾ ಭಾಷೆಯಲ್ಲಿ ಅಲ್ಲಿನ ಫೇಮಸ್ ಸೆಲಿಬ್ರೆಟಿಗಳನ್ನ ಕಂಪನಿ ಆಯ್ಕೆಮಾಡಿಕೊಂಡಿದೆ. ಹಿಂದಿಯಲ್ಲಿ ಹಳೆ ಹುಲಿ ಅಮಿತಾಭ್ ಇದ್ದೇ ಇರುತ್ತಾರೆ, ಅದೇ ರೀತಿ ಬೆಂಗಾಲಿ ಭಾಷೆಯಲ್ಲಿ ಈ ಗೇಮ್ ಶೋದ ನಿರೂಪಣೆಯನ್ನು ಖ್ಯಾತ ಕ್ರಿಕೆೆಟಿಗ ಸೌರವ್ಗಂಗೂಲಿ, ಭೋಜ್ಪುರಿ ಭಾಷೆಯಲ್ಲಿ ಹಿರಿಯ ನಟ ಶತ್ರುಘ್ನ ಸಿನ್ಹಾ ಮಾಡಲಿದ್ದಾರೆ. ಬೆಂಗಾಲಿ ಭಾಷೆಯಲ್ಲಿ ಈ ಶೋಗೆ `ಕೀ ಹೋಬೆ ಬಾಂಗ್ಲಾರ್ ಕೋಟಿಪತಿ'' , ಭೋಜ್ಪುರಿ ಭಾಷೆಯಲ್ಲಿ `ಕೀ ಬಾನಿ ಕ್ರೋರ್ಪತಿ'' ಅಂತ ಹೆಸರಿಡಲಾಗಿದೆ.
ಭೋಜ್ಪುರಿ ಭಾಷೆಯ ಈ ಗೇಮ್ ಶೋಗೆ ಗ್ಲ್ಯಾಮರ್ ಹಾಗೂ ಒಳ್ಳೆಯ ಒಪನಿಂಗ್ಗೆ ಶತ್ರುಘ್ನ ಸಿನ್ಹಾರ ಮಗಳು ಸೋನಾಕ್ಷಿ ಬರುವ ಸಾಧ್ಯತೆ ಇದೆ. ಅಕಸ್ಮಾತ್ ಸೋನಾಕ್ಷಿ ಬಂದರೆ ಅಲ್ಲಿಗೆ ಸಲ್ಮಾನ್ ಮತ್ತು ಅಬರ್ಾಜ್ಖಾನ್ ಗೆಸ್ಟ್ಗಳು ಆಗಿ ಬರದಂತೂ ಸತ್ಯ ! ಮಹುವಾ ಟಿವಿ ಬೆಂಗಾಲಿ ಹಾಗೂ ಭೋಜ್ಪುರಿ ಭಾಷೆಯ ಪ್ರಸಾರದ ಹಕ್ಕನ್ನ ಹೊಂದಿದೆ. ದಕ್ಷಿಣದಲ್ಲಿ ಸನ್ಟಿವಿ ಕನ್ನಡ, ತಮಿಳು ಹಾಗೂ ತೆಲುಗು ಚಾನೆಲ್ಗಳ ಪ್ರಸಾರದ ಹಕ್ಕನ್ನ ಪಡೆದಿದೆ. ದಕ್ಷಿಣದ ಖ್ಯಾತ ಖಳನಟ ಪ್ರಕಾಶ್ ರೈ ತಮಿಳು (ಉಂಗಳೀಲ್ ಯಾರ್ ಕೋದೆಸ್ವರನ್) ಹಾಗೂ ತೆಲುಗು (ಮೇಲೊ ಏವರು ಕೋದಿಸ್ವರುಡು) ಈ ಎರಡು ಭಾಷೆಗಳ ನಿರೂಪಣೆಯನ್ನು ಮಾಡಲಿದ್ದಾರೆ, ಕನ್ನಡದಲ್ಲಿ (ನಿಮ್ಮಲ್ಲಿ ಯಾರು ಕೋಟ್ಯಾಧಿಪತಿ) ರಮೇಶ್ ಅರವಿಂದ್ ಅಮಿತಾಭ್ ಪಾತ್ರ ಮಾಡಲಿಕ್ಕೆ ರೆಡಿಯಾಗಿದ್ದಾರೆ. ಇದು ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಕನರ್ಾಟಕದಲ್ಲಿ ಯಾರು ಕೋಟ್ಯಾಧಿಪತಿಗಳು ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಕೆಬಿಸಿಯ ಹಿಂದೆ `ಅಂಡರ್ವಲ್ಡ್' ಬ್ಲಾಕ್ ಮನಿ'
ಕೆಬಿಸಿ ಶೋ ಅಷ್ಟೊಂದು ಜನಪ್ರಿಯತೆಯನ್ನು ಹೊಂದಿದ್ದರೂ ವಿವಾದಗಳು ಕೂಡ ಅಮಿತಾಭ್ನನ್ನ ಹಾಗೂ ಈ ಗೇಮ್ ಶೋವನ್ನ ಬಿಡಲಿಲ್ಲ. ಇದೊಂಥರ ಕ್ವೀಜ್ ಮೂಲಕ ಗ್ಯಾಮ್ಲಿಂಗ್ ದಂಧೆ ಮಾಡೋ ಕಾರ್ಯಕ್ರಮ ಅಂತ ಬುದ್ದಿಜೀವಿಗಳು ಆಪಾದನೆ ಮಾಡಿದ್ರು. ತಮ್ಮ ಸಿನಿಮಾಗಳ ಹೆಸರನ್ನೇ ನೆನಪಿಟ್ಟುಕೊಳ್ಳಲು ಆಗದಂತಹ ಸ್ಟಾರ್ಗಳೆಲ್ಲಾ ಜನರಲ್ ನಾಲೇಜ್, ಐತಿಹಾಸಿಕ, ಪೌರಾಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪಟಪಟ ಉತ್ತರ ಹೇಳೊದನ್ನ ನೋಡಿದ ಕೆಲವರಿಗೆ ಉತ್ತರ ಪತ್ರಿಕೆ ಲೀಕ್ ಆದ ಅನುಮಾನ ಕಂಡಿದಂತೂ ನಿಜ, ಜೊತೆಗೆ ಈ ಶೋದ ಹಿಂದೆ ಭೂಗತ ಜಗತ್ತಿನ ಕಪ್ಪುಹಣ ಓಡಾಡುತ್ತಿತ್ತು, ಆ ಮೂಲಕ ಬ್ಲಾಕ್ಮನಿ ವೈಟ್ ಮನಿಯಾಗಿ ಮಾಪರ್ಾಡಾಗುತ್ತಿತ್ತು ಅನ್ನೋ ಊಹೆ ಕೂಡ ಇತ್ತು. ಸೆಲೆಬ್ರೆಟಿಗಳೆಲ್ಲಾ ಗೆದ್ದ ಲಕ್ಷಗಟ್ಟಲೇ ಹಣವನ್ನು ಕೆಲವು ಟ್ರಸ್ಟ್ಗಳಿಗೆ ದೇಣಿಗೆಯಾಗಿ ನೀಡುತ್ತಿದ್ದರು, ಈ ಟ್ರಸ್ಟ್ಗಳಿಗೆ ಹೋದ ಹಣಕ್ಕೆ ಯಾವುದೇ ತೆರಿಗೆ ಇರುತ್ತಿರಲಿಲ್ಲ. ಹೀಗೆ ಟ್ರಸ್ಟ್ಗೆ ಸೇರಿದ ಹಣ ವೈಟ್ಮನಿಯಾಗಿ ಸೇರಬೇಕಾದವರ ಅಕೌಂಟ್ಗೆ ಸೇರುತ್ತಿತ್ತು. ಹೀಗೆ ಈ ತರಹದ ಹತ್ತು ಹಲವು ಅನುಮಾನಗಳಿಗೆ ಕೆಬಿಸಿ ಎಡೆ ಮಾಡಿಕೊಟ್ಟಿತ್ತು. ಈ ಎಲ್ಲ ಅನುಮಾನಗಳು ದಾಖಲೆ ಸಮೇತ ಹೊರಬರದೇ ಹಾಗೆಯೇ ಊಹೆಗಳಾಗಿಯೇ ಉಳಿದುಹೋದವು.