Wednesday, 28 September 2011

ಕನಸಿನಲ್ಲಿ ಕಾಡಿದ ಅನಂತ ಪದ್ಮನಾಭನ ಪ್ರಶ್ನೆಗಳು..!

ಇಡೀ ಪ್ರಪಂಚದ ಕಣ್ಣು ಬಾಯಿ ಈಗ ಭಾರತದ ಮೇಲೆ ಬಿದ್ದಿದೆ. ಹೀಗೆ ಬಿದ್ದಿರುವ ಕಣ್ಣು ನಮ್ಮ ದೇಶದ ಸಾಫ್ಟವೇರ್ ಕಂಪನಿಯಾಗಲಿ,ದೇಶದ ಆಥರ್ಿಕ ವ್ಯವಸ್ಥೆಯ ಮೇಲಾಗಲಿ ಅಥವಾ ಇನ್ನಿತರ ದೊಡ್ಡ ದೊಡ್ಡ ಸಾವಿರ ಲಕ್ಷ ಕೋಟಿಯ ಸಕರ್ಾರಿ ಇಲ್ಲವೇ ಖಾಸಗಿ ಕಂಪನಿಗಳ ಯೋಜನೆಗಳ ಮೇಲೆ ಬಿದ್ದಿಲ್ಲ. ಈಗ ಬಿದ್ದಿರುವ ಕಣ್ಣು ಅದು ಅನಂತ ಪದ್ಮನಾಭ ಸ್ವಾಮಿಯ ಮೇಲೆ..! ದೇವರ ನಾಡು ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ಸ್ವಾಮಿ ತಾನು ಜಗತ್ತಿನ ಅತಿ ದೊಡ್ಡ ಶ್ರೀಮಂತ ದೇವರೆಂದು ಹೇಳಿಕೊಂಡಿರುವುದು. ಸದ್ಯ ಈತನೇ ರೈಸಿಂಗ್ ಸ್ಟಾರ್..! ದೇಗುಲದಲ್ಲಿ ಸಿಕ್ಕಿರುವ ಅಗಾಧ ನಿಧಿಗೆ ಬೆಲೆ ಕಟ್ಟಲಿಕ್ಕೆ ಸೊನ್ನೆಗಳಿಗೂ ಈಗ ಬೆಲೆಯಿಲ್ಲ. ವಿಜಯನಗರದಂತಹ ಶ್ರೀಮಂತ ಸಮೃಧ್ದ ಸಾಮ್ರಾಜ್ಯವನ್ನು ಹೊಂದಿದ್ದ ನಮ್ಮ ದೇಶ ಈಗ ಮತ್ತೋಮ್ಮೆ ಜಗತ್ತಿಗೆ ತನ್ನ ಶ್ರೀಮಂತಿಕೆಯನ್ನು ಮನವರಿಕೆ ಮಾಡಿಕೊಟ್ಟ ಹಾಗಿದೆ. ಬಿಲ್ಸ್ಗೇಟ್, ಮಿತ್ತಲ್, ಬಫೆಟ್, ಟಾಟಾ ಮತ್ತು ಅಂಬಾನಿಯಂತಹ ದೈತ್ಯರು ಲಕ್ಷಕೋಟಿಗಳಷ್ಟು ಬೆಲೆಬಾಳುವ ತಮ್ಮ ಸಾಮ್ರಾಜ್ಯವನ್ನು ಕಟ್ಟಲು ಹಲವಾರು ದಶಕಗಳನ್ನೇ ತೆಗೆದುಕೊಂಡರು. ಆದರೆ ನಮ್ಮ ಪದ್ಮನಾಭಸ್ವಾಮಿ ಒಂದು ರಾತ್ರಿಯೊಳಗೆ ತನ್ನ ಇನ್ನೊಂದು ಅವತಾರ ತಿರುಪತಿ ತಿಮ್ಮಪ್ಪ ಹಾಗೂ ಅನೇಕ ಲಕ್ಷ್ಮಿ ಪುತ್ರರನ್ನು ಮೀರಿಸಿ ತಾನೇ ನಿಜವಾದ ಕುಬೇರನ್ನೆಂದು ನಿರೂಪಿಸಿಬಿಟ್ಟ.

ಅಪಾರ ಪ್ರಮಾಣದಲ್ಲಿ ದೊರೆತಿರುವ ಈ ಸಂಪತ್ತಿನಿಂದ ತಿರುವನಂತಪುರದ ದೇಗುಲ, ರಾಜಮನೆತನ ಹಾಗೂ ಕೇರಳ ಸಕರ್ಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ನಿಧಿ ಸಿಕ್ಕಿದಷ್ಟೇ ಸತ್ಯ. ನಿಧಿಯೇನೋ ಸಿಕ್ಕಿದೆ, ಆದರೆ ಕಲ್ಪಿಸಿಕೊಳ್ಳಲಾಗದಷ್ಟು..! ಅತಿಯಾಗಿ ಕುಡಿದರೆ ನೀರು ಕೂಡ ವಿಷವಾಗುತ್ತೆ, ವಸ್ತುಸ್ಥಿತಿ ಹೀಗಿರುವಾಗ ಸದ್ಯ ದೇವಸ್ಥಾನ ಹಾಗೂ ರಾಜಮನೆತನದವರಲ್ಲಿ  ನೆಮ್ಮದಿಯಿದ್ದಂತೆ ಕಾಣುತ್ತಿಲ್ಲ.  ಸದ್ಯ ಚಿನಿವಾರ ಪೇಟೆಯಲ್ಲಿ ಬಂಗಾರದ ದರ ಪ್ರತಿ ಗ್ರಾಂಗೆ 2300 ರೂ ದಾಟಿದೆ. ಬಂಗಾರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ. ದೇಶದಲ್ಲಿರುವ ಚಿನ್ನದ ಗಣಿಗಳೆಲ್ಲಾ ಮುಚ್ಚಿದ್ದು, ಹೊರದೇಶದಿಂದ ಚಿನ್ನವನ್ನು ರಫ್ತು ಮಾಡಿಕೊಳ್ಳಲಾಗುತ್ತಿದೆ. ಪ್ರತಿವರ್ಷ 350 ಟನ್ಗಳಷ್ಟು ಚಿನ್ನವನ್ನು ಹೊರದೇಶಗಳಿಂದ ರಫ್ತು ಮಾಡಿಕೊಳ್ಳಲಾಗುತ್ತಿದೆ. ಚಿನ್ನಕ್ಕೆ ವಿಪರೀತ ಬೇಡಿಕೆ ಬಂದು ಬಿಟ್ಟಿದೆ. ಚಿನ್ನದ ಮೇಲೆ ಕೋಟಿಗಟ್ಟಲೇ ಹಣ ಹೂಡಿಕೆಯಾಗುತ್ತಿದೆ. ಜನರು ಚಿನ್ನವನ್ನು ಕೇವಲ ಮೈಭಾರದ ಆಡಂಬರಕ್ಕೆ ಬಳಸುತ್ತಿಲ್ಲ, ಚಿನ್ನವನ್ನು ಉಳಿತಾಯ,ಠೇವಣಿ ಹಾಗೂ ಭವಿಷ್ಯದ ಭದ್ರತೆಯ ದೃಷ್ಟಿಯಲ್ಲಿ ಚಿನ್ನವನ್ನು ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಚಿನ್ನದ ದರ ಈಗ ಪ್ರತಿ 10 ಗ್ರಾಂಗೆ 26000 ರೂ. ದಾಟಿದೆ. ಇಲ್ಲೊಂದು ಸೂಕ್ಷ್ಮ ವಿಚಾರವನ್ನು ನಾವು ಗಮನಿಸುವುದಾದರೆ ಅನಂತ ಪದ್ಮನಾಭ ದೇಗುಲದ ರಹಸ್ಯ ಮಾಳಿಗೆಗಳಲ್ಲಿ ದೊರೆತಿರುವ ಟನ್ಗಟ್ಟಲೇ ಬಂಗಾರ, ವಜ್ರ ವೈಢೂರ್ಯಗಳು ಸುಮಾರು ಹತ್ತು ವರ್ಷಗಳ ಹಿಂದೆ ದೊರೆತ್ತಿದ್ದರೆ ಅವುಗಳಿಗೆ ಇಷ್ಟೊಂದು ಬೆಲೆಯನ್ನು ಕಟ್ಟಲಾಗುತ್ತಿತ್ತೇ..? ಜೊತೆಗೆ ಮಾಧ್ಯಮಗಳಲ್ಲಿ ಇದರ ಬಗ್ಗೆ ಪೇಜ್ಗಳಷ್ಟು ಬರೆಯುತ್ತಿರಲಿಲ್ಲ ಕೂಡ. ಮಾಳಿಗೆಗಲಾದ `ಬಿ'ಯನ್ನು ಹೊರತುಪಡಿಸಿ `ಎ,ಸಿ,ಡಿ,ಇ,ಎಫ್' ಮಾಳಿಗೆಗಳಲ್ಲಿ ಸಿಕ್ಕಿರುವ ಅಪಾರ ನಿಧಿ ಸಂಪನ್ಮೂಲದ ಬೆಲೆ  ಬೇರೆ ಬೇರೆ ಮಾಧ್ಯಮಗಳಲ್ಲಿ ವರದಿಯಾದ ಅನುಸಾರ ಸುಮಾರು ಒಂದು ಲಕ್ಷ ಕೋಟಿ..! ಕಳೆದ ವರ್ಷ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಆಗಿನ ಕೃಷ್ಣದೇವರಾಯ, ಮೈಸೂರು ಅರಸರಿಂದ ಹಿಡಿದು ಈಗಿನ ಜನಾರ್ಧನ್ ರೆಡ್ಡಿಯವರೆಗೆ ದೇಣಿಗೆಯ ಸ್ವರೂಪದಲ್ಲಿ ಬಂದ ಹಣ, ಚಿನ್ನ, ವಜ್ರ ಕನಕಾದಿಗಳ ಬೆಲೆ ಸುಮಾರು 52000 ಕೋಟಿ ರೂಗಳು. ಪರಿಗಣಿಸಿದ ತಿಮ್ಮಪ್ಪನ ಆಸ್ತಿಯ ಬಗ್ಗೆ ಅನುಮಾನಗಳು ಹುಟ್ಟಿದ್ದು ನಿಜವಾದರೂ ಬೆಳಕಿಗೆ ಬಂದದ್ದು ತುಂಬಾ ಕಡಿಮೆ. ಹೆಚ್ಚಿನವರಿಗೆ ಕಾಣಿಕೆ ಹುಂಡಿಯಿಂದ ಸೋರಿಕೆಯಾಗಿದೆ ಅನ್ನೋದರ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಮಾತ್ರ  ನಿಜ. ಸದ್ಯದ ಚಿನಿವಾರ ಪೇಟೆಯ ಬಂಗಾರದ ದರ ಈಗಿನ ದರದ ಅನುಸಾರ ತಿರುಪತಿಯ ಸಂಪತ್ತು 52000 ಕೋಟಿ ರೂ.  ಅದೇ ಇನ್ನು ಹತ್ತು ವರ್ಷಗಳ ನಂತರ ಚಿನ್ನದ ರೇಟು ಪ್ರತಿ ಗ್ರಾಂಗೆ ಹತ್ತು ಸಾವಿರವಾದರೆ ತಿಮ್ಮಪ್ಪನ ಆಸ್ತಿ ಸುಮಾರು 3 ರಿಂದ 4 ಲಕ್ಷಕೋಟಿ ದಾಟಬಹುದು. ಈಗ ಕೇರಳದ  ಅನಂತ ಪದ್ಮನಾಭಸ್ವಾಮಿ ದೇಗುಲದ ಸ್ಥಿತಿಗತಿಯು ಹಾಗೆ. ನೂರಾರು ವರ್ಷಗಳಿಂದ ದೇಗುಲಕ್ಕೆ ಬಳುವಳಿ ಹಾಗೂ ತಿರುವನಂತಪುರದ ಅರಸರು ತಮ್ಮ ಸಕಲ ಆಸ್ತಿ ಸಮೃದ್ಧಿಯನ್ನೆಲ್ಲಾ  ಪದ್ಮನಾಭಸ್ವಾಮಿಗೆ ಧಾರೆ ಎರೆದು ದೇವರ ದಾಸರಾದ ಮೇಲೆ, ಅರಸರ ವಂಶಸ್ಥರು ಇಲ್ಲಿಯವರೆಗೆ ದೇಗುಲದ ದಾಸರಾಗಿದ್ದುಕೊಂಡೇ ದೇವಸ್ಥಾನದ ಆಡಳಿತ ಹಾಗೂ ಸಂಪೂರ್ಣ ಆಸ್ತಿಯನ್ನು ತುಂಬಾ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಶತಶತಮಾನಗಳಿಂದ ರಾಜಮನೆತನದವರ ಸುಪಧರ್ಿಯಲ್ಲಿ ಸುರಕ್ಷಿತವಾಗಿರುವ ಈ ಸಂಪತ್ತಿನ ಮುಂದಿನ ಗತಿ ಏನು ಎಂಬುದು ದೊಡ್ಡ ಜಾತಕದ ಪ್ರಶ್ನೆಯಂತೆ ಎಲ್ಲರನ್ನು ಕಾಡುತ್ತಿದೆ. ಈಗಾಗಲೇ ಅವರ ಮನೆತನದ ಕೆಲವರು ಅನಂತ ಪದ್ಮನಾಭನ ದೇಗುಲದ ಸಂಪತ್ತು ಸುರಕ್ಷಿತವಾಗಿರಲಿ ಅಂತ ದೇವರಲ್ಲಿ ಪ್ರಾಥರ್ಿಸುತ್ತಾ ಮೊನ್ನೆ ಉಡುಪಿ, ಶೃಂಗೇರಿಯವರಗೆ ಬಂದಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಮಾಧ್ಯಮಗಳಲ್ಲಿ ವರದಿಯಾದಂತೆ ದೇಗುಲದಲ್ಲಿ ಸಿಕ್ಕಿರುವ ನಿಧಿಯ ಪ್ರಮಾಣವನ್ನು ಸುಮಾರು ಒಂದು ಲಕ್ಷ ಕೋಟಿಗೆ (22.3 ಬಿಲಿಯನ್ ಡಾಲರ್) ಮೀಸಲಾಗಿಡಲಾಗಿದೆ. ಆದರೆ ಇದರ ಹಿಂದೆ ಇನ್ನೊಂದು ದೊಡ್ಡ ಸತ್ಯವಿದೆ. ಇಂದು ನಾವು ದಿನನಿತ್ಯ ಪತ್ರಿಕೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆ ಹಳೆಯ ದೇವಸ್ಥಾನಗಳ ದೇವರ ವಿಗ್ರಹಗಳು, ಬಂಗಾರದ ಒಡವೆ, ನಾಣ್ಯಗಳ ಕಳ್ಳತನವನ್ನು ಕೇಳುತ್ತಲೇ ಇರುತ್ತೇವೆ. ವಿಶೇಷವಾಗಿ ನಮ್ಮ ದೇಶದ ಈ ಪ್ರಾಚೀನ ಸಂಪತ್ತಿಗೆ ದೇಶದ ಹೊರಗಡೆ ಬೆಲೆಕಟ್ಟಲಾಗದಷ್ಟು ವ್ಯವಹಾರವಿದೆ. ಹೀಗೆ ನಮ್ಮ ದೇಶದ ಪ್ರಾಚೀನ ಸಂಪತ್ತೆಲ್ಲ ಈಗ ಕಳ್ಳಮಾರ್ಗವಾಗಿ ಹೊರದೇಶಕ್ಕೆ ರಫ್ತು ಆಗುತ್ತಿದೆ. ದೇಶಿಯ ಸಂಪತ್ತು ಖಾಲಿಯಾಗುತ್ತಿದೆ. ಈ ಒಂದು ದೊಡ್ಡ ಕಳ್ಳದಂಧೆಯ ಹಿಂದೆ ಭೂಗತ ಜಗತ್ತು, ರಾಜಕೀಯ ಹಾಗೂ ರಕ್ಷಣಾ ಇಲಾಖೆಯ ಅರೆತಲೆಗಳು ಕೆಲಸ ಮಾಡುತ್ತಿವೆ. ಮೂಲಗಳ ಪ್ರಕಾರ ಸಿಕ್ಕಿರುವ ನಿಧಿಯ ಬೆಲೆ ಸುಮಾರು 40 ರಿಂದ 50 ಲಕ್ಷ ಕೋಟಿ ಬಾಳಬಹುದು. ಇದು ದೇಶದ ವಾಷರ್ಿಕ ವರಮಾನ, ಬಜೆಟ್ಟಿಗಿಂತ ಹತ್ತರಷ್ಟು ದೊಡ್ಡದು. ಇಷ್ಟೋಂದು ಸಂಪತ್ತು ಕೇವಲ ಒಂದೇ ದೇವಸ್ಥಾನದಲ್ಲಿದೆ. ಆದರೆ ಇಷ್ಟೊಂದು ಬೆಲೆಬಾಳುವ ಸ್ವಾಮಿಯ ಚಿನ್ನ, ವಜ್ರ ಹಾಗೂ ನವರತ್ನ ಕನಕಾದಿಗಳ ಬೆಲೆಯನ್ನು ಆದಷ್ಟು ಒಂದು ಲಕ್ಷ ಕೋಟಿಗೆ ಮೀಸಲಾಗಿಡಲಾಗಿದೆ. ಮೂಲ ನಿಧಿಯ ಬೆಲೆಯನ್ನು ಮಾಧ್ಯಮಗಳ ಮೂಲಕ ವರದಿ ಮಾಡಿದರೆ ಜಗತ್ತಿನ ಮಾಫಿಯಾ ಡಾನ್ಗಳ ಕಣ್ಣು ದೇವಸ್ಥಾನದ ಮೇಲೆ ಬೀಳಬಹುದು. ಇದರಿಂದ ದೇವಸ್ಥಾನ ಹಾಗೂ ತಿರುವನಂತಪುರಕ್ಕೆ ದೊಡ್ಡ ಅಪಾಯ ಕಾಣುವುದಂತೂ ಸತ್ಯ. ವಸ್ತುಸ್ಥಿತಿ ಹೀಗಿರುವಾಗ ಸಿಕ್ಕಿರುವ ಈ ಅಪಾರ ನಿಧಿಯ ಮುಂದೆ ಹತ್ತು ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಅದರಲ್ಲಿ ಮುಖ್ಯವಾಗಿ
1. ತಿರುವನಂತಪುರದ ರಾಜಮನೆತನಗಳು ತುಂಬಾ ಜತನದಿಂದ ಕಾಪಾಡಿಕೊಂಡು ಬಂದಿರುವ ಹಾಗೂ ವಿದೇಷಿ ಮಾರುಟ್ಟೆಯಲ್ಲಿ ಬಿಲಿಯನ್ ಹಾಗೂ ಟ್ರಿಲಿಯನ್ ಡಾಲರ್ಗಳಷ್ಟು ಬೆಲಬಾಳುವ ಈ ಸಂಪತ್ತನ್ನು ನಮ್ಮವರು ಕಾಪಾಡಲು ಸಾಧ್ಯವೇ..? ಇಷ್ಟೊಂದು ಅಗಾಧ ಪ್ರಮಾಣವಾದ ಸಂಪತ್ತು ಇಡೀ ಜಗತ್ತಿಗೆ ಬಾಯಿ ತೆರೆದಾಗ ಆ ಸಂಪತನ್ನು ಮತ್ತೇ ಅದೇ ದೇವಸ್ಥಾನದಲ್ಲಿ ಇಡಲಾದೀತೇ..! ಅಕಸ್ಮಾತ್ ಇಟ್ಟರೂ ಅಷ್ಟೊಂದು ರಕ್ಷಣೆಯನ್ನು ದೇವಸ್ಥಾನಕ್ಕೆ ನೀಡಲಾದೀತೇ..? ನಮ್ಮ ಪೊಲೀಸ್ ಹಾಗೂ ಕೇಂದ್ರದ ರಕ್ಷಣಾ ವ್ಯವಸ್ಥೆಯು ಅಷ್ಟೊಂದು ಬಲಿಷ್ಠವಾಗಿದೆಯೇ..?
2. ಸಂಪೂರ್ಣವಾಗಿ ಅರೆ ಬಂದ ರೀತಿಯಲ್ಲಿ ರಕ್ಷಣೆಯನ್ನು ನೀಡಿದರೂ ಸ್ಥಳೀಯರು, ಭಕ್ತಾದಿಗಳು ಹಾಗೂ ಸಾಮಾನ್ಯ ಪ್ರವಾಸಿಗರಿಗೆ ಸ್ವಾಮಿಯ ದರ್ಶನ ಮಾಡಲಾದೀತೇ...? ಅಕಸ್ಮಾತ್ ದರ್ಶನ ಭಾಗ್ಯ ಸಿಕ್ಕರೂ ಹತ್ತು ಕಣ್ಣುಗಳು ನಮ್ಮನ್ನು ಅನುಮಾನದಿಂದ ನೋಡದೇ ಇರದು.
3. ಸದ್ಯ ನಿಧಿಯು ಸಕರ್ಾರಕ್ಕೆ ಸೇರಬೇಕೋ ಅಥವಾ ದೇವಸ್ಥಾನಕ್ಕೇ ಸೇರಬೇಕೋ ಎನ್ನುವುದರ ಬಗ್ಗೆ ಇನ್ನೂ ಗೊಂದಲಗಳಿವೆ. ನಿಧಿಯ ವಿಷಯದಲ್ಲಿ ಸಕರ್ಾರಕ್ಕೆ ದೇವಸ್ಥಾನದ ಆಡಳಿತ ಕಮೀಟಿಯ ಮೇಲೆ ನಂಬಿಕೆಯಿಲ್ಲ, ಅದೇ ರೀತಿ ಕಮೀಟಿಯವರಿಗೆ ಸಕರ್ಾರವು ನಿಧಿಯನ್ನು ಉಳಿಸಿಕೊಳ್ಳುವ ನಂಬಿಕೆಯಿಲ್ಲ. ಹೀಗಾದಾಗ ಈ ಸಂಪತ್ತಿನ ಹೊಣೆಯನ್ನ ಯಾರು ನಿಜವಾಗಿ ಹೊರಬಲ್ಲರು.
4. ಅನೇಕ ದೇವಸ್ಥಾನಗಳ ಶೇ.50ರಷ್ಟು ಸಂಪತ್ತು ಸಕರ್ಾರದ ಸುಪದರ್ಿಯಲ್ಲಿದೆ. ಅಕಸ್ಮಾತ್ ಸ್ವಾಮಿಯ ಸಂಪತ್ತಿನ ಸ್ವಲ್ಪ ಭಾಗವನ್ನು ಸಕರ್ಾರ ವಶಪಡಿಸಿಕೊಂಡರೆ, ನಮ್ಮ ಈಗಿನ ರಾಜಕಾರಣಿಗಳನ್ನು ನಂಬಲಾದೀತೇ?. ಸಂಪತ್ತನ್ನು ದುರ್ಬಳಕೆ ಮಾಡಿಕೊಂಡರೂ ಅಚ್ಚರಿಯೇನಿಲ್ಲ.
5. ತಿರುಪತಿ ತಿಮ್ಮಪ್ಪನ ಸಂಪತ್ತಿನ ನಿರ್ವಹಣೆಯಂತೆ ಪದ್ಮನಾಭನ ಸಂಪತ್ತನ್ನ ಬ್ಯಾಂಕ್ನಲ್ಲಿ ಠೇವಣಿ ಇಟ್ಟು ಬರುವ ಬಡ್ಡಿಹಣದಲ್ಲಿ ಅಭಿವೃಧ್ದಿ ಕಾರ್ಯವನ್ನು ಮಾಡಬಹುದು. ಅಕಸ್ಮಾತ್ ಸಂಪತ್ತನ್ನು ಬ್ಯಾಂಕ್ನಲ್ಲಿಟ್ಟರೂ ಪದ್ಮನಾಭನ ಸಂಪತ್ತು ಅಲ್ಲಿ ಸುರಕ್ಷಿತವಾಗಿರುತ್ತೇ ಅನ್ನೋದಕ್ಕೆ ಬ್ಯಾಂಕ್ಗಳು ಗ್ಯಾರೆಂಟಿ ಕೊಡಲಾರವು. ನಮ್ಮ ದೇಶದ ಯಾವ ಬ್ಯಾಂಕ್ಗಳು ಅಂತಾರಾಷ್ಟ್ರೀಯ ಗುಣಮಟ್ಟದ ಸೆಕ್ಯೂರಿಟಿ ವ್ಯವಸ್ಥೆಯನ್ನು ಹೊಂದಿಲ್ಲ. ಇಲ್ಲಿಯೂ ಕೂಡ ಸಂಪತ್ತಿನ ಅಳಿವು-ಉಳಿವಿನ ಪ್ರಶ್ನೆ ಕಾಡುತ್ತೇ.
6. ಈಗಾಗಲೇ ದೇವಸ್ಥಾನದ ಸಂಪತ್ತಿನ ಬೆಲೆ ಇಡೀ ಜಗತ್ತಿಗೆ ಪರಿಚಯವಾಗಿರುವುದರಿಂದ ಅನೇಕ ರಾಷ್ಟ್ರಗಳ ಕಣ್ಣು ಈಗ ಕೇರಳದ ಮೇಲೆ ಬಿದ್ದಿದೆ. ವಿಶೇಷವಾಗಿ ನೆರೆಯ ಪಾಕಿಸ್ತಾನ ಹಾಗೂ ಅಪಘಾನಿಸ್ತಾನ್ ರಾಷ್ಟ್ರಗಳ ಉಗ್ರಗಾಮಿ ಸಂಘಟನೆಗಳಿಗೆ ಈ ಸಂಪತ್ತು ಕಣ್ಣುಕಟ್ಟಬಹುದು. ನಮ್ಮ ದೇಶದ ಸ್ವತ್ತಾಗಿರುವ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ದೇಗುಲ, ದೆಹಲಿ, ಮುಂಬೈಗಳು ಉಗ್ರರ ಟಾಗರ್ೆಟ್ ಆಗಿರುವಂತೆ ತಿರುವನಂತಪುರ ಕೂಡ ಉಗ್ರರ ಟಾಗರ್ೆಟ್ನಲ್ಲಿ ಸೇರಬಹುದು. ಉಗ್ರರು ಸಮುದ್ರ ತೀರದ ಮೂಲಕ ಕೇರಳವನ್ನು ತಲುಪಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿ ಸಂಪತ್ತನ್ನು ನಾಶಪಡಿಸಲುಬಹುದು.
7. ಈಗಾಗಲೇ ಹೇಳಿದಂತೆ ನಮ್ಮ ಪುರಾತನ ಸಂಪತ್ತಿಗೆ ಅಭಿವೃದ್ದಿಹೊಂದಿದ ರಾಷ್ಟ್ರಗಳಲ್ಲಿ ಬೆಲೆಕಟ್ಟಲಾಗದಷ್ಟು ಬೇಡಿಕೆ ಇದೆ. ಈ ಸಂಪತ್ತು ಕೂಡ ಆ ದೇಶಗಳನ್ನು ಕಾಡದೇ ಇರದು. ಈಗಾಗಲೇ ನಮ್ಮ ದೇಶದ ಸಾಲ ಲಕ್ಷಕೋಟಿ ತಲುಪಿದೆ. ಸಾಲ ಕೊಟ್ಟ ಅಮೇರಿಕದಂತಹ ಅಭಿವೃದ್ದಿ ರಾಷ್ಟ್ರಗಳು ಸಾಲವನ್ನು ಮರುಪಾವತಿಸುವಂತೆ ಒತ್ತಡ ಹೇರಬಹುದು, ಇಲ್ಲವೇ ಸಾಲ ಕೊಟ್ಟಂತಹ ಬ್ಯಾಂಕ್ಗಳ ಮೇಲೆ ಹಣವನ್ನು ವಸೂಲಿ ಮಾಡುವಂತೆ ಒತ್ತಡ ಹೇರಲೂಬಹುದು. ಅಕಸ್ಮಾತ್ ಸಾಲ ಮರುಪಾವತಿ ಮಾಡಲು ಭಾರತ ಹಿಂದೇಟು ಹಾಕಿದರೆ ದೇಶಿಯ ಈ ಪುರಾತನ ಸಂಪತ್ತನ್ನು ಒತ್ತೆ ಇಡುವಂತೆ ಬೇಡಿಕೆ ಸಲ್ಲಿಸಲೂಬಹುದು. ದೇಶಕ್ಕೆ ನಿಷ್ಠರಾದ ರಾಜಕಾರಣಿಗಳು ಒಪ್ಪದೇ ಇರಬಹುದು, ಇಲ್ಲದವರು ಈ ಸಂಪತ್ತನ್ನು ಒತ್ತೇ ಇಡಲೂಬಹುದು. ದೂರದೃಶ್ವಿತ್ವ ಇಲ್ಲದ ಹಾಗೂ ಸ್ವಾರ್ಥರಾಜಕಾರಣಿಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಈ ಸಂಪತ್ತನ್ನು ಅಡವಿಟ್ಟು ಸಾಲವನ್ನು ತರಲೂಬಹುದು. ಹೀಗೆ ನಮ್ಮ ದೇಶದ ಸಂಪತ್ತು ಒಮ್ಮೆ ಹೊರಗಡೆ ಹೋದರೆ ಖಂಡಿತ ಅದು ವಾಪಸ್ ಬರುವುದು ಮಾತ್ರ ಸ್ಮಶಾನಕ್ಕೆ ಹೋದ ಹೆಣವಿದ್ದಂತೆ. ಬ್ರಿಟಿಷ್ ಆಡಳಿತದಲ್ಲಿ ಹೋದ ಕೊಹಿನೂರ್ ವಜ್ರ ಇಂದಿಗೂ ಇಂಗ್ಲೆಂಡಿಗರ ಸ್ವತ್ತಾಗಿಯೇ ಉಳಿದಿದೆ. ಅದನ್ನ ನಮ್ಮ ದೇಶಕ್ಕೆ ಮತ್ತೇ ಕರೆತರುವ ಪ್ರಯತ್ನವನ್ನು ಇಂದಿಗೂ ಮಾಡುತ್ತಿಲ್ಲ. ಉದ್ಯಮಿ ವಿಜಯ್ ಮಲ್ಯ ಲಂಡನ್ನಲ್ಲಿದ್ದ ಟಿಪ್ಪು ಸುಲ್ತಾನ್ನ ಖಡ್ಗವನ್ನು 3 ಕೋಟಿಗೆ ಹರಾಜಿನಲ್ಲಿ ಕೊಂಡು ತಮ್ಮ ದೇಶಾಭಿಮಾನವನ್ನು ತೋರಿಸಿಕೊಂಡಿದ್ದರು. ಟಿಪ್ಪುಸುಲ್ತಾನ್ನ ಖಡ್ಗದಂತೆ ಅನಂತನ ಸ್ವತ್ತು ಮುಂದೊಂದು ದಿನ ಹರಾಜಿನಲ್ಲಿ ಕಂಡರೂ ಅಚ್ಚರಿಯಿಲ್ಲ.
 ಹೀಗೆ ಪ್ರಶ್ನೆಯ ಮೇಲೆ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಮುಖ್ಯವಾಗಿ ಲಕ್ಷ ಕೋಟಿ ಬೆಲೆಬಾಳುವ ಪದ್ಮನಾಭನ ಸಂಪತ್ತು ಜಗತ್ತಿಗೆ ಪರಿಚಯವಾಗಿದ್ದು ದೇಶಕ್ಕೆ ಒಳ್ಳೆಯದಾಗಬಹುದು ಇಲ್ಲವೇ ಕಂಟಕವಾಗಲೂಬಹುದು. ನಿಷ್ಟೆ, ಅಭಿಮಾನ, ಅರ್ಹತೆ, ಅನುಭವ, ವ್ಯವಹಾರಚತುರತೆ, ರಾಜಕೀಯ, ರಕ್ಷಣೆ ಮತ್ತು ತಂತ್ರಜ್ಞಾನದಂತಹ ಇನ್ನು ಹಲವು ಮಾನದಂಡಗಳಲ್ಲಿ ನಾವು ತೀರಾ ಹಿಂದುಳಿದಿದ್ದೇವೆ. ನಮ್ಮವರು ಕಲಿಯುವುದು ಬೇಕಾದಷ್ಟಿದೆ.  ನಮ್ಮ ಪುರಾತನ ರಾಷ್ಟ್ರೀಯ ಸಂಪತ್ತಾಗಿರುವ ತಿರುವನಂತಪುರದ ಅನಂತಪದ್ಮನಾಭ ಸ್ವಾಮಿಯ ಸಂಪತ್ತಿನ ನಿರ್ವಹಣೆಯಲ್ಲಿ ನಮ್ಮವರು ಭಕ್ತಿ ಹಾಗೂ ಸ್ವಾರ್ಥವನ್ನು ಮೀರಿ ಕಾರ್ಯನಿರ್ವಹಿಸಬೇಕಾಗಿದೆ. ಇದು ಕೇರಳಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲ ರಾಜ್ಯಗಳು ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ.


           
                               
  

No comments:

Post a Comment