ಮೊದಲಬಾರಿಗೆ ತಿರುಪತಿಯ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡಿದ್ದು ನನ್ನ ಸುದೈವವೆನ್ನಬಹುದು. ವರ್ಷಕ್ಕೊಮ್ಮೆ ನಡೆಯುವ ತಿರುಪತಿ ತಿಮ್ಮಪ್ಪನ ಬ್ರಹ್ಮೋತ್ಸವ ನೋಡಲೇಂದೇ ದೇಶದ ಮೂಲೆ ಮೂಲೆಯಿಂದ ಭಕ್ತಾದಿಗಳು ಬರುತ್ತಾರೆ. ತಿರುಪತಿ, ತಿರುಮಲದಲ್ಲಿ ನಿಲ್ಲಲೂ ಕೂಡ ಆಗದಷ್ಟು ಜನ ಸೇರುವುದು ಪ್ರತಿವರ್ಷದ ಸಹಜ. ಬಾಲಾಜಿಯ ವೈಭವದ ಬ್ರಹ್ಮೋತ್ಸವವನ್ನು ನೋಡುವುದೇ ಅದ್ಭುತ ಅನುಭವವೆನುತ್ತಾರೆ ನೋಡಿದವರು. ಆ ದಿನ ಬಾಲಾಜಿಯನ್ನು ಚಿನ್ನದ ರಥದಲ್ಲಿ ಎಳೆಯುತ್ತಾರೆ. ಇಂತಹ ಅದ್ಭುತ ಕ್ಷಣಕ್ಕೆ ಪ್ರತಿವರ್ಷ ಲಕ್ಷ ಲಕ್ಷ ಜನ ಸಾಕ್ಷಿಯಾಗುತ್ತಾರೆ.
ಬ್ರಹ್ಮೋತ್ಸವದ ದಿವಸ ತಿರುಪತಿ ಹಾಗೂ ತಿರುಮಲ ಬೆಟ್ಟವು ಕಣ್ಣುಕೊರೈಸುವ ದೀಪಾಲಂಕಾರಗಳಿಂದ ಕಂಗೋಳಿಸುತ್ತಿರುತ್ತದೆ. ಹೂವು ಹಣ್ಣುಗಳ ವೈಭೋಗದ ಸರಮಾಲೆ ಎಲ್ಲೆಡೆ ಆವರಿಸಿರುತ್ತದೆ. ತಿರುಮಲ ಬೆಟ್ಟವು ಭೂಲೋಕದ ವೈಕುಂಠವೆಂಬಂತೆ ಭಾಸವಾಗಿರುತ್ತದೆ. ಆ ದಿನ ಅಸಂಖ್ಯ ಭಕ್ರರು ತಿಮ್ಮಪ್ಪನನ್ನು ನೋಡಲು ಬಂದಿರುವುದರಿಂದ ಎಲ್ಲರಿಗೂ ಉಳಿಯಲಿಕ್ಕೆ ವ್ಯವಸ್ಥೆ, ಉಚಿತವಾದ ಊಟದ ವ್ಯವಸ್ಥೆ ಮಾಡಿರುತ್ತಾರೆ. ತಿರುಪತಿ ದೇವಸ್ಥಾನವು ಬ್ರಹ್ಮೋತ್ಸವವನ್ನು ಪ್ರತಿವರ್ಷ ಅಷ್ಟೊಂದು ವೈಭೋಗದಿಂದ ಪ್ರತಿವರ್ಷ ಮಾಡುತ್ತಾ ಬಂದಿದೆ.
ಈ ಬಾರಿಯೂ ತಿರುಪತಿ ಮತ್ತು ತಿರುಮಲದಲ್ಲಿ ಅಂತಹ ಸಮೃದ್ಧದ ದೀಪಾಲಂಕಾರ ಎಲ್ಲೆಡೆ ಆಕರ್ಷಿತವಾಗಿತ್ತು. ಎಲ್ಲೆಲ್ಲಿ ನೋಡಿದರೂ ಅಲಂಕಾರದ ಸಿರಿಸಿಂಗಾರವೇ ತುಂಬಿ ತುಳುಕುತ್ತಿತ್ತು. ಅಲಂಕರಿಸಿದ ಇಡೀ ತಿರುಮಲ ಬೆಟ್ಟವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಅಂತಹ ಸುಂದರತೆಯಿಂದ ತಿರುಪತಿ ದೇವಸ್ಥಾನ ಅಂದು ಕಾಣುತ್ತಿತ್ತು. ಮ್ಯೂಸಿಯಂ, ಪುಷ್ಟಮೇಳ, ಪುಸ್ತಕ ಮೇಳ ಇನ್ನು ಹಲವಾರು ಎಕ್ಸಿಬೀಷನ್ಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿಯಾದರಂತೂ ತಿರುಪತಿ ಬೆಟ್ಟವು ಭೂಲೋಕದ ವೈಕುಂಠವೇ ಅನ್ನುವಂತೆ ಭಾಸವಾಗುತ್ತಿತ್ತು. ಬ್ರಹ್ಮೋತ್ಸವನ್ನು ನಾನು ಮೊದಲ ಬಾರಿ ನೋಡಿದ್ದರಂದ ನನಗಿದು ಸೋಜಿಗವೆನಿಸಿತ್ತು.
ಆದರೆ ಈ ವರ್ಷದ ಬ್ರಹ್ಮೋತ್ಸವಕ್ಕೆ ತೆಲಂಗಾಣದ ಬಿಸಿ ಏರಿತ್ತು. ತಿರುಪತಿಗೆ ಹೋಗುವ ಎಲ್ಲ ಬಸ್ಸುಗಳು, ವಾಹನಗಳನ್ನು ಪ್ರತಿಭಟನೆಕಾರರು ತಡೆಯುತ್ತಿದ್ದರಿಂದ ಈ ವರ್ಷದ ಬ್ರಹ್ಮೋತ್ಸವವನ್ನು ಅಸಂಖ್ಯ ಭಕ್ತರು ಮಿಸ್ ಮಾಡಿಕೊಂಡರು. ತಿರುಮಲದಲ್ಲಿ ಬ್ರಹ್ಮೋತ್ಸವ ನೋಡಲು ಜನರೇ ಇರಲಿಲ್ಲ. ಭಕ್ತರಿಗಾಗಿ ಊಟ,ವಸತಿ, ಅನ್ನದಾನದಂತಹ ಅನೇಕ ಕಾರ್ಯಕ್ರಮಗಳು ಬೆಟ್ಟದಲ್ಲಿ ಇದ್ದರೂ, ಜನರು ಮಾತ್ರ ಕಡಿಮೆ ಸಂಖ್ಯೆಯಲ್ಲಿ ಇದ್ದರು. ಕೆಲವು ಸೆಕೆಂಡುಗಳ ಕಾಲ ತಿಮ್ಮಪ್ಪನನ್ನು ನೋಡುವ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೇ ಕಾಯುವ ಜನರು ಅಂದು 2-3 ತಾಸಿನೊಳಗೆ ದೇವರ ದರ್ಶನ ಮಾಡಿಕೊಂಡು ಬರುತ್ತಿದ್ದರು. ಈ ವರ್ಷ ಬಾಲಾಜಿ ದೇಗುಲದ ಹುಂಡಿಗೆ ಅಪಾರ ನಷ್ಟವಾಗದೆ ಅಂತ ಹೇಳುತ್ತಿದ್ದರು. ತೆಲಂಗಾಣದ ಹೋರಾಟದ ನಡುವೆಯೇ ಆ ದಿನ ಉಗ್ರರು ಬ್ರಹ್ಮೋತ್ಸವಕ್ಕೆ ತಿರುಪತಿ ಬೆಟ್ಟಕ್ಕೆ ಬರುವ ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ತಿರುಪತಿ ಬೆಟ್ಟ ಏರಲು ಸಜ್ಜಾಗಿ ಬಂದಿದ್ದರು. ಶಸ್ತ್ರ, ಮದ್ದುಗುಂಡುಗಳಿಂದ ಬಂದಿದ್ದ ಉಗ್ರಗಾಮಿಗಳನ್ನು ಪೋಲಿಸರು ಅರೆಸ್ಟ್ ಮಾಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ತಿರುಪತಿ ಬೆಟ್ಟದ ಮೇಲೆ ಕಳೆದ ಎರಡು ದಿನಗಳು ಮಾತ್ರ ಅವಿಸ್ಮರಣೀಯ.
ಬ್ರಹ್ಮೋತ್ಸವದಂದು ತಿರುಮಲ ಬೆಟ್ಟದ ಮೇಲೆ ಅಲಂಕಾರಗೊಂಡ ದೇವರ ಅಂಗಣ ಕ್ಯಾಮೆರಾದಲ್ಲಿ ಸೆರೆಸಿಕ್ಕಾಗ
No comments:
Post a Comment