Sunday, 11 November 2012

ಹಂಗಿನ ದೀಪವ ಹುಡುಕುತಾ


ಕತ್ತಲೆಯಲ್ಲಿ ಮಂಕು ಬೆಳಕು

ನೋವಿನಲ್ಲೂ ಸಣ್ಣ ನಗು

ಅನ್ನದಲ್ಲಿ ಸಣ್ಣ ಕಲ್ಲು

ಸಾರಿಗೆ ಒಂದಂಶ ಉಪ್ಪು ಜಾಸ್ತಿ

ಎಲ್ಲವೂ ಸಾಮಾನ್ಯ..

ತೆಗೆಯಲೇಬೇಕು,

ಸಾವರಿಸಿಕೊಂಡು ಸೇವಿಸಲೇಬೇಕು

ದೀಪ ಯಾವುದಾದರೇನು?

ಎಣ್ಣೆ ಯಾವ ಬೀಜದಾದರೇನು?

ಬೆಳಕು ಸಾಕಲ್ಲವೇ?

ಸಣ್ಣ ಬೆಳಕು ಸಾಕಲ್ಲವೇ!

ನಿಮಗೆ ನಮ್ಮ ಕೈ

ನಿಮ್ಮ ಕೈ ನಮಗೆ

ಪಿಡಿದು ಸಾಗಲು

ಸಾಗುವ

ದೂರ ಬಹುದೂರ

ಇನ್ನೊಂದು ದೀಪವ ಹುಡುಕುತಾ
 
ದೀಪದ ಹಬ್ಬದ ಶುಭಾಷಯಗಳು 



No comments:

Post a Comment