Thursday 1 November 2012

ಬದುಕು ಸುಗಮ



ಅಂಧಕಾರದ ಅದಾಲತ್ತಿನಲಿ

ಒಂಟಿ ಬೆಳಕಿನ ಸೆಳೆತ.

 ಕತ್ತಲೆಯ ಮಾರ್ಗವನು

ಹುಡುಕದೇ,

ಬದುಕಿನ ಅರ್ಥವನು ಹುಡುಕುವ    ಪರಿ

ನೂರೆಂಟು ಸುಳ್ಳು ದಾರಿಗಳು...

ನಡೆದುದ್ದಕ್ಕೂ ನೋವಿನ ಬಾಗಿಲುಗಳೇ!

ಒಳಗೆ ಹೋದಾಗಲೇ

ಅರಿವಾದದ್ದು..

ದಾರಿ ಸುಗಮವಾಗಿದೆ.

ನಾನು ಸರಿದಾರಿಯಲ್ಲಿದ್ದೇನೆ.

ಕತ್ತಲೆಯ ರಾತ್ರಿಯಲಿ, ಗುರಿಯೆಂಬ ಕತ್ತಿಯನು ಹಿಡಿದು

ಗುರುವಿನ ಬೆಳಕನು ಹುಡುಕುತಿಹೆನು

ಜೀವನವೇನೆಂಬುದನು ಅರಿಯುತಿಹೆನು

ಬದುಕಬೇಕು, ಸಾಧಿಸಬೇಕು ಅನ್ನುವ ಆಸೆಯೊಂದಿಗೆ.

2 comments:

  1. ತುಂಬಾ ಮುದ್ದಾದ ಕವಿತೆ.ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಗುರುವನ್ನು ಅರಸುತ್ತಿದ್ದೇನೆಂಬ ಭಾವ ಅತ್ಯಂತ ಮೌಲ್ಯಯುತವಾದದ್ದು.ಬದುಕಿನ ಬಗ್ಗೆ ಮಹತ್ವಾಕಾಂಕ್ಷೆ,ಜೀವನ ಪ್ರೀತಿ ಇರಲೇ ಬೇಕು.ನೀವೊಂದು ಸುಂದರ ಅಭಿವ್ಯಕ್ತಿಯ ದ್ಯೋತಕವಾಗಿದ್ದೀರಿ.ಓದಿ ಆಸ್ವಾದಿತನಾದೆ.ಅಭಿನಂದನೆಗಳು.

    ReplyDelete
  2. ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

    ಬದುಕನ್ನು ಕಲೆಸುವ ಕವನ.

    ReplyDelete