(ಸದ್ಯ ನಾನು ಬರೆಯುತ್ತಿರುವ ಒಂದು ನಾಟಕದಲ್ಲಿ ಬರುವ ರಂಗಗೀತೆ)
ಆಕಾಶ ಅಂಗಳದಾಗ ಚುಕ್ಕಿಗಳ ಆಸೆ ಕಾಣಯ್ಯ
ಮೇಲ್ಬಿದ್ದು, ಹಾರಿಬಿದ್ದು ಮಿಂಚುವ ತವಕ ನೋಡಯ್ಯ
ನೂರಾರು ಆಸೆ ಮನದಾಗ ತುಂಬೈತೆ..
ಹೊಸಚಿಗುರಿನ ನೂರೆಂಟು ಕನಸುಗಳು ಮಕ್ಕಳಲ್ಲಿ ತುಂಬೈತೆ.
ಮಕ್ಕಳ ಮನದಲ್ಲಿ ಏನೈತೆ.. ಏನಿಲ್ಲ..
ದೇವರು ತುಂಬಿದ ಈ ಆಸೆ ಭಾರ..
ಇಳಿಸಯ್ಯ. ಬಾರಯ್ಯ..ಬಡವರ ಮಕ್ಕಳ ಭಾರ..
ನಿನ್ನ ಪೂಜೆ ಮಾಡ್ತೀವಿ, ಹೇಳಿಬಿಟ್ಟು ನೂರು ಬಾರಿ
ನಿನಗೆಲ್ಲಾ ಗೌತ್ತಯ್ತೀ, ನಮ್ಮ ನೋವ ಕಾಣ್ತೈತೆ
ನಮ್ಮೊಳಗೆ ನೀನಿರುವೆ, ಒಳನೋವನು ನುಂಗುವೆಯಾ?
super boss.
ReplyDeleteಅದ್ಭುತ ಕಂಪೋಜ್.ಅರ್ಥಪೂರ್ಣವಾಗಿದೆ ಶ್ರೀಧರ.ಓದುವ ಹೆಮ್ಮೆ,ನಮ್ಮೂರ ಗೆಳೆಯನೆ ಹಿರಿಮೆಯ ಆಸ್ವಾದನೆ ಮಾತ್ರ ನಮ್ಗದು.ಶುಭವಾಗಲಿ.
ReplyDelete