ಅವಘಡದ ಹೊಸ್ತಿಲಲ್ಲಿ ಕಂಡ ಬೆಳಕು,
ಪರಿವೆಯೇ ಇಲ್ಲದ ಬುದ್ದಿಯ ಪರಿಧಿ.
ನಾಗಾಲೋಟದ ಬಂಡಿ, ಕಾಣದ ದಿಕ್ಕಿನ ಕಡೆ ಒಂಟಿ ಜಿಗಿತ.
ವಾಸ್ತವ ಜೀವನ ಅರ್ಥವಾದದೆಷ್ಟೋ! ಅನುಭವಿಸಿದ್ದೆಷ್ಟೋ?
ಕಾಣದ ತುಡಿತದ ಹುಡುಕಾಟ ಒಳಗೊಳಗೆ,
ಒಳಗಿನ ಕಿಚ್ಚು ತನ್ನ ಪಾಡಿಗೆ ಉರಿಯುತಿಹುದು.
ಇದ್ದ ಸೆರಗಿನಲ್ಲಿ ಕಳೆದುಕೊಂಡಿದ್ದಷ್ಟೋ, ಉಳಿಸಿಕೊಂಡಿದ್ದಷ್ಟೋ..!
ಬಿಡುವುದಿಲ್ಲ, ಜೀವನವಿಡೀ ಕಾಡುವೆ ನಿನ್ನನ್ನು
ಎನ್ನುತಲಿತ್ತು ಬೆನ್ನಗಂಟಿದ ಬೇಸರ.
ಕ್ಷಮಿಸುಬಿಡು ದೇವರೇ, ನನಗೆ ಬದುಕಲಿಕ್ಕೆ
ಯೋಗ್ಯತೆ ಇಲ್ಲ.
ಬಿಡು ಅಂದರೆ ಬಿಡಲಿಕ್ಕೆ ನನಗಿಲ್ಲ
ಯೋಗ್ಯತೆ ಅಂದ ಅವ.
ಕೇಳುವವನಿಗೆ ಕೇಳಿದರೂ ಸಿಗಲಿಲ್ಲ ಉತ್ತರ...
No comments:
Post a Comment