`ಥೂ.. ನಿನ್ನ ಜನ್ಮಕ್ಕ ಬೆಂಕಿ ಹಾಕ.. ಹೋಗಿ..ಹೋಗಿ... ಅಂತಾ ಹುಡುಗೀನಾ ಲವ್ ಮಾಡೋದು..? ಯಾಕ್ ಥೂ...'
ಅಂತ ಹೇಳಿ ಅಮ್ಮ ಎಂದು ಕಾಣದ ಸಿಟ್ಟಿನಲ್ಲಿ ನನ್ನ ಮುಖಕ್ಕೆ ಉಗಿದಳು.
ಅಮ್ಮ ಅಂದ್ರೇನೇ ಹಾಗೆ ಅಲ್ವಾ...!
ಸೋಪಿನ ನೊರೆಯಂತೆ ಮುಖಕ್ಕೆ ಬಿದ್ದ ಅಮ್ಮನ ಉಗಳನ್ನು ಹಾಗೆಯೇ ಉದ್ದಿಕೊಂಡೆ. ಮುಖ ಸ್ವಲ್ಪ ಕ್ಲೀನ್ ಆಯ್ತು...'
`ಏನಾಗಿದಾಳೆ ಅವಳು... ಚೆನ್ನಾಗಿಲ್ವಾ...?'
`ಚೆನ್ನಾಗಿ ಏನೋ ಇದಾಳೆ... ಆದ್ರೆ ಅವ್ಳ ಕ್ಯಾರೆಕ್ಟರ್ ಸರಿ ಇಲ್ಲಾಂತಲ್ವಾ...? ಎಲ್ರೂ ಅವಳ ನಡತೆ ಬಗ್ಗೆ ಕೆಟ್ಟದಾಗಿ ಮಾತಾಡ್ತಾ ಇದಾರೆ'
` ಅವಳದ್ದು ಹೋಗ್ಲಿ ಬಿಡಮ್ಮ.. ನನ್ ಕ್ಯಾರೆಕ್ಟರ್ ಸರಿ ಇದೆ ಅಂತ ಯಾರು ಹೇಳಿದ್ರು ನಿನಗೆ...?'
`ಗಂಡ್ಸುರೂ ಹ್ಯಾಂಗಾರೂ ಇದ್ರೂ ನಡೆಯುತ್ತೆ ಕಣೋ.. ಆದ್ರೆ ಮನೆಗೆ ಬರೋ ಹೆಣ್ಣು ಮಗಳು ನಡತೆ ಸರಿ ಇಲ್ಲ ಅಂದ್ರೆ ಹೇಗೆ..?'
`ನೀ ಏನಾದ್ರೂ ಹೇಳಮ್ಮ... ನಾ ಮಾತ್ರ ಅವಳನ್ನೇ ಮದ್ವೆ ಆಗೋದು..!'
`ಹಾಳಾಗಿ ಹೋಗು..! ಕಂಡು.. ಕಂಡು... ಇರಳು ಕಂಡ ಬಾವೀಲೀ ಬೀಳ್ತೀನಿ ಅಂದ್ರೆ ನಾನೇನು ಮಾಡೋಕೆ ಆಗೋಲ್ಲ..!'
` ಸರಿ ಹೇಳ್ದಮ್ಮ... ಅಪ್ಪ ತೋಡಿದ ದೊಡ್ಡ ಬಾವೀಲೀ ನಾ ಎದ್ದು ಬಂದು 26 ವರ್ಷ ಆಯ್ತು.. ಇನ್ನೂ ಇದು ಯಾವ ಬಾವಿ ಬಿಡಮ್ಮ..!'
`ನಿಮ್ಮಪ್ಪ ಇದ್ದಿದ್ರೆ ಖಂಡಿತ ಈ ಮದುವೆಗೆ ಒಪ್ತಿರಲಿಲ್ಲ...!'
`ಗಾಡ್ ಈಜ್ ಗ್ರೇಟ್..! ಅದಕ್ಕೆ ನಮ್ಮಪ್ಪ ಬೇಗ ಹೋಗಿದ್ದು..!'
`ನಿನ್ನ ಜನ್ಮಕ್ಕೆ ಬೆಂಕಿ ಹಾಕ... ಹೋಗ್ಲಿ ಯಾವಾಗ ಕರ್ಕೊಂಡು ಬರ್ತೀಯಾ ಅವಳನ್ನ..!'
` ಫೆಬ್ರುವರಿ 14ಕ್ಕೆ..'
`ಅವತ್ತೇ ಯಾಕೆ..?'
`ಅವತ್ತು ನಿನ್ನ ಹುಟ್ಟಿದ ದಿನ ಕಣಮ್ಮ..!'
`............... '

ವಿಡಂಬನೆಯಿಂದ ಕೂಡಿದ ಆದರೆ ವಿಚಾರಪೂರಿತ ಬರಹ.ಶೈಲಿಯೂ ಪರಿಣಾಮಕಾರಿ.ಬರಹದ ಭಾವ ಚನ್ನಾಗಿದೆ.
ReplyDelete