Monday 16 January 2012

ಸಂಗೀತದ ಸಮುದ್ರದಲ್ಲಿ ನಾನೊಂದು ಪುಟ್ಟ ಮೀನು: ಮಾಧುರಿ ಹೆಗಡೆ


ಪ್ರತಿಯೊಬ್ಬರಲ್ಲಿಯೂ ಒಂದಲ್ಲಾ ಒಂದು ಕಲೆ ರಕ್ತಗತವಾಗಿ ಬಂದೇ ಇರುತ್ತದೆ. ಅದನ್ನು ನಾವು ಗುರುತಿಸಿಕೊಳ್ಳಬೇಕಷ್ಟೇ..ಕೆಲವೊಮ್ಮೆ ನಾವೇ ಗುರುತಿಸುತ್ತೇವೆ. ಇನ್ನು ಕೆಲವೊಮ್ಮೆ ನಮ್ಮ ಸಂಸ್ಕಾರದ ಮೂಲಕ ಅದೇ ನಮ್ಮ ಹಿಂದೆ ಬಂದು ಬಿಡುತ್ತದೆ. ಒಲಿದು ಬಂದು ಕಲೆಯನ್ನು  ಉಳಿಸಿಕೊಂಡು ಬೆಳೆಸಿಕೊಂಡು ಹೋಗುವವನು ಸಾಧಕನಾಗುತ್ತಾನೆ, ಇಲ್ಲವೇ ಜೀವನದ ಪರಿಪೂರ್ಣತೆಯನ್ನು ಕಾಣುತ್ತಾನೆ. ಈ ಮಾತಿಗೆ ಬಹಳಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಅದೇ ರೀತಿ ಈಗಿನ ಮಹಿಳೆಯರಿಗೆ ಆದರ್ಶವಾಗುವ ನಿಟ್ಟಿನಲ್ಲಿ ಸಾಧನೆ ಮಾಡುತ್ತಾ ಸಂಗೀತದಲ್ಲಿ ತಮಗೆ ಒಲಿದ ಕಲೆಯನ್ನು ಉಳಿಸಿಕೊಂಡು ಹೋಗುವಲ್ಲಿ ಮಾಧುರಿ ಹೆಗಡೆ ಬೇರೆ ಗೃಹಿಣಿಯರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ.

`ಅಯ್ಯೋ..ಇನ್ನೇನು ಮದುವೆಯಾಯಿತು..ಮಕ್ಕಳು ಕೂಡ ಆದವು. ಇನ್ಯಾಕೆ ನಾ ಮೊದಲಿನಂತೆ ಹಾಡಬೇಕು, ಗೆಜ್ಜೆ ಕಟ್ಟಿ ಕುಣಿಯಬೇಕು' ಎಂದು ಹೆಚ್ಚಿನ ಮಹಿಳೆಯರು ಮದುವೆಯಾದ ಮೇಲೆ ತಮ್ಮಲ್ಲಿದ್ದ ಪ್ರತಿಭೆಗೆ ಎಳ್ಳುನೀರು ಬಿಡುವವರೇ ಹೆಚ್ಚು. ಬಿಡದೇ ಉಳಿಸಿಕೊಳ್ಳುವವರು ತುಂಬಾ ಬೆರಣಿಕೆಯಷ್ಟು ಮಹಿಳೆಯರು. ತಮ್ಮ ಕುಟುಂಬದಲ್ಲಿ ಯಾರೋಬ್ಬರು ಸಂಗೀತದಲ್ಲಿ ಸಾಧನೆಯನ್ನು ಮಾಡದಿದ್ದರೂ, ಮಾಧುರಿ ಹೆಗಡೆ ಅಪ್ಪಮ್ಮನ ಬೆಂಬಲ ಹಾಗೂ ಸ್ವಇಚ್ಚೆಯಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುವಲ್ಲಿ ಮುನ್ನುಗ್ಗುತ್ತಿದ್ದಾರೆ. ಮಾಧುರಿ ಹೆಗಡೆ ಹುಟ್ಟಿ ಬೆಳೆದುದೆಲ್ಲಾ ದೆಹಲಿಯಲ್ಲಾದರೂ, ಕನ್ನಡ ನಾಸ್ತಿಯನ್ನದೇ, ಸಿರಿಗನ್ನಡಂ ಸದಾ ಆಸ್ತಿಯೆನ್ನುವ ಮನೆಯಲ್ಲಿಯೇ ಬೆಳೆದವರು.  ಇವರ ತಂದೆ ಸುಧಾಕರ್ರವರು ಮಿಲಿಟರಿಯಲ್ಲಿ ಕೆಲಸಮಾಡುತ್ತಿದ್ದರಿಂದ ಬಾಲ್ಯದ ಬಹುಭಾಗ ಕನರ್ಾಟಕದ ಹೊರಭಾಗದಲ್ಲಿಯೇ ಆಯಿತು. ಹಾಗಂತ ಕನ್ನಡವನ್ನು ಮರೆಯದೇ, ಕನ್ನಡ ಓದುವುದನ್ನ, ಬರೆಯುವುದನ್ನ ಮನೆಯಲ್ಲೇ ತಾಯಿ ವಸುಂಧರಾರವರು ಕಲಿಸಿಕೊಟ್ಟರು. ಹಾಗಾಗಿ ದೂರದ ದೆಹಲಿಯಲ್ಲಿ ಬೆಳೆದರೂ ಕನ್ನಡ ಭಾಷೆಯೊಳಗಿನ ನಂಟು ಹಾಗೆಯೇ ಬಾಲ್ಯದ ಗಂಟಾಗಿಯೇ  ಬೆಸೆದುಕೊಂಡಿತು. ಮೊದಲಿನಿಂದಲೂ ಅಪ್ಪಮ್ಮ ಸಂಗೀತದ ಒಡನಾಟದಲ್ಲಿ ಬೆಳೆದುದರಿಂದ, ಸಂಗೀತದ ಜ್ವರ ಇನ್ನು ಸ್ಕೂಲ್ನಲ್ಲಿ ಓದುತ್ತಿದ್ದ ಮಾಧುರಿಯನ್ನ ಸೆಳೆಯಲಿಕ್ಕೆ ಬಹಳ ದಿನ ತೆಗೆದುಕೊಳ್ಳಲಿಲ್ಲ. ಆಗಿನ ದಿನಗಳಲ್ಲಿ ನವದೆಹಲಿಯ ಪ್ರಸಿದ್ದ ಸಂಗೀತ ಆಕಾಡಿಮೆ ಗಂಧರ್ವ ಮಹಾವಿದ್ಯಾಲಯದಲ್ಲಿ ಸಂಗೀತ ಅಭ್ಯಾಸ ಮಾಡುವ ಅವಕಾಶ ಮಾಧುರಿಗೆ ಸಿಕ್ಕಿತು. ವಿದ್ಯಾಲಯಕ್ಕೆ ಆಗ ವಿನಯಚಂದ್ರ ಮೊದ್ಗಲ್ ಪ್ರಿನ್ಸಿಪಾಲ್ರಾಗಿದ್ದರು. ಹಿಂದುಸ್ಥಾನಿ ಸಂಗೀತದಲ್ಲಿ ಪ್ರಾವೀಣ್ಯತೆ ಹಾಗೂ ಸಾಧನೆ ಮಾಡಿದಂತಹ ಘಟಾನುಘಟಿಗಳು ವಿದ್ಯಾಲಯದಲ್ಲಿ ಪಾಠವನ್ನು ತೆಗೆದುಕೊಳ್ಳುತ್ತಿದ್ದರು.
`ಇಂದಿಗೂ ವಿದ್ಯಾಲಯದಲ್ಲಿ ಸಿಕ್ಕಿದಂತಹ ಹಿಂದುಸ್ತಾನಿ ಸಂಗೀತದ ಫೌಂಡೇಷನ್ ನನಗೆ ಇಲ್ಲಿಯವರಗೆ ತುಂಬಾ ಸಹಾಯ ಮಾಡಿದೆ. ಈ ವಿಷಯದಲ್ಲಿ ನನ್ನ ಗುರುಗಳಾಗಿದ್ದ ಐ.ಎಸ್.ಬಾವ್ರಾ, ಈಗಿನ ಪ್ರಿನ್ಸಿಪಾಲ್ ಮಧು ಮೊದ್ಗಲ್ರವರನ್ನ ಸದಾ ನೆನಪಿಸಿಕೊಳ್ಳುತ್ತೇನೆ'ಎನ್ನುತ್ತಾರೆ ಮಾಧುರಿ ಹೆಗಡೆ. ನವದೆಹಲಿ ಇವರ ಸಂಗೀತದ ಆಯಾಮದ ಪಯಣಕ್ಕೆ ಒಂದು ಉತ್ತಮ ನೆಲೆಯನ್ನು ಒದಗಿಸಿದಿಯಂತೆ. ಬಿಎ ಡಿಗ್ರಿ ಜೊತೆಗೆ ಸಂಗೀತದಲ್ಲಿ ಪದವಿಯನ್ನು ಪಡೆದ ಮೇಲೆ ಮಾಧುರಿಯವರು ಸಂಗೀತದ ಕಡೆ ಹೆಚ್ಚೆಚ್ಚು ತಮ್ಮನ್ನು ತೊಡಗಿಸಿಕೊಂಡರು. ಅದರಲ್ಲೂ ಪ್ರತಿವರ್ಷ ಗಂಧರ್ವ ವಿದ್ಯಾಲಯದ ವಾಷರ್ಿಕ ಕಾರ್ಯಕ್ರಮಗಳಲ್ಲಿ, ವಿಷ್ಣು ದಿಗಂಬರ್ರವರ ನಾಮಸ್ಮರಣೆಯ ಕಾರ್ಯಕ್ರಮಗಳಲ್ಲಿ  ತಪ್ಪದೇ ಕಛೇರಿ ಕೊಡುತ್ತಿದ್ದರು.ಅಂದಿನಿಂದ ಇಂದಿನವರೆಗೆ ಸಾಂಸ್ಕೃತಿಕವಾಗಿ ತುಂಬಾ ಬಲಿಷ್ಟವಾಗಿರುವ ದೆಹಲಿ ಕನ್ನಡ ಸಂಘ ಅನೇಕ ಕನ್ನಡ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿತ್ತು. ಚಿಕ್ಕವರಾಗಿನಿಂದಲೂ ಮಾಧುರಿ ದೆಹಲಿ ಕನ್ನಡ ಸಂಘದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು,ಜೊತೆಗೆ ಅಷ್ಟೇ ಪ್ರಮುಖವಾಗಿ ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಎಲ್ಲರ ಮನಗೆದ್ದಿದ್ದರೂ ಕೂಡ. ಇದರ ಜೊತೆಗೆ ಅನೇಕ ರೇಡಿಯೋ ಜಿಂಗಲ್ಸ್ಗಳು, ಆಕರ್ೆಸ್ಟ್ರಾಗಳಲ್ಲಿ,ದೆಹಲಿ ಆಕಾಶವಾಣಿಯ ನಿರೂಪಕಿಯಾಗಿ, ಕಾರ್ಯಕ್ರಮಗಳಿಗೆ ಹಿನ್ನೆಲೆಧ್ವನಿ ನೀಡುತ್ತಾ ಮಾಧ್ಯಮವಾಣಿಯಲ್ಲಿ ತಮ್ಮ ಧ್ವನಿ ಪರಿಚಯದ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

ದೆಹಲಿ ಟು ಬೆಂಗಳೂರು...!
ಸಂಗೀತ ಸಾಧನೆಗೆ ಮಿತಿಯಿಲ್ಲ, ದಿನನಿತ್ಯ ಕಲಿಕೆ ಇಲ್ಲಿ ಇದ್ದದ್ದೇ. ಇದೊಂಥರ ಸಮುದ್ರವಿದ್ದ ಹಾಗೆ, ಎನ್ನುವ ಮಾಧುರಿ ಹೆಗಡೆ ಇಲ್ಲಿಯವರೆಗೆ ಈ ಸಮುದ್ರದಲ್ಲಿ ತಕ್ಕಮಟ್ಟಿಗೆ ಸಾಧನೆ ಮಾಡಲಿಕ್ಕೆ ಸಹಾಯ ಮಾಡಿದಂತಹ ಎಲ್ಲರನ್ನು ವಿನಯಪೂರ್ವಕವಾಗಿ ನೆನೆಪಿಸಿಕೊಳ್ಳುತ್ತಾರೆ, ಅದರಲ್ಲಿ ಮುಖ್ಯವಾಗಿ ಅವರು ನೆನೆಸುವುದು ಅವರ ಪತಿ ಲಕ್ಷ್ಮಿನಾರಾಯಣ ಹೆಗಡೆಯವರನ್ನ. `ನನ್ನ ಮದುವೆಯ ನಂತರವೇ ನನಗೆ ಹೆಚ್ಚು ಬೆಳೆಯಲಿಕ್ಕೆ ಅವಕಾಶ ಸಿಕ್ಕಿತು. ಇದರ ಹಿಂದೆ ನಮ್ಮ ಯಜಮಾನ್ರು ತುಂಬಾನೇ ಸಹಾಯ ಮಾಡಿದಾರೆ ಎನ್ನುತ್ತಾರೆ' ಮಾಧುರಿಹೆಗಡೆ.  ಸದ್ಯ ಕನ್ನಡ ಖಾಸಗಿ ವಾಹಿನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಲಕ್ಷ್ಮಿನಾರಾಯಣ ಹೆಗಡೆ ಮೊದಲಿನಿಂದಲೂ ಉತ್ತಮ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರಂತೆ. ಏನೇ ತಪ್ಪುಗಳಿದ್ದರೂ ತಿದ್ದಿಕೊಳ್ಳಲು ಸಲಹೆ ನೀಡುತ್ತಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇವರಿಗೆ ಬೆಂಗಳೂರಿಗೆ ವರ್ಗವಾದ ಮೇಲೆ ಕನ್ನಡ ವಾಹಿನಿಗಳಲ್ಲಿ, ಲೈವ್ ಪ್ರೋಗ್ರಾಂಗಳಲ್ಲಿ, ಸೀರಿಯಲ್ಗಳಲ್ಲಿ ಆಕ್ಟಿಂಗ್,  ರೇಡಿಯೋ ಜಿಂಗಲ್ಸ್ಗಳ ಗಾಯನ ಹೀಗೆ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಬೆಂಗಳೂರು ವಾತಾವರಣ ಮಾಧುರಿ ಹೆಗಡೆಯವರಿಗೆ ತುಂಬಾ ಸಹಾಯ ಮಾಡಿದಿಯಂತೆ. ಇಲ್ಲಿಗೆ ಬಂದ ಮೇಲೆ ಹಿಂದುಸ್ತಾನಿಯ ಹೊರತಾಗಿ ಸುಗಮ ಸಂಗೀತದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸದ್ಯ ಮೃತ್ಯುಂಜಯ್ ದೊಡ್ಡವಾಡರವರ ಸುಗಮ ಸಂಗೀತದ ಟ್ರೂಪ್ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಝೀಕನ್ನಡದ ಎಸ್ಸೆಲ್ ಅವಾಡ್ಸರ್್ ಕಾರ್ಯಕ್ರಮ, ಹಾಡುಹಬ್ಬ ಇನ್ನು ಹಲವು ಲೈವ್ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ.
  ಸಂಗೀತದ ಎಲ್ಲ ಪ್ರ್ರಾಕಾರಗಳು ನನಗಿಷ್ಟ.. ಇಂತಹುದೇ ಸಂಗೀತಕ್ಕೆ ನಾನು ಎಂದಿಗೂ ಬದ್ದನಾಗಿಲ್ಲ. ಎಲ್ಲ ರೀತಿಯ ಹಾಡುಗಳನ್ನ ಹಾಡಲಿಕ್ಕೆ ನಾನು ಇಷ್ಟಪಡುತ್ತೇನೆ.ವಿಶೇಷವಾಗಿ ಮಾಧುರ್ಯಕ್ಕೆ ಜಾಸ್ತಿ ಒತ್ತು ಕೊಡುತ್ತೇನೆ. ಭೀಮಸೇನ್ ಜೋಷಿ, ಲತಾಮಂಗೇಷ್ಕರ್,ಕಿಶೋರ್ ಕುಮಾರ್ ಹಾಡುಗಳೆಂದರೆ ಪಂಚಪ್ರಾಣ, ಆರ್ಡಿ ಬರ್ಮನ್ ಸಂಗೀತಕ್ಕೆ ತಲೆಬಾಗಬೇಕೆಸಿಸುತ್ತದೆ. ಕನ್ನಡದಲ್ಲಿ ರಾಜನ್-ನಾಗೇಂದ್ರ ಸಂಯೋಜನೆಯ ಮೇಲೋಡಿ ಹಾಡುಗಳನ್ನು ಸದಾ ಗುನುಗಬೇಕೆನಿಸುತ್ತದೆ. ಇವೆಲ್ಲಾ ಇವರ ಸಂಗೀತ ಅಭಿರುಚಿಯ ಮನದಾಳದ ಮಾತುಗಳು. ತಮ್ಮಂತೆ ತಮ್ಮ ಮಗಳನ್ನು ಯಾವುದಾದರೂ ಒಂದು ಕ್ಷೇತ್ರದಲ್ಲಿ ದೊಡ್ಡ ಸಾಧಕಿಯನ್ನಾಗಿ ಮಾಡುವ ತವಕ ಹಾಗೂ ಗುರಿ ಮಾಧುರಿಯವರದು. ಮಗಳು ನಿಶಾ ಹೆಗಡೆ ಈಗಾಗಲೇ ನೃತ್ಯದ ಕಡೆ ಹೆಚ್ಚು ಗಮನಹರಿಸಿದ್ದಾಳಂತೆ. ಭರತನಾಟ್ಯಂ, ಕಥಕ್ ಕಲೆಯನ್ನ ತುಂಬಾ ಗಂಭೀರವಾಗಿ ಕಲಿಯುತ್ತಿದ್ದಾಳೆ. ನನ್ನ ಹಾಗೂ ನಮ್ಮ ಯಜಮಾನರ ಸಪೋರ್ಟ ಅವಳಿಗೆ ಇದ್ದೇ ಇರುತ್ತೆ. ಅವಳ ಸಾಧನೆಯ ದಿನಗಳನ್ನು ನೋಡುವ ದಿನಗಳು ಬರಬೇಕಷ್ಟೇ..!










No comments:

Post a Comment