Thursday 8 December 2011

ಎಸ್ ಪಿಬಿ ಹಾಡಿದ್ದನ್ನು ಮನು ಹಾಡಿದ್ದರು ಅಂತ ಹೇಳಿದ್ದರು!

ನಾನು ಜನಶ್ರೀ ಬಿಟ್ಟ ಮೇಲೆ ಜನಶ್ರೀ ನೋಡುವುದೇ ಅಪರೂಪವಾಗಿತ್ತು. ನಿನ್ನೆ ಮುಂಜಾನೆ ಅಪರೂಪಕ್ಕೆ ನಾನು ಕೆಲಸ ಮಾಡುತ್ತಿದ್ದ ಹಳೆ ಚಾನೆಲ್ 
 ಜನಶ್ರೀ ನೋಡುತ್ತಿದ್ದೆ. ಆಗ ಫಿಲ್ಮಿ ಕಾರ್ಯಕ್ರಮ `ಹಾಡು ಹಳೆಯದಾದರೇನು' ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಸಿನಿಮಾ ಹಾಡುಗಳಲ್ಲಿ `ಸಂಭಾಷಣೆಯ' ಸ್ವಾದವನ್ನು ಹೇಳುವ ಕಥಾವಸ್ತು ಆಸಕ್ತಿಕರ ಅಷ್ಟೇ ಪ್ರಸ್ತುತ ಅಂಗಿತ ಕೂಡ. ಅವರ ಈ ಪ್ರಯತ್ನವನ್ನು ನಾನು ಮೆಚ್ಚುತ್ತೇನೆ. ಆದರೆ `ಹಾಡು ಹಳೆಯದಾದರೇನು' ಕಾರ್ಯಕ್ರಮದಲ್ಲಿ ಆದ ತಪ್ಪುಗಳನ್ನು ಖಂಡಿತ ಕ್ಷಮಿಸಲಾಗದು


1.`ಶ್ರೀ ರಾಮಚಂದ್ರ' ಸಿನಿಮಾದಲ್ಲಿ `ಮಳೆಯ ಗುನುಗು' ಹಾಡನ್ನು ಮನು ಮತ್ತು ಚಿತ್ರಾ ಹಾಡಿದ್ದಾರೆ ಅಂತ  ಆ ವರದಿ ಹೇಳಿತ್ತು. ದಯವಿಟ್ಟು ಒಮ್ಮೆ ಕನ್ನಡ ಸಿನಿಮಾ ದಾಖಲೆಯ ಪುಟಮಾಲೆಯನ್ನು ಒಮ್ಮೆ ಓದಿದರೆ ಶ್ರೀ ರಾಮಚಂದ್ರ ಸಿನಿಮಾದಲ್ಲಿ ವಿಶಿಷ್ಟವಾದ ಹಾಡುಗಾರಿಕೆ ಹಾಗೂ ಅದಕ್ಕೋಸ್ಕರ ಅಂತಲೇ ಬರೆದ ಸಾಹಿತ್ಯ ಇದರ ಕ್ರೆಡಿಟ್ , ಇಲ್ಲವೇ ಕೊಡುಗೆ ಎಲ್ಲವೂ ಹಂಸಲೇಖ ಹಾಗೂ ಎಸ್ ಪಿ ಬಾಲಸುಬ್ರಮಣ್ಯಂರವರಿಗೆ ಸೇರುತ್ತದೆ. ಇಡೀ ಭಾರತದಲ್ಲಿ ಎಸ್ ಪಿಬಿ ಹಾಡಿದ 50000 ಕ್ಕೂ ಹಾಡುಗಳಲ್ಲಿ ಶ್ರೀ ರಾಮಚಂದ್ರ ಸಿನಿಮಾದ ಹಾಡು ಅತಿ ಶ್ರೇಷ್ಟ ಹಾಗೂ ವಿಭಿನ್ವಾನವಾದುದು. ವಿಭಿನ್ನ ಸ್ವರದ ಮೂಲಕ ಎಸ್ ಪಿಬಿ ಆ ಹಾಡುಗಳಿಗೆ ಜೀವ ತುಂಬಿದ್ದಾರೆ. ಇದನ್ನು ಎಸ್ಪಿಬಿಯವರೇ ಅನೇಕ ಸಂದರ್ಶನಗಳು, ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ಈ ಹಾಡನ್ನು ಹಾಡುವಾಗ ಎಸ್ ಪಿಬಿಯರು ತಮ್ಮ ಸ್ವರವನ್ನು ಕಂಪ್ಲೀಟ್ ಮಾಡುಲೇಷನ್ ಮಾಡಿಕೊಂಡು ಹಾಡಿದ್ದರು. ಹಾಡಿನ ರಿಹರ್ಸಲ್ ಸಮಯದಲ್ಲೇ ಅವರ ಅರ್ಧ ದನಿ ಹಾಳಾಗಿತ್ತು. ಹಂಸಲೇಖರವರು ಬೇಡ ಈ ರಿಸ್ಕ್ ಅಂದರೂ ಕೇಳದೇ ಆ ಹಾಡನ್ನು ಹಾಡುವಾಗ ಬಾಯಿಯಲ್ಲಿ ಹಲ್ಲುಬ್ಬಿನ ಸೆಟ್ಟನ್ನು ಇಟ್ಟುಕೊಂಡು ವಿಶಿಷ್ಟವಾಗಿ ಹಾಡಿದರು. ಗಂಟಲಿಗೆ ಶ್ರಮಕೊಟ್ಟು ಹಾಡಿದ್ದಕ್ಕಿಂತಲೇ ಈ ಹಾಡು ಅದ್ಭುತವಾಗಿ ಮೂಡಿಬಂದಿದೆ.ಈ ಹಾಡನ್ನು ಹಾಡಿದ ಮೇಲೆ ಸುಮಾರು ಒಂದು ವಾರ ಬೇರೆ ಯಾವ ಹಾಡುಗಳನ್ನು ಹಾಡಲಿಲ್ಲ. ಅವರ ದನಿ ಹಾಳಾಗಿತ್ತು.ಒಂದು ವಾರ ಗಂಟಲಿಗೆ ವಿಶ್ರಾಂತಿ ನೀಡಿದರು. ಇದು ಕನ್ನಡ ಸಿನಿಮಾ ಸಂಗೀತದಲ್ಲಿ ದಾಖಲಾದ ಘಟನೆ. ಈ ಘಟನೆಗೆ ಸಾಕ್ಷಿಯಾದವರು ಹಂಸಲೇಖ ಹಾಗೂ ಆಗಿನ್ನೂ ಅಂಬೆಗಾಲಿಡುತ್ತಿದ್ದ ರಾಜೇಶ್ ಕೃಷ್ಣನ್. ಈ ಇಬ್ಬರೂ ಸಂದರ್ಶನದಲ್ಲಿ ಇದನ್ನು ಹೇಳಿಕೊಂಡಿದ್ದಾರೆ.


Mano (aaguru Babu)




2. ಮನು ಕೂಡ ಅದ್ಭುತ ಗಾಯಕನೇ. ಆತನಿಗೂ ಕನ್ನಡ ಸಿನಿಮಾ ಸಂಗೀತದಲ್ಲಿ ಒಂದು ದಾಖಲೆ ಇದೆ. ಆತನ ಕ್ಯಾರಿಯರ್ ಪ್ರಾರಂಭವಾದದ್ದೇ ಕನ್ನಡ ಹಾಡಿನ ಮೂಲಕ. ಅದು ರಾಮಾಚಾರಿ ಸಿನಿಮಾದ ಮೂಲಕ. ರಾಮಾಚಾರಿಗಾಗಿ ಹಂಸಲೇಖ ಎಸ್ಪಿಬಿಯವರ ಕೈಯಲ್ಲಿ ಹಾಡನ್ನು ಹಾಡಿಸಬೇಕು ಅಂತ ಅಂದುಕೊಂಡಿದ್ದರು. 1991-92 ರ ಸಮಯ ಎಸ್ ಪಿಬಿ ಬಹುಬೇಡಿಕೆಯಲ್ಲಿದ್ದರು. ಯಾವುದೋ ಕಾರಣದಿಂದ ರಾಮಾಚಾರಿ ಹಾಡನ್ನು ಹಾಡಲಾಗಲಿಲ್ಲ. ಕೊನೆಗೆ ಹಾಡುವ ಆ ಅವಕಾಶ ಮನುಗೆ ಬಂದಿತು. ಆಗ ಮನು ಹಂಸಲೇಖರವರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಹಾಡು ಅಂತ ಹಂಸಲೇಖ ಹೇಳಿದರು. ಮನು ಸ್ಟುಡಿಯೋದಲ್ಲಿ ಎದೆ ತುಂಬಿ ಆ ಹಾಡನ್ನು ಹಾಡಿದ. ಹಾಡು ಸೂಪರ ಹಿಟ್ ಆಯಿತು. ಮನುಗೆ ದೊಡ್ಡ ಬ್ರೇಕ್ ಸಿಕ್ಕಿತು. ಹಾಡಿದ ಹಾಡು ಮದ್ರಾಸ್ನ್ಲಲಿದ್ದ ಎಸ್ ಪಿಬಿಯವರ ಕಿವಿ ತಲುಪಿತು. ಮನು ಆ ಹಾಡನ್ನು ಹಾಡಿದ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದ. ನನ್ನ ಜೀವನದಲ್ಲಿ ಇಂತಹ ಅದ್ಭುತ ಹಾಡು ಸಿಕ್ಕಿತಲ್ಲ ಅಂತ. ಮನು ಹಾಡಿದ ಮೊದಲ ಹಾಡು ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣಿನವಳು (ರಾಮಾಚಾರಿ). ಅದಕ್ಕೂ ಮೊದಲು ಮನು ಅಲಿಯಾಸ್ ನಾಗೂರು ಬಾಬು (ಮೂಲ ಹೆಸರು) ಎಲ್ಲ ಭಾಷೆಯ ಸುಮಾರು 5000 ಹಾಡುಗಳಿಗೆ ಟ್ರ್ಯಾಕ್ ಹಾಡಿದ್ದ, ಅಲ್ಲಿಯವರೆಗೆ ಆತನಿಗೆ ಅವಕಾಶವೇ ಸಿಕ್ಕಿರಲಿಲ್ಲ. ಅಂತಹ ದೊಡ್ಡ ಬ್ರೇಕ್ ಕನ್ನಡದಲ್ಲಿ ಸಿಕ್ಕಿತ್ತು. ನಾಗೂರು ಬಾಬು ಎಂಬ ಆಂದ್ರದ ಮುಸ್ಲೀಂ ಹುಡುಗ ಕನ್ನಡದಲ್ಲಿ ಮೊದಲು ಹಾಡಿದ್ದು ಕೂಡ ಒಂದು ದೊಡ್ಡ ದಾಖಲೆ. ಹೀಗೆ ಕನ್ನಡ ಸಿನಿಮಾ ಸಂಗೀತದಲ್ಲಿ ಆದ ಈ ಘಟನೆ ದಾಖಲೆಯ ಪಟ್ಟಿಗೆ ಸೇರಿದೆ. ಮನು ಎಂಬ ಗ್ರೇಟ್ ಸಿಂಗರ್ ಶ್ರೀರಾಮಚಂದ್ರ ಸಿನಿಮಾದಲ್ಲಿ ಹಾಡಿರಲಿಲ್ಲ.  ವರದಿಯಲ್ಲಿ ಇದೋಂದು ತಪ್ಪಾಗಿತ್ತು.

3.ಇನ್ನೊಂದು ಪ್ರಧಾನ ಅಂಶವನ್ನು 'ಹಾಡು ಹಳೆಯದಾದರೇನು' ಸಿನಿಮಾ ಸಾಹಿತ್ಯದಲ್ಲಿ ಸಂಭಾಷಣೆ' ಸಿಗ್ಮೆಂಟಿನಲ್ಲಿ ಬಿಟ್ಟಿದ್ದ್ದಿದರು.  ದಾಖಲೆಗಳು ಹೇಳುವ ಪ್ರಕಾರ ಸಿನಿಮಾ ಸಾಹಿತ್ಯದಲ್ಲಿ ಸಂಭಾಷಣೆ, ಅಥವಾ ಆಡುಭಾಷೆಯನ್ನು ತಂದ ಮೊದಲ ಕೀರ್ತಿ ಹುಣಸೂರು ಕೃಷ್ಣಮೂರ್ತಿಗೆ ಸೇರುತ್ತದೆ. ಅವರ ಅನೇಕ ಸಿನಿಮಾದಲ್ಲಿ ಇದು ಸಾಮಾನ್ಯವಾಗಿತ್ತು. ಇದರ ನಂತರ ಈ ಪರಂಪರೆಯನ್ನು ಬೆಳೆಸಿದವರು ಚಿ.ಉದಯಶಂಕರ್ ಹಾಗೂ ಆರ್ಎನ್ ಜೆ. ಅಪರೂಪಕ್ಕೆ ಈ ದೈತ್ಯರು ಪ್ರಯತ್ನ ಮಾಡಿದರೂ ಕೊನೆಗೂ ಅವರು ಬರೆದದ್ದು ಹೆಚ್ಚಾಗಿ ಮಾಧುರ್ಯದ ಕಡೆಗೆ. ಸಿನಿಮಾ ಸಾಹಿತ್ಯದಲ್ಲಿ ಆಡುಭಾಷೆಯ ಕ್ರಾಂತಿಯನ್ನು ತಂದ ಕೀರ್ತೀ್ ಹಂಸಲೇಖರವರಿಗೆ ಸೇರುತ್ತದೆ. ಈ ದಾಖಲೆಗೆ ಸೇರುವ ಮೊದಲ ಚಿತ್ರ `ಪ್ರೇಮಲೋಕ' .ಇದಕ್ಕೂ ಮೊದಲು 1973ರಲ್ಲಿ ಹಂಸಲೇಖ ಇನ್ನೂ ಹುಡುಗನಾಗಿದ್ದಾಗಲೇ ಮೊದಲು ಬರೆದ ಹಾಡು `ನೀನಾ ಭಗವಂತಾ..?' ಹಾಡು (ತ್ರೀವೇಣಿ ಸಿನಿಮಾದ್ದು) ಕೂಡ ಆಡುಭಾಷೆಯನ್ನು ಒಳಗೊಂಡಿತ್ತು. ನಿಮ್ಮವರದಿಯಲ್ಲಿ ಪ್ರೇಮಲೋಕದ ಪ್ರಸ್ತಾಪ ಆಗದೇ ನೇರವಾಗಿ ಶ್ರೀ ರಾಮಚಂದ್ರ ಸಿನಿಮಾಕ್ಕೆ ಹೋಗಿತ್ತು. ಇಂತಹ ವಿಷಯಗಳನ್ನು ಬರೆಯುವಾಗ ದಯವಿಟ್ಟು ಕನ್ನಡಸಿನಿಮಾ ಇತಿಹಾಸದ ದಾಖಲೆಗಳನ್ನು ದಯವಿಟ್ಟು ಪರಿಶಿಲಿಸಿ.
ಹೇಳಿಕೆಗಳು ಸುಳ್ಳಾಗಬಹುದು, ಆದರೆ ದಾಖಲೆಗಳು ಎಂದಿಗೂ ಸುಳ್ಳಾಗಲೂ ಸಾಧ್ಯವಿಲ್ಲ. ಮುಂಜಾನೆ  ಹಾಡು ಹಳೆಯದಾದರೇನು ಕಾರ್ಯಕ್ರಮ ನೋಡಿದಾಗ ನನಗೆ ಕಂಡ ಅಂಶಗಳಿವು. 

No comments:

Post a Comment