`ಸಿಂಗರ್ ಆದಿತ್ಯ 9591429570' ನನ್ನ ಮೊಬೈಲ್ಲ್ಲಿರುವ ಆದಿತ್ಯ ನಾಡಿಗ್ ಮೊಬೈಲ್ ಸಂಖ್ಯೆ.
ಸುಮಾರು ಹತ್ತು ದಿನಗಳ ಹಿಂದೆ ನನಗೆ ಅವನಿಂದ ಮೇಸೆಜ್ ಬಂದಿತಷ್ಟೇ! ನಾನು ಮೊನ್ನೆಮೊನ್ನೆಯಷ್ಟೆ ದೀಪಾವಳಿಗೆ ಆತನಿಗೆ ಶುಭಕೋರಿ ಮಸೆಜೆ ಕೂಡ ಹಾಕಿದ್ದೆ. ಅದನ್ನು ಮರೆಯುವ ಕೂಡ ಹಾಗಿರಲಿಲ್ಲ. `ಪ್ರತಿಭಾವಂತ ಗಾಯಕ ಆದಿತ್ಯ ನಾಡಿಗ್ ಆತ್ಮಹತ್ಯೆಗೆ ಶರಣು' ಎನ್ನುವ ಸುದ್ದಿ ಎಲ್ಲ ನೂಸ್ ಚಾನೆಲ್ನಲ್ಲಿ ಬ್ರೇಕಿಂಗ್ನ್ಯೂಸ್ ಮಾಡಿಕೊಂಡು ಹೊಡೆಯುತ್ತಿದ್ದಾಗ ಒಂದು ಕ್ಷಣ ನನಗೆ ನಂಬಲಾಗಲಿಲ್ಲ. ಮತ್ತೆ ಹತ್ತಿರದವರಿಗೆ ಎಲ್ಲರಿಗೂ ಮೇಸೆಜ್ ಹಾಕಿ, ಪೋನ್ ಮಾಡಿ ಹೌದು ಅಲ್ಲವೋ ಎಂಬುದನ್ನು ಕ್ಲಾರಿಫೈ ಮಾಡಿಕೊಂಡೆ. ಬಂದ ಉತ್ತರ `ಯೆಸ್, ಹಿ ಕಮೀಟೆಡ್'. ಮನಸ್ಸಿನಲ್ಲಿ ಆದ ತಳಮಳವನ್ನು ತಡೆಯಲಾಗಲಿಲ್ಲ. ಬಂದ ಸುದ್ದಿ ನನ್ನನ್ನು ವಿಚಲಿತನನ್ನಾಗಿ ಮಾಡಿತ್ತು. ಫೇಸ್ಬುಕ್ ತೆಗೆದು ನೋಡಿದಾಗ ಆಗಲೇ ಆತನ ಆತ್ಮಕ್ಕೆ ಶಾಂತಿ ಕೋರಿ ಸಾವಿರಾರು ನೋವಿನ ಮಾತುಗಳು!
ಸಾಧನೆಯ ಉತ್ತುಂಗದಲ್ಲಿ ತೀರಿಕೊಂಡವರಲ್ಲಿ ಮೊದಲು ನೆನಪಾಗುವುವರು ಸುಗಮ ಸಂಗೀತದ ಅಪ್ರತಿಮ ಯುವಗಾಯಕರಾಗಿದ್ದ ಜಿ.ವಿ. ಅತ್ರಿ. ಅತ್ರಿ ನಮ್ಮನ್ನೆಲ್ಲ ಅಗಲಿ ಆಗಲೇ ಹಲವಾರು ವರ್ಷಗಳೇ ಕಳೆದಿವೆ. ಅದರಂತೆ ಆದಿತ್ಯ ಕನ್ನಡದ ಉದಯೋನ್ಮುಖ ಸಿಂಗರ್ ಆಗುತ್ತಾನೆ ಅನ್ನುತ್ತಿರುವಾಗಲೇ ಆದ ದುರ್ಘಟನೆ ಮಾತ್ರ ಕೆಟ್ಟ ಕನಸು
`ಶ್ರೀಧರ್ ನಿನಗೆ ಸಿಂಗರ್ ನಾಡಿಗ್ ಗೊತ್ತಾ ಅಂತ ಆತ್ಮೀಯ ಸ್ನೇಹಿತ ಜನಶ್ರೀ ಚಾನೆಲ್ನ ಪುನೀತ್ ಪೋನ್ ಮಾಡಿದ್ದ. ಅವ ಯಾಕೆ ನನಗೆ ಮಾಡಿದ್ದ ಅಂದರೆ ಮ್ಯೂಸಿಕ್ ಸೂಪರ್ ಸ್ಟಾರ್ ಪ್ರೋಗ್ರಾಂನ ಕಾರ್ಯಕ್ರಮದಲ್ಲಿ ಆದಿತ್ಯ ಭಾಗವಹಿಸಿದ್ದ, ಅದಲ್ಲದೆ ನಾನು ಆ ಕಾರ್ಯಕ್ರಮದ ಅಸೋಸಿಯೇಟ್ ಪ್ರೋಡ್ಯುಸರ್ ಆಗಿದ್ದೆ. ಹಾಗಾಗಿ ನನ್ನ ಆದಿತ್ಯನ ಓಡನಾಡ ಇತ್ತು. ಇತ್ತೀಚೆಗಷ್ಟೇ ಜನಶ್ರೀ ಚಾನೆಲ್ನಲ್ಲಿ ಆ ಕಾರ್ಯಕ್ರಮದ ಬಗ್ಗೆ ಎಪಿಸೊಡ್ ಕೂಡ ಆಗಿತ್ತು. ಮರೆತರೂ ನಂಬಲಾಗದ, ಬಿಡದರೂ ಸದಾ ಕಾಡುವ ಹಲವಾರು ನೆನೆಪುಗಳು ನನ್ನ ಜೊತೆ ಆತ ಬಿಟ್ಟಿರುವುದು ನನಗೆ ಸದಾ ಖ್ಯೇದವನ್ನುಂಟು ಮಾಡುತ್ತಿದೆ. 'ಅಣ್ಣಾ ನಿನೋಬ್ಬನೇ ಮಾತ್ರ ನನ್ನ ನಿಜವಾದ ನೋವನ್ನು ಅರ್ಥಮಾಡಿಕೊಂಡಿದ್ದು, ನನ್ನ ನೋವು ಖಂಡಿತ ಅರ್ಥಮಾಡಿಕೊಂದಿಯಾ' ಅಂತ ಗುರುಕುಲದಲ್ಲಿ ಇದ್ದಾಗ ಆತ ಹೇಳುತ್ತಿದ್ದ, `ನೀವು ನನ್ನ ಫ್ರೇಂಡಲ್ಲ, ನಿನ್ನ ಅಣ್ಣನ ಥರ ಅಂತ ಹೇಳಿದ್ದು ಇಂದಿಗೂ ನನ್ನ ಮನಸ್ಸಿನಲ್ಲಿದೆ ಆದಿ. ಸೂಪರ್ ಸ್ಟಾರ್ ಪ್ರೋಗ್ರಾಂ ರೂಲ್ಸ್ ಪ್ರಕಾರ ಅಪ್ಪಮ್ಮನ್ನು ಎಲ್ಲರ್ನು ಬಿಟ್ಟು ಮನೆಯಿಂದ ದೂರವಿರಬೇಕಾಗಿತ್ತು. ಆಗಿನ ಸಮಯದಲ್ಲಿ ಕಾರ್ಯಕ್ರಮದ ಆಯೋಜಕರಾಗಿ ನಾನು, ಸ್ವಾಮಿ ತ್ಯಾಗಿ, ನಿರಂಜನ್ ಗುರುಕುಲದಲ್ಲಿ ನಾವೆಲ್ಲಾ ಇದ್ದೇವು. ಆ ಸಮಯದಲ್ಲಿ ಅವರ ಬೇಕುಬೇಡಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವು. ಆಗಲೇ ಆದಿ ನಮಗೆಲ್ಲಾ ಹತ್ತಿರವಾದದ್ದು.
ಆದಿ ನಾನು ನಿನ್ನನ್ನು ಅನೇಕ ಸಾರಿ ರೇಗಿಸಿದ್ದು ಇದೆ. ನಿನ್ನ ಬಾಡಿಯ ಬಗ್ಗೆ `ಚೆನ್ನಾಗಿ ತಿನ್ನೋ' ಅಂತೆಲ್ಲಾ ರೇಗಿಸುತ್ತಿದ್ದೆ. `ನನ್ನ ಹತ್ತಿರ ಬಂದು ಸರ್ ನಾನು ಈ ಹಾಡು ಹೇಳಲಾ?' `ನೋಡಿ ಸರ್ ನನ್ನ ಶೃತಿ ಯಾಕೋ ಕೈಗೆ ಸಿಕ್ತಾ ಇಲ್ಲ'. `ದನಿ ಕೆಟ್ಟುಹೋಗಿದೆ. ಮಾತು ಕಡಿಮೆ ಮಾಡಿದೀನಿ..' `ಸರ್ ನನಗೆ ಆದಷ್ಟು ಶಂಕರ್ ಮಹಾದೇವನ್ರ ಹಾಡುಗಳನ್ನೇ ಕೊಡಿ ನನಗೆ ಅವರಂದ್ರೆ ಬಹಳಿಷ್ಟ. ಅವರ ಥರ ಆಗಬೇಕು ನನ್ನ ಆಸೆ' ಈ ತರಹ ನನ್ನ ಮುಂದೆ ನೀನು ಹೇಳಿದ ಅನೇಕ ಮಾತುಗಳು, ಗುರುಕುಲದಲ್ಲಿ ಊಟ ಮಾಡಿದ್ದು, ಕ್ರಿಕೆಟ್ ಆಡಿದ್ದು, ಓಡಾಡಿದ್ದು, ತಮಾಷೆ ಮಾಡಿದ್ದು ಇನ್ನು ನನ್ನ ಕಣ್ಣ ಮುಂದೆಯೆ ಇದೆ. ಎಲ್ಲವೂ ನನಪಿನಲ್ಲಿದೆ. ಮರೆಯುವುದಿಲ್ಲ ಕೂಡ!
ಮೂಸಿಕ್ ಸೂಪರ್ಸ್ಟಾರ್ ಪ್ರೋಗ್ರಾಮ್ ಮಾಡೋವಾಗ ನಾನು, ಪರಮಾನಂದ ಹಾಗೂ ಆಂಕರ್ ಪ್ರವೀಣ್ ಆದಿತ್ಯನಿಗೆ ಒಂದೋಳ್ಳೆ ಹೆಸರಿಡಬೇಕು ಅಂತ ಯೋಚನೆ ಮಾಡುತ್ತಿದ್ದೇವು. ಆ ಹೆಸರು ಅವನ ಹೆಸರಿಗೂ, ಬಾಡಿಗೂ ತದ್ವಿರುದ್ದ ಆಗಿರಬೇಕು ಅಂತ ಅಂದುಕೊಂಡಾಗ ನೆನಪಾದದ್ದೆ ಆದಿತ್ಯನ ತೆಳ್ಳನೆಯ ದೇಹ ! ಅದಕ್ಕೆ ಹೆಸರಾಂತ ಬಾಕ್ಸರ್ ಮೈಕ್ ಟೈಸನ್ ಬಾಡಿಗೂ ಆದಿತ್ಯನ ಬಾಡಿಗೂ ಲಿಂಕ್ ಕೊಟ್ಟು ಆದಿಗೆ `ಮೈಕ್ ಟೈಸನ್' ಅಂತ ಹೆಸರಿಟ್ಟೇವು. ಟೈಸನ್ ಅನ್ನುವ ನಿಕ್ನೇಮ್ ಪ್ರೋಗ್ರಾಂ ಮುಗಿಯುವವರೆಗೂ ಕ್ಯಾಚಿಯಾಗಿತ್ತು. ಜೊತೆಗಿದ್ದದ್ದು ಹಲವು ತಿಂಗಳುಗಳಾಗಿದ್ದರೂ ಜೊತೆಗಿನ, ಓಡನಾಟ, ಪ್ರೀತಿ, ಮುನಿಸು, ಹೇಳಿದ ನೂರಾರು `ಸಾರಿ ' ಅನ್ನುವ ಪದಗಳು, ಎಲ್ಲವೂ ನನ್ನ ನೆನಪಿನಲ್ಲಿದೆ.
ಆದಿ ನನ್ನ ನಿನ್ನ ಒಡನಾಟ ಆದದ್ದು ನಾನು ಸುವರ್ಣ ಚಾನೆಲ್ನ ಸ್ವಯಂವರ ಕಾರ್ಯಕ್ರಮದ ಮೂಲಕ. ನಾನು ಆ ಶೋನ ಅಸೋಸಿಯೇಟ್ ಆಗಿದ್ದೆ. ನೀನು ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದೆ. ಅದಕ್ಕೂ ಮುಂಚೆ ನಾನು ಸ್ಟಾರ್ಸಿಂಗರ್ ಕಾರ್ಯಕ್ರಮದಲ್ಲಿ ಹಾಡಿದ್ದನ್ನು ಟೀವಿಯಲ್ಲಿ ನೋಡಿದ್ದೆ. ಅದರ ನಂತರ ನೀನು ಮ್ಯೂಸಿಕ್ ಸೂಪರ್ಸ್ಟಾರ್ ಪ್ರೊಗ್ರಾಂಗೆ ಬಂದಾಗ ನೀನು ಬಹಳ ಹತ್ತಿರದವನಾದೆ. ಅನೇಕ ಸಾರಿ ನಾನು `ನಿನಗೆ ಸರಿಯಾಗಿ ಸಂಗೀತದಲ್ಲಿ ಸೀರಿಯಸ್ನೆಸ್ ಇಲ್ಲ' ಅಂತ ಅನೇಕ ಸಾರಿ ನಿನಗೆ ಬಯ್ಯಿದ್ದೆ. ಕೆಲವು ಸಲ ಮುನಿಸಿಕೊಂಡಿದ್ವಿ.. ಆದರೂ ಸ್ವಲ್ಪ ಹೊತ್ತಿನಲ್ಲೇ ಆ ಮಾತುಗಳನ್ನು ಮರೆತು ಬಿಟ್ಟು ಎಲ್ಲರ ಜೊತೆ ಒಂದಾಗಿಬಿಡುತ್ತಿದ್ದೆ. ಗುರುಕುಲದ ಉಳಿದ ಎಲ್ಲ ನಿನ್ನ ಸ್ನೇಹಿತರನ್ನು ತುಂಬಾ ಇಷ್ಟಪಡುತ್ತಿದ್ದೆ. ಅದರಲ್ಲೂ ರಾಕ್ಸ್ಟಾರ್ ಶಿಲ್ಪಾಳನ್ನು ನನ್ನ ತಂಗಿ ಅಂತೆಲ್ಲಾ ಎಲ್ಲರೆದರೂ ಹೇಳುತ್ತಿದ್ದೆ. ನಿಮ್ಮ ಅಪ್ಪಮ್ಮನ ಬಗ್ಗೆ ಅಷ್ಟೊಂದು ಪ್ರೀತಿಯಿಂದ, ಹೆಮ್ಮೆಯಿಂದ ಹೇಳುತ್ತಿದ್ದ ನೀನು, ಈಗ ಯಾಕೆ ಬಿಟ್ಟು ಹೋಗುವಾಗ ಅಪ್ಪಮ್ಮ ನೆನಪಾಗಲಿಲ್ಲವೇ! ಸಂಗೀತದಲ್ಲಿ ದೊಡ್ಡ ಸಿಂಗರ್, ಡೈರೆಕ್ಟರ್ ಆಗಬೇಕೆಂದು ಹೇಳುತ್ತಿದ್ದ ನಿನಗೆ ಶಂಕರ್ ಮಹಾದೇವನ್ ಅಂದರೆ ಪ್ರಾಣ! ಒಮ್ಮೆಯಾದರೂ ಅವರ ಜೊತೆ ಹಾಡಬೇಕೆಂದು ನಿನ್ನ ಕನಸಾಗಿತ್ತು, ಅದೆಷ್ಟು ಬಾರಿ ಇದನ್ನು ನನ್ನ ಹತ್ತಿರ ಹೇಳೆಕೊಂಡಿದ್ದಿಯೋ! ಗುರುಕಿರಣ್ ನನಗೆ ಜಾಸ್ತಿ ಚಾನ್ಸ್ ಕೊಟ್ಟಿದ್ದಾರೆ ಅಂತೆಲ್ಲಾ ಹೇಳುತ್ತಿದ್ದ ನೀನು, ಗುರುಜಿನೇ ನನ್ನ ಗಾಡ್ಫಾದರ್ ಅನ್ನುತ್ತಿದ್ದೆ. ಯಾಕೆ ಇಷ್ಟು ಚಿಕ್ಕವಯಸ್ಸಿನಲ್ಲೆ ಆತುರದ ನಿರ್ಧಾರ ತೆಗದುಕೊಂಡಿರುವುದು ಏಷ್ಟು ಸರಿ ಆದಿ ?
ಆತುರದ ನಿರ್ಧಾರ ನಿನ್ನ ಜೀವನವನ್ನೇ ತೆಗೆದುಕೊಂಡುಬಿಟ್ಟಿದೆಯಲ್ಲ ! ಆ ಕ್ಷಣವನ್ನು ದಾಟಿದ್ದರೆ ನಿನಗೆ ಖಂಡಿತ ಆ ಥರದ ನಿರ್ಧಾರವನ್ನು ನಿನ್ನ ಜನುಮದಲ್ಲಿ ತೆಗೆದುಕೊಳ್ಳುತ್ತಿರಲಿಲ್ಲ. ನಿನ್ನನ್ನು ಇಷ್ಟಪಡುವ, ಅಪ್ಪ,ಅಮ್ಮ, ಅಕ್ಕ, ನಿನ್ನ ಸ್ನೇಹಿತರು, ಅಭಿಮಾನಿಗಳು ಎಲ್ಲರನ್ನೂ ಬಿಟ್ಟು ಅಗಲಿ ಹೋಗಿರುವುದು ನಿಜಕ್ಕೂ ಕಾಡುವ ನೆನಪಂತೂ ಸತ್ಯ !
ಆದಿತ್ಯ ಖಂಡಿತ ನೀನು ಮಾಡಿದ್ದು ತಪ್ಪು. ಯಾರೇ ಆಗಲಿ ಅಪ್ಪಮ್ಮನಿಗೆ ಈ ತರಹದ ಶಿಕ್ಷೆಯನ್ನು ಕೊಡಬಾರದು. ನೀನು ಕೊಟ್ಟ ನೋವು ಅವರನ್ನು ಸಾಯುವರೆಗೂ ಕಾಡುತ್ತದೆ. ಇದು ನಿನ್ನೊಬ್ಬನ ಕಥೆಯಲ್ಲ. ನೀನು ಮಾಡಿದ ತಪ್ಪು ಇತರರಿಗೂ ಮಾದರಿಯಾಗಬೇಕು. ಯಾರು ಖಂಡಿತ ಈ ತರಹದ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಏಷ್ಟೇ ಆದರೂ ಅವರು ಹೆತ್ತವರು, ಬೈದರೂ, ತೆಗೆಳಿದರೂ ಅದು ನಮಗೆ ತಾನೆ! ನಮ್ಮ ಮನಸ್ಸಿಗಲ್ಲವಲ್ಲ ! ಖಂಡಿತ ನೀನೇ ನಿನ್ನ ಅಪ್ಪಮ್ಮನ ನೆಮ್ಮದಿಯನ್ನು,ಶಾಂತಿಯನ್ನು ಯಾವ ರೂಪದಲ್ಲಿ ಬಂದಾದರೂ ನೀಡು ಅಷ್ಟೇ. ನಿನ್ನ ನೆನಪು ಅವರನ್ನು ಕಾಡದಿದ್ದರೆ ಸಾಕಷ್ಟೇ.
ಮಾನವಧರ್ಮ ದೊಡ್ಡದು ಅಂತ ಪುರಂದರದಾಸರು ಹೇಳಿದ್ದಾರೆ. ಮಾನವರಾಗಿ ಹುಟ್ಟಿರುವುದೆ ನಮ್ಮ ಪುಣ್ಯ, ಸಾಧನೆ ಮಾಡಲಿ, ಮಾಡದೇ ಇರಲಿ, ಇರುವಷ್ಟು ದಿನ ಒಡಲಿನಲ್ಲಿ ಬಾಳಬೇಕಷ್ಟೇ. ಕಷ್ಟವೋ, ಸುಖವೋ ಅದರ ಸವಿಯನ್ನ ಉಣ್ಣಲೇಬೇಕು.

:(:( hegidda sir avnu ..
ReplyDelete